ಸಂಘಟನೆಯ ಮೂಲಕ ನೂರಾರು ಪುಸ್ತಕ ಪ್ರಕಟಿಸಿದ ಅಯ್ಯಪ್ಪ

KannadaprabhaNewsNetwork |  
Published : Nov 03, 2026, 03:00 AM IST
ಚಿತ್ರ : ಅಯ್ಯಪ್ಪ | Kannada Prabha

ಸಾರಾಂಶ

ಒಂದು ಸಂಘಟನೆಯ ಮೂಲಕ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರದೆ ಕನ್ನಡ, ಕೊಡವ, ಇಂಗ್ಲೀಷ್ ಸೇರಿ ವಿವಿಧ ಭಾಷೆಗಳಲ್ಲಿ ಸುಮಾರು 125ಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಎಲೆಮರೆ ಕಾಯಿಯಂತಿರುವ ಹಲವಾರು ಲೇಖಕರನ್ನು ಹುಟ್ಟು ಹಾಕುವಲ್ಲಿ ಶ್ರಮ ವಹಿಸಿದ್ದಾರೆ.

ವಿಘ್ನೇಶ್ ಎಂ. ಭೂತನಕಾಡು ಮಡಿಕೇರಿ: ಒಂದು ಸಂಘಟನೆಯ ಮೂಲಕ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರದೆ ಕನ್ನಡ, ಕೊಡವ, ಇಂಗ್ಲೀಷ್ ಸೇರಿ ವಿವಿಧ ಭಾಷೆಗಳಲ್ಲಿ ಸುಮಾರು 125ಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಎಲೆಮರೆ ಕಾಯಿಯಂತಿರುವ ಹಲವಾರು ಲೇಖಕರನ್ನು ಹುಟ್ಟು ಹಾಕುವಲ್ಲಿ ಶ್ರಮ ವಹಿಸಿದ್ದಾರೆ. ಕೊಡವ ಸಂಸ್ಕೃತಿ, ಆಚಾರ-ವಿಚಾರ, ಸಾಹಿತ್ಯ ಮತ್ತು ಕಲೆಗಳನ್ನು ಉತ್ತೇಜಿಸುವ ಹಾಗೂ ಸಂರಕ್ಷಿಸುವ ಉದ್ದೇಶದಿಂದ 2013ರಲ್ಲಿ ಕೊಡವ ಮಕ್ಕಡ ಕೂಟವನ್ನು ಹುಟ್ಟು ಹಾಕಿದ್ದಾರೆ. ಈ ಸಂಸ್ಥೆಯ ಮೂಲಕ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ ಪ್ರಕಟಣೆಗಳು ಮತ್ತು ಮಕ್ಕಳಿಗಾಗಿ ಕಾರ್ಯಾಗಾರಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಮಡಿಕೇರಿಯಲ್ಲಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆ ಸ್ಥಾಪನೆ, ಕೊಡವರ ಸಾಂಪ್ರದಾಯಿಕ ಹಕ್ಕುಗಳ ರಕ್ಷಣೆ ಮತ್ತು ಕೊಡಗಿನ ಹೆದ್ದಾರಿಗಳಿಗೆ ಪ್ರಮುಖ ಗಣ್ಯರ ಹೆಸರಿಡುವ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ.ಸಂಸ್ಕೃತಿ, ಪರಂಪರೆ ಉಳಿಸುವ ಕಾರ್ಯ: ಅಯ್ಯಪ್ಪ ಅವರು ಕಳೆದ ಎಂಟು ವರ್ಷದಿಂದಲೂ ಕೊಡವ ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಆಟ್ ಪಾಟ್ ಎಂಬ ವಿಶೇಷ ಶಿಬಿರವನ್ನು ನಡೆಸುವ ಮೂಲಕ ಕೊಡವ ನೃತ್ಯವಾದ ಉಮ್ಮತ್ತಾಟ್, ಕೋಲಾಟ್, ಕೊಂಬಾಟ್ ಮತ್ತಿತರ ಕಲೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌ ಕೇಸಲ್ಲಿ ಸರ್ಕಾರ ಉಳಿಸಿಕೊಳ್ಳಲು ತರಾತುರಿಯಲ್ಲಿ ಸಿದ್ದುಗೆ ಕ್ಲೀನ್‌ ಚಿಟ್‌: ಎಚ್ಡಿಕೆ
ಮಿಸ್ಟರ್‌ ಪ್ರಿಯಾಂಕ್‌, ನಿಮ್ಮ ಬಳಿ ಟ್ರೈಲರ್‌ ಇದ್ರೆ ನಮ್ಮಲ್ಲಿ ಬಳಿ ಪೂರಾ ಪಿಚ್ಚರ್‌ ಹೈ: ಎಚ್ಡಿಕೆ