ಸ್ಚಿಂಗ್‌ ಆಪರೇಷನ್‌ ಬಗ್ಗೆ ಈವರೆಗೂ ಹೆಚ್ಚು ಮಾತನಾಡದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರಿಷ್ಠ ರಾಹುಲ್‌ ಗಾಂಧಿ ಸಮ್ಮುಖ ತಮ್ಮೆಲ್ಲ ಅಸಮಾಧಾನ, ಅತೃಪ್ತಿ, ಬೇಸರ ಹಾಗೂ ಆಕ್ರೋಶ ಹೊರಹಾಕಿದ್ದು, ಅಸಮರ್ಪಕವಾಗಿ ನಡೆದಿರುವ ತನಿಖೆ ಚುರುಕುಗೊಳಿಸಿ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲು ಮಾಡುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಲು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು/ದೆಹಲಿ : ಸ್ಚಿಂಗ್‌ ಆಪರೇಷನ್‌ ಬಗ್ಗೆ ಈವರೆಗೂ ಹೆಚ್ಚು ಮಾತನಾಡದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರಿಷ್ಠ ರಾಹುಲ್‌ ಗಾಂಧಿ ಸಮ್ಮುಖ ತಮ್ಮೆಲ್ಲ ಅಸಮಾಧಾನ, ಅತೃಪ್ತಿ, ಬೇಸರ ಹಾಗೂ ಆಕ್ರೋಶ ಹೊರಹಾಕಿದ್ದು, ಅಸಮರ್ಪಕವಾಗಿ ನಡೆದಿರುವ ತನಿಖೆ ಚುರುಕುಗೊಳಿಸಿ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲು ಮಾಡುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಲು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ಸೋಮವಾರ ರಾಹುಲ್ ಗಾಂಧಿ ಅವರನ್ನು ನೇರಾನೇರ ಭೇಟಿ ಮಾಡಿ ಸುದೀರ್ಘ ಕಾಲ ಚರ್ಚಿಸಿದ ಸಿದ್ದರಾಮಯ್ಯ ಅವರು, ನಿಮ್ಮ ಸೂಚನೆಯಂತೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ನಂತರವೂ ತಮ್ಮ ವಿರುದ್ಧ ಇಂತಹ ಷಡ್ಯಂತ್ರ ನಡೆದಿದೆ. ಇದಕ್ಕೆ ಕಾರಣಕರ್ತರು ಯಾರು ಎಂಬುದು ನನಗೆ ತಿಳಿಯಬೇಕು. ಹೀಗಾಗಿ ತನಿಖೆಯನ್ನು ಸಮರ್ಪಕವಾಗಿ ನಡೆಸುವಂತೆ ಸರ್ಕಾರಕ್ಕೆ ತಾಕೀತು ಮಾಡಬೇಕು ಎಂದು ಆಗ್ರಹಿಸಿದರು.

ಅಲ್ಲದೆ, ಈ ಷಡ್ಯಂತ್ರದಿಂದ ನನ್ನ ವರ್ಚಸ್ಸು ಹಾಳುಗೆಡುವವ ಉದ್ದೇಶವಿದೆ. ಅಲ್ಲದೆ, ಇದರಿಂದ ಪಕ್ಷಕ್ಕೂ ತೀವ್ರ ಹಾನಿಯಾಗುತ್ತಿದೆ. ಇದಕ್ಕೆ ಪರಿಷತ್‌ನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆ ಫಲಿತಾಂಶವೇ ನಿದರ್ಶನ. ಇಷ್ಟಾಗಿಯೂ ರಾಜ್ಯ ಸರ್ಕಾರ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಮ್ಮದೇ ಸರ್ಕಾರವಿದ್ದರೂ ತಪ್ಪಿತಸ್ಥರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿರುವ ಅನುಮಾನವಿದೆ ಎಂದು ನೇರವಾಗಿ ಆರೋಪಿಸಿದರು ಎನ್ನಲಾಗಿದೆ.

ಅಲ್ಲದೆ, ಹೀಗಾಗಿ ಪ್ರಕರಣದಲ್ಲಿರುವವರ ಹೆಸರು ಹೊರಗೆ ಬರಬೇಕು. ಅವರು ನಮ್ಮ ಪಕ್ಷದವರೇ ಆದರೂ ಕ್ರಮ ಆಗಬೇಕು ಎಂದಿರುವುದಾಗಿ ವರದಿಯಾಗಿದೆ.

ಪ್ರಕರಣದ ತನಿಖೆ ಹಾಗೂ ನಮ್ಮ ಪಕ್ಷದ ನಾಯಕರ ಹೇಳಿಕೆಗಳು ಸತ್ಯವನ್ನು ಹೊರಗೆಡುವುದರ ಬದಲು ಬೇರೆಯದ್ದೇ ರೀತಿ ಸಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸೂಕ್ಷ್ಮವಾಗಿ ಎಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾನು ನಿಮ್ಮ ಸೂಚನೆ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೇನೆ. ಪಕ್ಷಕ್ಕೆ ಗೌರವ ತರುವಂತೆ ನಡೆದುಕೊಂಡಿದ್ದೇನೆ. ಸಂಪುಟ ಪುನರ್ ರಚನೆ ವೇಳೆಯೂ ನನ್ನ ಅಭಿಪ್ರಾಯಗಳಿಗೆ ಬೆಲೆ ಸಿಗದಿದ್ದರೂ ಮೌನವಾಗಿ ಸಹಿಸಿದ್ದೇನೆ. ಆದರೆ, ನನ್ನ ವಿರುದ್ಧ ದುರುದ್ದೇಶದಿಂದ ಷಡ್ಯಂತ್ರ ನಡೆಸಿ ನನ್ನ ರಾಜಕೀಯ ಜೀವನವನ್ನೇ ಮುಗಿಸಲು ಸಂಚು ರೂಪಿಸಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಸ್ಟಿಂಗ್‌ ಪಕ್ಷವನ್ನು ಕಾಡಲಿದೆ-ಸಿದ್ದು ವರದಿ:

ಸ್ಟಿಂಗ್‌ನಿಂದಾಗಿ ಪಕ್ಷ ಹಾಗೂ ಸರ್ಕಾರದ ಮೇಲೆ ತೀವ್ರ ಕೆಟ್ಟ ಪರಿಣಾಮ ಉಂಟಾಗಿದೆ. ಮತದಾರರು ಪರಿಷತ್‌ ಚುನಾವಣೆಯಲ್ಲಿ ಮತದಾನದಿಂದ ಹೊರಗೆ ಉಳಿದಿದ್ದು ಹಾಗೂ ಉದ್ದೇಶ ಪೂರ್ವಕವಾಗಿ ಮತ ತಿರಸ್ಕಾರ ಆಗುವಂತೆ ಮತ ಚಲಾಯಿಸಿದ್ದು ಇದಕ್ಕೆ ಸಾಕ್ಷಿ.

ಈ ಪ್ರಕರಣ ಪಕ್ಷದ ಮೇಲೆ ತುಂಬಾ ಪರಿಣಾಮ ಬೀರಿದ್ದು, ಇದು ಸರಿ ಹೋಗಬೇಕಾದರೆ ತಪ್ಪಿತಸ್ಥರು ಯಾರೇ ಆಗಲಿ ಅವರ ಹೆಸರು ಹೊರಗೆ ಬರಬೇಕು. ಅವರಿಗೆ ಸೂಕ್ತ ಶಿಕ್ಷೆ ಆಗಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಮತದಾರರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟವಾಗುತ್ತದೆ

ವೇಣುಗೋಪಾಲ್‌ ಭೇಟಿ:

ರಾಹುಲ್‌ ಗಾಂಧಿ ಭೇಟಿಗೂ ಮುನ್ನ ಸೋಮವಾರ ಬೆಳಗ್ಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಸಿದ್ದರಾಮಯ್ಯ ಭೇಟಿಯಾದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆಯಲ್ಲಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ಬೆಳಗ್ಗೆ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದೆ, ಈಗ ರಾಹುಲ್‌ ಗಾಂಧಿಯವರನ್ನು ಭೇಟಿಯಾಗಿದ್ದೇನೆ. ರಾಜ್ಯದ ವಿದ್ಯಮಾನ, ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಲಾಯಿತು. ಸ್ಟಿಂಗ್‌ ಕುರಿತ ಸೀಮಂತ್‌ ಕುಮಾರ್‌ ಸಿಂಗ್‌ ಹೇಳಿಕೆ ನನಗೆ ಗೊತ್ತಿಲ್ಲ. ರಾಹುಲ್ ಗಾಂಧಿ ಬಳಿ ಚರ್ಚೆ ಮಾಡಿಲ್ಲ.

- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಇಂಥ ಕೆಲಸದಿಂದ ಸರ್ಕಾರದ ವರ್ಚಸ್ಸಿಗೆ ಹಾನಿ 