‘ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ತನಿಖಾ ತಂಡಕ್ಕೆ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶಸ್ತಿ ನೀಡಿದ್ದಾರೆ. ಅದೇ ರೀತಿ ಸ್ಟಿಂಗ್ ತನಿಖೆ ನಡೆಸುತ್ತಿರುವ ಪೊಲೀಸರಿಗೂ ಬಹುಮಾನ ಸಿಗಲಿದೆ.
ಬೆಂಗಳೂರು : ‘ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ತನಿಖಾ ತಂಡಕ್ಕೆ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶಸ್ತಿ ನೀಡಿದ್ದಾರೆ. ಅದೇ ರೀತಿ ಸ್ಟಿಂಗ್ ತನಿಖೆ ನಡೆಸುತ್ತಿರುವ ಪೊಲೀಸರಿಗೂ ಬಹುಮಾನ ಸಿಗಲಿದೆ. ಎರಡು ತಿಂಗಳ ಬಳಿಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಬಹುದು ಕಾದು ನೋಡಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇದೇ ವೇಳೆ ಕೆಪಿಎಸ್ಸಿ ಪ್ರಕರಣದಲ್ಲಿ ನನ್ನ ಮತ್ತು ನನ್ನ ಸಚಿವ ಸಂಪುಟದ ಸದಸ್ಯರನ್ನು ಇ.ಡಿ. ತೆರಿಗೆ ಅಧಿಕಾರಿಗಳ ಬಳಸಿ ಸಿಕ್ಕಿಹಾಕಿಸಲು ಕೇಂದ್ರ ಸಚಿವರೊಬ್ಬರು ಪ್ರಯತ್ನಿಸುತ್ತಿದ್ದಾರೆ ಎಂದು ದೆಹಲಿ ರಾಜಕೀಯ ವಲಯದಲ್ಲಿ ಸುದ್ದಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ನಮ್ಮ ಕುಟುಂಬಕ್ಕೆ ಮಸಿ ಬಳಿಯಲು ಪೊಲೀಸರು ಸಂಚು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಮ್ಮ ಕುಟುಂಬಕ್ಕೆ ಮಸಿ ಬಳಿಯಲು ಪೊಲೀಸರು ಸಂಚು ರೂಪಿಸಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಇದೀಗ ಅದೇ ತನಿಖಾ ತಂಡಕ್ಕೆ ಎನ್ಡಿಎ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ಕುಮಾರಸ್ವಾಮಿ ಬೇಕಾದಾಗ ಕಣ್ಣೀರು ಹಾಕುತ್ತಾರೆ. ಅವರಿಗೆ ಎರಡು ತಿಂಗಳಲ್ಲಿ ಮತ್ತೆ ಕಣ್ಣೀರು ಹಾಕುವ ಅವಕಾಶ ಬರಬಹುದು ಎಂದು ಸೂಚ್ಯವಾಗಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಅಸ್ಪೃಷ್ಯ ಎಂಬ ಕಾರಣಕ್ಕೆ ಅವರು ನಮ್ಮನ್ನು ಮುಟ್ಟುವುದಿಲ್ಲ. ಆದರೆ ಕಾನೂನಿನ ಪ್ರಕಾರ ಅಗತ್ಯವಾದರೆ ನಾವು ಅವರನ್ನು ಮುಟ್ಟುತ್ತೇವೆ. ಕುಮಾರಸ್ವಾಮಿ ಅವರು ಅನುಕಂಪದ ನಾಟಕ ಆಡುತ್ತಿದ್ದಾರೆ. ಅವರು ನಿತ್ಯ ಮನೆಯಲ್ಲಿ ಅಳುವುದು ಪ್ರ್ಯಾಕ್ಟೀಸ್ ಮಾಡುತ್ತಿರುತ್ತಾರೆ. ಮುಂದೆ ಇನ್ನೆರಡು ತಿಂಗಳಲ್ಲಿ ಮತ್ತೆ ಕಣ್ಣೀರು ಹಾಕುತ್ತಾರೆ ನೋಡುತ್ತಿರಿ ಎಂದರು.
ಇ-ಮೇಲ್ ಬಗ್ಗೆ ಸಾಕ್ಷ್ಯವಿದ್ದರೆ ಕೊಡಲಿ:
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಬಂದ ಇ-ಮೇಲ್ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ ಇದ್ದರೆ ಕೊಡಲಿ. ವಿಡಿಯೋದಲ್ಲಿರುವವರ ಎಲ್ಲ ವಿಚಾರಣೆ ಆಗಿದೆ. ಒಂದಲ್ಲಾ 2 ಬಾರಿ ವಿಚಾರಣೆ ಆಗಿದೆ. ಕೃಪಾ ಆಳ್ವಾ ವಿಚಾರಣೆ ವೇಳೆ ಇ-ಮೇಲ್ ವಿಚಾರ ಪ್ರಸ್ತಾಪ ಆಗಿಲ್ಲ. ಒಂದು ವೇಳೆ ಅವರಿಗೆ ಗೊತ್ತಿದ್ದರೆ ಮಾಧ್ಯಮಗಳ ಮುಂದೆ ಹೇಳುವುದಲ್ಲ ನಮಗೆ ಕೊಡಲಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಿಯಾಂಕ್ ಹೇಳಿದರು.
ಕುಮಾರಸ್ವಾಮಿ ಅವರೇ, ನಿಮ್ಮ ಕಳಂಕ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸೂರ್ಯ, ಚಂದ್ರ, ಸತ್ಯ ತುಂಬಾ ಹೊತ್ತು ಮುಚ್ಚಿಡಲಾಗಲ್ಲ. ಆಯುಕ್ತರ ಪತ್ರಿಕಾ ಹೇಳಿಕೆ ಸ್ಪಷ್ಟವಾಗಿದೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಬಹಳಷ್ಟು ವದಂತಿ ಬರುತ್ತಿದೆ, ಇದೊಂದು ಸುಳ್ಳು ಷಡ್ಯಂತ್ರ ಎಂದು ಹೇಳಿದ್ದಾರೆ.
