)
ಧಾರವಾಡ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 32 ಜಿಲ್ಲಾ ಘಟಕಗಳ ಸಾವಿರಾರು ಆಯುಷ್ ವೈದ್ಯರು ರಾಯಚೂರಿನಲ್ಲಿ ಸೆ. 22ರಂದು ನಡೆಯಲಿರುವ ‘ರಾಯಚೂರು ಚಲೋ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಯುಷ್ ವೈದ್ಯರ ವೃತ್ತಿಪರ ಹಕ್ಕು, ಸೇವಾ ಭದ್ರತೆ ಹಾಗೂ ಗ್ರಾಮೀಣ ಮತ್ತು ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಅವರ ಸಮರ್ಪಕ ಬಳಕೆಗೆ ಸಂಬಂಧಿಸಿದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ ಎಂದರು.
ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಕಾನೂನುಬದ್ಧವಾಗಿ ಆಧುನಿಕ ಔಷಧಗಳ ಬಳಕೆಗೆ ಸೂಕ್ತ ವ್ಯವಸ್ಥೆ, ಎನ್‌ಸಿಐಎಸ್‌ಎಂ ಹಾಗೂ ಎನ್‌ಸಿಎಚ್ ಕಾಯ್ದೆಗಳ ಆಶಯದಂತೆ ವೃತ್ತಿಪರ ಹಕ್ಕುಗಳ ಜಾರಿ, ಕೆಪಿಎಂಇ ಕಾಯ್ದೆಯಡಿ ದೂರುಗಳ ಕಾನೂನುಬದ್ಧ ಪರಿಶೀಲನೆ, ಕೆಪಿಎಂಇ ನೋಂದಣಿ-ನವೀಕರಣ ಹಾಗೂ Fire NOC ಸಮಸ್ಯೆಗಳಿಗೆ ಸರಳ ನಿಯಮ ರೂಪಿಸಬೇಕು ಎಂದು ಆಗ್ರಹಿಸಲಾಗಿದೆ. ಸರ್ಕಾರಿ ಹಾಗೂ ಕೆಪಿಎಂಇ ಸಂಬಂಧಿತ ಸಮಿತಿಗಳಲ್ಲಿ ಆಯುಷ್ ವೈದ್ಯರಿಗೆ ಸೂಕ್ತ ಪ್ರತಿನಿಧಿತ್ವ ನೀಡಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಮೋಹನ ಬಿರಾದಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಆನಂದ ಕಿರಿಶಾಳ ನೇತೃತ್ವದಲ್ಲಿ ಹೋರಾಟ ನಡೆಯಲಿದೆ. ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ಡಾ. ಎಸ್.ಕೆ. ಬನ್ನಿಗೋಳ, ರಾಜ್ಯ ಪದಾಧಿಕಾರಿಗಳಾದ ಡಾ. ಅಮಿತ್ ಎಂ.ಎಸ್., ಡಾ. ಮಹಾವೀರ ಹಾವೇರಿ, ಡಾ. ಸೋಮು ಹುದ್ದಾರ, ಡಾ. ಪ್ರಭಾಕರ ಮಾಂಡ್ರೆ, ಡಾ. ಸಂದೀಪ ಕುಲಕರ್ಣಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.