ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಅರಣ್ಯ ಇಲಾಖೆಯಿಂದ ಕಾಡಾನೆಗೆ ಅಳವಡಿಸಿದ ಬ್ರಾಂಕ್ರಾಡ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆಲ ಜೀವನ್ ಕುಡಿಯುವ ನೀರಿನ ಕಾಮಗಾರಿಯಲ್ಲಿ ಕಳಪೆಯಾಗಿದೆ. ಬಡವರಿಗೆ ನೀರು ಸಿಗುತ್ತಿಲ್ಲ. ತೋಟಗಾರಿಕೆ ಇಲಾಖೆಯಲ್ಲಿ ಬೆಳೆಗಾರರಿಗೆ ನೀಡುವ ಕರಿಮೆಣಸು, ಗಿಡ ಹೊರ ಜಿಲ್ಲೆಗೆ ರವಾನೆಯಾಗಿದೆ ಎಂಬ ಗಂಭೀರ ಚರ್ಚೆಗೆ ಗ್ರಾಸ ಒದಗಿಸಿತು.
ಕಾಜೂರು ಅರಣ್ಯ ವಸತಿ ಗೃಹದ ಬಳಿ ಬಸ್ ನಿಲ್ದಾಣದಲ್ಲಿ ಕಾಡಾನೆಗೆ ತಡೆಗಟ್ಟುವ ರೈಲ್ವೆ ಬ್ಯಾರಿಕೇಡ್ ರಚಿಸಲಾಗಿದೆ. ಇದರಿಂದ ಕಾಡಾನೆ ದಾಳಿಗೆ ಸಾರ್ವಜನಿಕರು ವಿದ್ಯಾರ್ಥಿಗಳು ಈ ಭಾಗದಲ್ಲಿ ಸಂಚರಿಸಲು ತೊಂದರೆಯಾಗಿದೆ ಎಂದು ಎಂ.ಕೆ.ಮೋಹನ್ ಪ್ರಸ್ತಾಪಿಸಿದರು. ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ತೋಟಗಾರಿಕೆ ಇಲಾಖೆಯಲ್ಲಿ ಬೆಳೆಗಾರರಿಗೆ ನೀಡುವ ಕರಿಮೆಣಸು ಗಿಡ ನೈಜ ಬೆಳೆಗಾರರಿಗೆ ಸಿಗುತ್ತಿಲ್ಲ. ಹೊರ ಜಿಲ್ಲೆಗೆ ಲಾರಿಯಲ್ಲಿ ಸಾಗಿಸಲಾಗಿದೆ ಎಂದು ಪುಚ್ಚಿಮಂಡ ಮೋಹನ್ ಆರೋಪಿಸಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಕಂದಾಯ ಇಲಾಖೆ, ಆರೋಗ್ಯ, ಆಹಾರ, ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.