ಉತ್ತಮ ಜೀವನಶೈಲಿಗೆ ಆಯುರ್ವೇದ ಪದ್ಧತಿ ಅನಿವಾರ್ಯ: ಮಂಜುಳಾ ನಾಯಕ

KannadaprabhaNewsNetwork |  
Published : Sep 28, 2026, 02:15 AM IST
ಸಿದ್ದಾಪುರದಲ್ಲಿ ಆಯುರ್ವೇದ ದಿನಾಚರಣೆಯನ್ನು ಮಂಜುಳಾ ನಾಯಕ್ ಉದ್ಘಾಟಿಸಿದರು. | Kannada Prabha

ಸಾರಾಂಶ

ದೇಶದ ಆಯುರ್ವೇದ ಇಡೀ ವಿಶ್ವಕ್ಕೆ ಮಾದರಿ ಆಗಿದೆ. ಇವತ್ತಿನ ಜೀವನಕ್ಕೆ ಆಯುರ್ವೇದವೂ ಮುಖ್ಯ.

ಸಿದ್ದಾಪುರ: ಸ್ಥಳೀಯ ಧನ್ವಂತರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋದನಾ ಕೇಂದ್ರದ ಆಶ್ರಯದಲ್ಲಿ ಆಯುರ್ವೇದ ಮತ್ತು ಯೋಗದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ಜಾಥಾ ನಡೆಯಿತು.

ತಹಸೀಲ್ದಾರ್ ಮಂಜುಳಾ ನಾಯಕ ಕಾರ್ಯಕ್ರಮ ಹಾಗೂ ಜಾಥಾ ಉದ್ಘಾಟಿಸಿ ಮಾತನಾಡಿ, ದೇಶದ ಆಯುರ್ವೇದ ಇಡೀ ವಿಶ್ವಕ್ಕೆ ಮಾದರಿ ಆಗಿದೆ. ಇವತ್ತಿನ ಜೀವನಕ್ಕೆ ಆಯುರ್ವೇದವೂ ಮುಖ್ಯ. ಯೋಗ, ಪ್ರಾಣಾಯಾಮಗಳನ್ನು ನಿತ್ಯ ಮಾಡುವುದರಿಂದ ರೋಗ ಬಾರದಂತೆ ತಡೆಯಬಹುದು. ಸುಖ ಜೀವನಕ್ಕೆ ಆಯುರ್ವೇದ ಸೂಕ್ತ ಹಾಗೂ ಅನಿವಾರ್ಯವಾಗಿದೆ. ಆಯುರ್ವೇದದ ಕುರಿತು ತಿಳಿದುಕೊಳ್ಳುವುದು ಮುಖ್ಯ. ಈ ಕುರಿತು ಜಾಗೃತಿ ಅತ್ಯವಶ್ಯ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ರೂಪಾ ಭಟ್ಟ ಅವರು, ಇಂದಿನ ದಿನದಲ್ಲಿ ಆಯುರ್ವೇದದ ಅನಿವಾರ್ಯತೆ ಹಾಗೂ ಜಾಗೃತಿ ಕುರಿತು ಮಾತನಾಡಿದರು. ತಾಲೂಕು ಪಂಚಾಯಿತಿ ಇಒ ದೇವರಾಜ ಹಿತ್ತಲಕೊಪ್ಪ ಆಯುರ್ವೇದದ ಮಹತ್ವದ ಕುರಿತು ಮಾತನಾಡಿದರು.

ಸಂಸ್ಥೆಯ ಹಿರಿಯ ನಿರ್ದೇಶಕ ಜಿ.ಕೆ. ಹೆಗಡೆ ಗೋಳಗೋಡ ಉಪಸ್ಥಿತರಿದ್ದರು. ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ ದೊಡ್ಮನೆ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ರಾಘವೇಂದ್ರ ಎಲ್. ಸ್ವಾಗತಿಸಿದರು. ಡಾ. ಸ್ಫೂರ್ತಿ ವಂದಿಸಿದರು. ಆಯುರ್ವೇದದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಆಯುರ್ವೇದ ಮಹಾವಿದ್ಯಾಲಯದಿಂದ ಹೊರಟ ಜಾಗೃತಿ ಜಾಥಾ ತಿಮ್ಮಪ್ಪ ನಾಯಕ ವೃತ್ತ, ರಾಮಕೃಷ್ಣ ಹೆಗಡೆ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ನಡೆಯಿತು.

ಈ ಸಂದರ್ಭದಲ್ಲಿ ಸ್ವಚ್ಛತೆ, ಪೌಷ್ಟಿಕ ಆಹಾರ, ಯೋಗ, ಔಷಧೀಯ ಸಸ್ಯಗಳು, ಪರಸಿರ ಸಂರಕ್ಷಣೆ ಮತ್ತು ರೋಗನಿರೋಧಕ ಜೀವನ ಶೈಲಿಗೆ ಸಂಬಂಧಿಸಿದ ಫಲಕಗಳು, ಜಾಗೃತಿ ಸಂದೇಶಗಳನ್ನು ಹಾಗೂ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವ್ಯಕ್ತಿತ್ವಗಳನ್ನು ಪ್ರದರ್ಶಿಸಲಾಯಿತು.

ಜಾಥಾದಲ್ಲಿ ತಹಸೀಲ್ದಾರ್ ಮಂಜುಳಾ ನಾಯ್ಕ, ಶಶಿಭೂಷಣ ಹೆಗಡೆ, ದೇವರಾಜ ಹಿತ್ತಲಕೊಪ್ಪ, ಡಾ. ರೂಪಾ ಭಟ್ಟ, ಪಿಎಸ್ಐ ನಾಗರಾಜ ಬಿ., ಪ್ರೊ. ರಾಘವೇಂದ್ರ ಎಲ್., ಉಪನ್ಯಾಸಕರು, ವಿದ್ಯಾರ್ಥಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ ಶಾಸಕರಿಗೇ ಸರ್ಕಾರದ ಮೇಲೆ ವಿಶ್ವಾಸವಿಲ್ಲ: ಮಟ್ಟಾರು
ಕುಟುಂಬದ ಭದ್ರತೆಗೆ ಮನೆಯ ಹಿರಿಯರು ಬೇರು ಇದ್ದಂತೆ : ನ್ಯಾ. ರಾಮಲಿಂಗಪ್ಪ