ಸ್ಟಿಂಗ್‌ ಆಪರೇಷನ್‌ ಪ್ರಕರಣ ಸಂಬಂಧ ಇದು ಕೇವಲ ಟ್ರೈಲರ್‌, ಪಿಚ್ಚರ್‌ ಅಭಿ ಬಾಕಿ ಹೈ ಎಂಬ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ಹಮಾರೇ ಪಾಸ್‌ ಪೂರಾ ಪಿಚ್ಚರ್‌ ಹೈ ಎನ್ನುವ ಮುಖಾಂತರ ತಿರುಗೇಟು ನೀಡಿದ್ದಾರೆ.

ಬೆಂಗಳೂರು : ಸ್ಟಿಂಗ್‌ ಆಪರೇಷನ್‌ ಪ್ರಕರಣ ಸಂಬಂಧ ಇದು ಕೇವಲ ಟ್ರೈಲರ್‌, ಪಿಚ್ಚರ್‌ ಅಭಿ ಬಾಕಿ ಹೈ ಎಂಬ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ಹಮಾರೇ ಪಾಸ್‌ ಪೂರಾ ಪಿಚ್ಚರ್‌ ಹೈ (ನಮ್ಮ ಬಳಿ ಪೂರ್ಣ ಸಿನಿಮಾ ಇದೆ) ಎನ್ನುವ ಮುಖಾಂತರ ತಿರುಗೇಟು ನೀಡಿದ್ದಾರೆ.

ಇಂತಹ ಟ್ರೈಲರ್‌ ಎಷ್ಟು ನೋಡಿಲ್ಲ

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್‌ ಕಟ್ಟು ಕಥೆ ಎಂದ ಮೇಲೆ ಇದು ಕೇವಲ ಟ್ರೈಲರ್‌, ಪಿಕ್ಚರ್‌ ಅಭಿ ಬಾಕಿ ಹೈ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ನನ್ನ ಜೀವನದಲ್ಲಿ ಇಂತಹ ಟ್ರೈಲರ್‌ ಎಷ್ಟು ನೋಡಿಲ್ಲ ಎಂದು ವ್ಯಂಗ್ಯವಾಡಿದರು.

ಗಂಧದ ಕಡ್ಡಿ ಹಚ್ಚಿ ಪೂಜೆ ಮಾಡಲಿ

ನನ್ನ ಬಳಿ ತಾಂತ್ರಿಕ ಸಾಕ್ಷಿಗಳಿವೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಒಂದು ವೇಳೆ ಅವರ ಬಳಿ ಅಂತಹ ಸಾಕ್ಷಿಗಳಿದ್ದರೆ ಗಂಧದ ಕಡ್ಡಿ ಹಚ್ಚಿ ಪೂಜೆ ಮಾಡಲಿ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.