ಗಾಯಿತ್ರಿ ಮಂಟಪದಲ್ಲಿ ಅಯ್ಯಪ್ಪಸ್ವಾಮಿ ಮಾದರಿ ಸೆಟ್

KannadaprabhaNewsNetwork | Published : Dec 26, 2023 1:30 AM

ಸಾರಾಂಶ

ಶಬರಿಮಲೆ ಶ್ರೀಅಯ್ಯಪ್ಪಸ್ವಾಮಿ ಮಾದರಿಯ ಸೆಟ್, ಸಾವಿರಾರು ಜನರಿಗೆ ಅಯ್ಯಪ್ಪಸ್ವಾಮಿಯ ದರ್ಶನವನ್ನು ಮಾಡಿಸಿದ ಕೀರ್ತಿ ಹರಿಹರಸುತ ಸೇವಾಸಮಿತಿಯವರದ್ದು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಸಹ ಭೇಟಿ.

ಕನ್ನಡಪ್ರಭ ವಾರ್ತೆ ಚಳ್ಳಕೆರೆ ನಗರದ ಗಾಯಿತ್ರಿ ಕಲ್ಯಾಣಮಂಟಪದ ಆವರಣದಲ್ಲಿ ಕಳೆದ ಮೂರು ದಿನಗಳಿಂದ ಇದೇ ಪ್ರಥಮಬಾರಿಗೆ ಶಬರಿಮಲೆ ಶ್ರೀಅಯ್ಯಪ್ಪಸ್ವಾಮಿ ಮಾದರಿಯ ಸೆಟ್ ನಿರ್ಮಿಸಿ ಇಲ್ಲಿನ ಸಾವಿರಾರು ಜನರಿಗೆ ಅಯ್ಯಪ್ಪಸ್ವಾಮಿಯ ದರ್ಶನವನ್ನು ಮಾಡಿಸಿದ ಕೀರ್ತಿ ಹರಿಹರಸುತ ಸೇವಾಸಮಿತಿಯವರದ್ದಾಗಿದೆ.

ಮೂರನೇ ವರ್ಷದ ಅಯ್ಯಪ್ಪಸ್ವಾಮಿ ಪೂಜೆ ಮತ್ತು ಪಡಿಪೂಜೆ ಕಾರ್ಯವನ್ನು ಹಮ್ಮಿಕೊಂಡಿದ್ದು, ಪ್ರತಿನಿತ್ಯ ಗಣಹೋಮ, ಉಷಾಪೂಜೆ, ತುಪ್ಪಾಭಿಷೇಕ, ಅಷ್ಟಾಭಿಷೇಕ, ಉಯದ ಅಸ್ತಮಾನಪೂಜೆ, ಗೋಪೂಜೆ, ಎತ್ತುಗಳಿಗೆ ಮೇವು ವಿತರಣೆ, ಬಡ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆಯೂ ಸೇರಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಚಳ್ಳಕೆರೆ ನಗರದಲ್ಲಿ ದಶಮಾನಗಳ ಕಾಲ ಶ್ರೀಅಯ್ಯಪ್ಪಸ್ವಾಮಿಯ ಭಕ್ತರಾಗಿದ್ದ ಗುರುಸ್ವಾಮಿ, ಜಗ್ಗುಸ್ವಾಮಿ(ಏಜೆಂಟ್) ಬಾಸ್‌ಸ್ವಾಮಿ, ರೇಣುಕಾಸ್ವಾಮಿ ಶಿಷ್ಯವೃಂದ ಹರಿಹರಸುತ ಸೇವಾ ಸಮಿತಿ ಹೆಸರಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯ ಭಕ್ತಸಾಗರ ಸ್ವಾಮಿಯ ದರ್ಶನಕ್ಕಾಗಿ ಹರಿದುಬಂದಿದೆ. ವಿಶೇಷವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರೂ ಸಹ ಆಗಮಿಸಿ ಭಯಭಕ್ತಿಯಿಂದ ಸ್ವಾಮಿಗೆ ನಮಿಸಿದರಲ್ಲದೆ, ಅಯ್ಯಪ್ಪಸ್ವಾಮಿಯ ದರ್ಶನ ಇಲ್ಲಿಯೇ ನಮಗೆ ಪ್ರಾಪ್ತಿಯಾತು ಎಂಬುವ ಧನ್ಯತೆಯನ್ನು ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಸಹ ಭೇಟಿ ನೀಡಿ, ಚಳ್ಳಕೆರೆ ನಗರದಲ್ಲಿ ಶ್ರೀಅಯ್ಯಪ್ಪಸ್ವಾಮಿ ದರ್ಶನ ಮಾಡಿಸಲು ವ್ಯವಸ್ಥೆ ಕೈಗೊಂಡ ಅಯ್ಯಪ್ಪಸ್ವಾಮಿಯ ಎಲ್ಲಾ ಭಕ್ತರ ಉದ್ಧೇಶ ಕೊಂಡಾಡಿದರು. ಯಾವುದೆ ವ್ಯಕ್ತಿ ಭಯ, ಭಕ್ತಿ, ನಮ್ರತೆ, ನಂಬಿಕೆಯಿಂದ ಪೂಜೆ ಮಾಡಿದರೆ ಅಂತಹ ವ್ಯಕ್ತಿಗೆ ಗುರುವಿನ ಅನುಗ್ರಹವಾಗುತ್ತದೆ. ಅಯ್ಯಪ್ಪಸ್ವಾಮಿಯ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆ ಮಾಡುತ್ತಿದ್ದರೆ, ಇಲ್ಲಿರುವ ಎಲ್ಲಾ ಭಕ್ತರಿಗೂ ಆಗುವ ಸಂತೋಷ ವ್ಯಕ್ತಪಡಿಸಲು ಸಾಲುಗಳಿಲ್ಲವೆಂದು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಶಬರಿಮಲೆ ಆರ್ಚಕ ಅಜಿತ್‌ಜನಾರ್ಧನ್ ಕುರುಪ್, ಶಿಲ್ಪಿ ಸ್ತಪತಿ ಎಂ.ದೊರೆಬಾಬು, ಆನಂದ ನಂಬೋಧರಿ, ಶಬರಿಮಲೆ ಸೇವಾಸಮಿತಿ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್, ರಾಜ್ಯಾಧ್ಯಕ್ಷ ಜಯರಾಮ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share this article