ಅಯೋಧ್ಯೆ ಹಿಂದೂಗಳ ಶ್ರದ್ಧಾಭಕ್ತಿ ಕೇಂದ್ರ: ಮಾಜಿ ಶಾಸಕ ರಾಜಶೇಖರ ಶೀಲವಂತ

KannadaprabhaNewsNetwork |  
Published : Jan 24, 2025, 12:45 AM IST
ಪೋಟೊ:23ಜಿಎಲ್ಡಿ3- ಗುಳೇದಗುಡ್ಡ ಪಟ್ಟಣದ ಕಮತಗಿ  ಸರ್ಕಲ್ ದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೊರ್ಚಾ ಘಟಕದ  ವತಿಯಿಂದ ರಾಮ ಮಂದಿರ ನಿರ್ಮಾಣವಾಗಿ ಒಂದು ವರ್ಷವಾಗಿದ್ದರ ಪ್ರಯುಕ್ತ ಹಮ್ಮಿಕೊಂಡ ವರ್ಷಾಚರಣೆ ಕಾರ್ಯಕ್ರಮ ನಡೆಯಿತು.   | Kannada Prabha

ಸಾರಾಂಶ

ರಾಮ ಮಂದಿರ ನಿರ್ಮಾಣದ ಕುರಿತಾಗಿ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡೋಣ. ನಮ್ಮ ಸಂಸ್ಕೃತಿ ಸಂಪ್ರದಾಯ ಎತ್ತಿ ಹಿಡಿಯುವ ಕೆಲಸ ಮಾಡಬೇಕು

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಹಿಂದೂಗಳಿಗೆ ಅಯೋಧ್ಯೆಯು ಶ್ರದ್ಧಾ ಹಾಗೂ ಧಾರ್ಮಿಕ ಕೇಂದ್ರವಾಗಿದೆ. ರಾಮ ಮಂದಿರ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಲಾಲಕೃಷ್ಣ ಅಡ್ವಾನಿಯವರು. ಅವರು ಇಡೀ ದೇಶದ ತುಂಬೆಲ್ಲ ರಥಯಾತ್ರೆ ಮೂಲಕ ಸಂಚರಿಸಿ, ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿದರು. ವಿಶ್ವ ಹಿಂದೂ ಪರಿಷತ್ ಹೋರಾಟ ಕೈಗೊಂಡರು ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.

ಪಟ್ಟಣದ ಕಮತಗಿ ಸರ್ಕಲ್‌ನಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೊರ್ಚಾ ಘಟಕದ ವತಿಯಿಂದ ನಡೆದ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣದ ಕುರಿತಾಗಿ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡೋಣ. ನಮ್ಮ ಸಂಸ್ಕೃತಿ ಸಂಪ್ರದಾಯ ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಹೇಳಿದರು.

ಮುಖಂಡರಾದ ಕಮಲು ಮಾಲಪಾಣಿ, ಬಾಲು ನಿರಂಜನ, ರವಿ ಅಂಗಡಿ, ನಗರ ಘಟಕದ ಅಧ್ಯಕ್ಷ ಪ್ರಶಾಂತ ಜವಳಿ, ಭುವನೇಶ ಪೂಜಾರ, ಶಿವು ಬಾದೋಡಗಿ, ಶೀತಲ ಸತ್ತಿಗೇರಿ, ಕೊಣ್ಣೂರ, ಶಿವು ತುಪ್ಪದ, ಪರಶುರಾಮ ಮದಕಟ್ಟಿ, ಗಣೇಶ ನನ್ನಾ, ಪ್ರವೀಣ ಪಟ್ಟಣಶೆಟ್ಟಿ, ಶಿವು ಗೋತಗಿ, ಕೃಷ್ಣಾ ಬೀಳಗಿ, ಪ್ರಭು ಕಳ್ಳಿಗುಡ್ಡ, ವಿರೂಪಾಕ್ಷ ಹಿರೇಮಠ, ಷಡಕ್ಷರಯ್ಯ ಹಿರೇಮಠ, ಮಂಜು ನೇಮದಿ, ಲಕ್ಷ್ಮಣ ಭಜಂತ್ರಿ, ಮುತ್ತುರಾಜ ಉಂಕಿ, ತಿಮ್ಮನ್ನಾ ಬಂಡಿವಡ್ಡರ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಪ್ರ ಸಮುದಾಯದ ಯುವಕರು ಸಂಘಟಿತರಾಗಿ
ಚಿರತೆ ದಾಳಿಗೆ ಮಹಿಳೆ ಬಲಿ