ಅಯೋಧ್ಯೆ ಶ್ರೀರಾಮ ಮಂದಿರ ದೇಶದ ಹೆಮ್ಮೆ: ಸಂಸದ ನಳಿನ್ ಕುಮಾರ್

KannadaprabhaNewsNetwork | Published : Jan 16, 2024 1:46 AM

ಸಾರಾಂಶ

ಕೊಯಿಲ ಹನುಮಾನ್ ನಗರದಲ್ಲಿ ರಾಯಿ-ಕೊಯಿಲ ವಿವೇಕಾನಂದ ಚಾರಿಟೇಬಲ್ ನೇತೃತ್ವ ಮತ್ತು ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಸಹಭಾಗಿತ್ವದಲ್ಲಿ ‘ಮಹಾಚಂಡಿಕಾಯಾಗ ಮತ್ತು ರಾಮತಾರಕ ಮಂತ್ರ ಹೋಮ’ ಕಾರ್ಯಕ್ರಮದ ಧಾರ್ಮಿಕ ಸಭೆ ನಡೆಯಿತು. ಸಂಸದ ನಳಿನ್‌ ಕುಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳಕಳೆದ ಹಲವಾರು ವರ್ಷಗಳಲ್ಲಿ ಲಕ್ಷಾಂತರ ಮಂದಿ ರಾಮಭಕ್ತರ ಹೋರಾಟದಿಂದ ಪುನರ್ ನಿರ್ಮಾಣಗೊಂಡ ಅಯೋಧ್ಯೆ ಶ್ರೀರಾಮ ಮಂದಿರ ದೇಶದ ಸಮಸ್ತ ಹಿಂದೂ ಸಮಾಜದ ಹೆಮ್ಮೆಯ ಪ್ರತೀಕವಾಗಿದೆ. ದೇಶದ ಸಮಸ್ತ ನಾಗರಿಕರ ಪ್ರತಿನಿಧಿಯಾಗಿ ಜಗತ್ತು ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ಅವರು ವೃತಾಚರಣೆ ಕೈಗೊಂಡು ಮಂದಿರ ಲೋಕಾರ್ಪಣೆಗೆ ಸನ್ನದ್ಧರಾಗಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಇಲ್ಲಿನ ಕೊಯಿಲ ಹನುಮಾನ್ ನಗರದಲ್ಲಿ ರಾಯಿ-ಕೊಯಿಲ ವಿವೇಕಾನಂದ ಚಾರಿಟೇಬಲ್ ನೇತೃತ್ವ ಮತ್ತು ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಸಹಭಾಗಿತ್ವದಲ್ಲಿ ಭಾನುವಾರ ನಡೆದ ‘ಮಹಾಚಂಡಿಕಾಯಾಗ ಮತ್ತು ರಾಮತಾರಕ ಮಂತ್ರ ಹೋಮ’ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬೆಂಗಳೂರು ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾದರೆ ಕಾಶಿ, ಮಥುರಾ ಮತ್ತಿತರ ಪುಣ್ಯಕ್ಷೇತ್ರಗಳು ಅಯೋಧ್ಯೆ ಮಾದರಿಯಲ್ಲಿ ಪುನರುತ್ಥಾನಗೊಳ್ಳಲಿದೆ ಎಂದರು.

ಚಿತ್ರನಟ ಅರವಿಂದ ಬೋಳಾರ್ ಮಾತನಾಡಿ, ಹಿಂದುತ್ವ ವಿಚಾರಧಾರೆಯಿಂದ ಸುಸಂಸ್ಕೃತ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್, ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಅಧ್ಯಕ್ಷ ಎಂ. ದುರ್ಗಾದಾಸ್ ಶೆಟ್ಟಿ ಮಾವಂತೂರು, ಬಜರಂಗದಳ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ನರಸಿಂಹ ಶೆಟ್ಟಿ ಮಾಣಿ ಶುಭ ಹಾರೈಸಿದರು.

ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಬಾಲಭವನ ಸೊಸೈಟಿ ಮಾಜಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಬೂಡ ಮಾಜಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಉದ್ಯಮಿ ಜಯಪ್ರಕಾಶ್ ಜೆ.ಪಿ., ರಂಜನ್ ಕುಮಾರ್ ಶೆಟ್ಟಿ ಅರಳ, ಕೃಷ್ಣ ಸುವರ್ಣ ಬೆಂಗಳೂರು, ರೂಪಾ ರಾಜೇಶ ಶೆಟ್ಟಿ ಸೀತಾಳ, ಬಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು, ರಾಯಿ ಗ್ರಾ.ಪಂ.ಉಪಾಧ್ಯಕ್ಷೆ ಗುಣವತಿ ರಾಜೇಶ್, ಅರಳ ಗ್ರಾ.ಪಂ.ಅಧ್ಯಕ್ಷೆ ದೇವಕಿ ಧನ್ಯಾ, ಉಪಾಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಟ್ರಸ್ಟ್ ಅಧ್ಯಕ್ಷ ಮಧುಕರ ಬಂಗೇರ ರಾಯಿ, ಸಮಿತಿ ಅಧ್ಯಕ್ಷ ಪ್ರವೀಣ ಅಂಚನ್ ಕೊಯಿಲ, ಪ್ರಮುಖರಾದ ಗೀತಾ ಶೆಟ್ಟಿ ಮಾವಂತೂರು, ಅಜಿತ್ ಹೋರಂಗಳ, ದಿನೇಶ ಶೆಟ್ಟಿ ಮಡಂದೂರು, ರವೀಂದ್ರ ಪೂಜಾರಿ ಬದನಡಿ, ಹರೀಶ ಆಚಾರ್ಯ ರಾಯಿ, ಕೆ.ಪರಮೇಶ್ವರ ಪೂಜಾರಿ ರಾಯಿ, ಬಿ.ದಯಾನಂದ ಸಪಲ್ಯ, ಸಂಪತ್ ಶಾಂತಿಪಲ್ಕೆ, ವಸಂತ ಕೈರೋಳಿ, ಭೋಜ ಶೆಟ್ಟಿ ಹೋರಂಗಳ ಮತ್ತಿತರರು ಇದ್ದರು.

ಇದೇ ವೇಳೆ ಮಾವಂತೂರು ಬಲವಂಡಿ ಕ್ಷೇತ್ರದ ಗಡಿಪ್ರಧಾನ ಎಂ.ದುರ್ಗದಾಸ್ ಶೆಟ್ಟಿ, ದೈವ ಪರಿಚಾರಕ ಉಮೇಶ ಡಿ.ಎಂ.ಅರಳ, ಯುವ ಭಾಗವತ ಧನಂಜಯ ಕೊಯಿಲ, ಹಿನ್ನೆಲೆ ಗಾಯಕಿ ನಂದಿನಿ ಗಾಣಿಗ ರಾಯಿ ಇವರಿಗೆ ಸನ್ಮಾನ ಮತ್ತು ರಾಜ್ಯಮಟ್ಟದ ಹಗ್ಗ ಜಗ್ಗಾಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಮಿತಿ ಸಂಚಾಲಕ ವಸಂತ ಕುಮಾರ್ ಅಣ್ಣಳಿಕೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು. ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.

ಸಂಜೆ ಕಟೀಲು ಮೇಳದಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Share this article