ಕಿರವತ್ತಿಯಲ್ಲಿ ಆಯುಷ್ ಸೇವಾ ಗ್ರಾಮ ನಾಮಫಲಕ ಅನಾವರಣ

KannadaprabhaNewsNetwork |  
Published : Feb 24, 2024, 02:31 AM IST
ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ 'ಆಯುಷ್ ಸೇವಾ ಗ್ರಾಮ'ದ ನಾಮಫಲಕ ಅನಾವರಣಗೊಳಿಸಲಾಯಿತು. | Kannada Prabha

ಸಾರಾಂಶ

ಸಾರ್ವಜನಿಕರ ಆರೋಗ್ಯ ಸೇವೆಗಾಗಿ ಆಯುಷ್ ಇಲಾಖೆ ಮಹತ್ವದ ಪಾತ್ರ ವಹಿಸುತ್ತಿದ್ದು, ಇಲಾಖೆಯಲ್ಲಿ ಸಿಗುವ ಆರೋಗ್ಯ ಸೇವೆಯನ್ನು ಸಾರ್ವಜನಿಕರು ಪೂರ್ಣಪ್ರಮಾಣದಲ್ಲಿ ಪಡೆದುಕೊಳ್ಳಬೇಕು.

ಯಲ್ಲಾಪುರ:

ತಾಲೂಕಿನ ಕಿರವತ್ತಿಯಲ್ಲಿ ಫೆ. ೨೧ರಂದು ಉಮ್ಮಚಗಿಯ ಆಯುರ್ವೇದ ಚಿಕಿತ್ಸಾಲಯದ ಆಶ್ರಯದಲ್ಲಿ ಆಯುಷ್ ಇಲಾಖೆಯು ೨೦೨೩-೨೪ನೇ ಸಾಲಿನ ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಯೋಜನೆಯಡಿ ಆರಂಭಿಸಿದ ''''ಆಯುಷ್ ಸೇವಾ ಗ್ರಾಮ''''ದ ನಾಮಫಲಕವನ್ನು ಸೇವಾಗ್ರಾಮದ ಉಸ್ತುವಾರಿ ಅಧಿಕಾರಿ ಡಾ. ಜಗದೀಶ ಯಾಜಿ ಅನಾವರಣಗೊಳಿಸಿದರು. ಆನಂತರ ನಡೆದ ಸಭಾಕಾರ್ಯಕ್ರಮವನ್ನು ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಲಿತಾ ಯು.ಎಚ್. ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರ ಆರೋಗ್ಯ ಸೇವೆಗಾಗಿ ಆಯುಷ್ ಇಲಾಖೆ ಮಹತ್ವದ ಪಾತ್ರ ವಹಿಸುತ್ತಿದ್ದು, ಇಲಾಖೆಯಲ್ಲಿ ಸಿಗುವ ಆರೋಗ್ಯ ಸೇವೆಯನ್ನು ಸಾರ್ವಜನಿಕರು ಪೂರ್ಣಪ್ರಮಾಣದಲ್ಲಿ ಪಡೆದುಕೊಳ್ಳಬೇಕು ಎಂದರು. ಅತಿಥಿಗಳಾಗಿದ್ದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಜೆ.ಬಿ. ನರೋಟಿ ಮಾತನಾಡಿ, ತಾಲೂಕಿನಲ್ಲಿ ಆಯುಷ್ ಇಲಾಖೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಮಹೇಶ ಗೋಕರ್ಣ, ಗ್ರಾಪಂ ಸದಸ್ಯೆ ತೆರೆಸಾ ಫನಾಂಡೀಸ್ ಮಾತನಾಡಿದರು.ಗ್ರಾಪಂ ಸದಸ್ಯರಾದ ರೆಹಮತ್ ಅಬ್ಬೀಗೇರಿ, ರಾಜು ಉಪ್ಪಿನ, ರೇಣುಕಾ ಹೋಳಿ, ಮೇಘನಾ ಕುಲ್ಲಮಕರ್, ಅಕ್ಕಮ್ಮ ಹೋಳಿ, ರಸೂಲ್ ಮುಜಾವರ್, ಸುನೀಲ್ ಕಾಂಬ್ಳೆ, ಮುನೀರ್ ಪಟೇಲ್, ತಾಲೂಕು ಗ್ರಾಮ ಆರೋಗ್ಯ ಸಂಯೋಜಕ ಮುಬಿನಾ ಸಯ್ಯದ್ ಮತ್ತಿತರರು ಉಪಸ್ಥಿತರಿದ್ದರು.ಸಂಗೀತಾ ಕೊಕ್ರೆ ಅಧ್ಯಕ್ಷತೆ ವಹಿಸಿದ್ದರು. ಪ್ರಿಯಾ ಹೆಗಡೆ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಘಟಕ ಉಮ್ಮಚಗಿ ಆಯುಷ್ ವೈದ್ಯಾಧಿಕಾರಿ ಡಾ. ಯೋಗೇಶ ಮಡಗಾಂವಕರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ಆಯ್ದ ಫಲಾನುಭವಿಗಳಿಗೆ ಆಯುಷ್ ಕಿಟ್ ಮತ್ತು ಔಷಧಿ ಸಸ್ಯಗಳನ್ನು ವಿತರಿಸಲಾಯಿತು. ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮುನ್ನೂರಕ್ಕೂ ಅಧಿಕ ಸಂಖ್ಯೆಯ ಫಲಾನುಭವಿಗಳು ಪಾಲ್ಗೊಂಡಿದ್ದರು. ತಜ್ಞವೈದ್ಯರಾದ ಜಗದೀಶ ಯಾಜಿ, ಯೋಗೇಶ ಮಡಗಾಂವಕರ್, ಭಾಗ್ಯಲಕ್ಷ್ಮೀ, ವಿಕ್ರಮ ದೇಶಭಂಡಾರಿ, ಚಂದ್ರಶೇಖರ, ಕಲಿಕಾ ವೈದ್ಯೆ ಸಾದಿಯಾ ಮತ್ತು ಪ್ರಿಯಾ ಆರೋಗ್ಯ ತಪಾಸಣೆ ನಡೆಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ