ಬಮೂಲ್ ಆಡಳಿತ ಮಂಡಳಿಗೆ ನಾಮಿನಿ ನಿರ್ದೇಶಕರಾಗಿ ಬಿ.ಡಿ ನಾಗಪ್ಪ ಆಯ್ಕೆ

KannadaprabhaNewsNetwork |  
Published : Jun 09, 2026, 01:30 AM IST
ಫೋಟೋ : 8 ಹೆಚ್ ಎಸ್ ಕೆ 1 ಬೆಂಗಳೂರು ಹಾಲು ಒಕ್ಕೂಟದ ನಾಮನಿರ್ದೇಶಕ ನಿರ್ದೇಶಕರಾಗಿ ಆಯ್ಕೆಯಾದ ಬಿಡಿ.ನಾಗಪ್ಪ ಅವರನ್ನು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಸೇರಿದಂತೆ ಎಲ್ಲಾ ನಿರ್ದೇಶಕರು ಅಭಿನಂದಿಸಿದರು. | Kannada Prabha

ಸಾರಾಂಶ

ಬಮೂಲ್ ಕಾರ್ಯವ್ಯಾಪ್ತಿಯನ್ನು ವಿಸ್ತಾರಗೊಳಿಸಿ ಹೈನೋದ್ಯಮದ ಪ್ರೋತ್ಸಾಹದ ಜೊತೆಗೆ ಹಾಲು ಉತ್ಪಾದಕರನ್ನು ಆರ್ಥಿಕವಾಗಿ ಮತ್ತಷ್ಟು ಮೇಲೆತ್ತುವ ದೃಷ್ಟಿಯಿಂದ ನಾನು ರೂಪಿಸುವ ಕಾರ್ಯಕ್ರಮಗಳಿಗೆ ನನ್ನ ಎಲ್ಲ ನಿರ್ದೇಶಕರು ಬೆನ್ನೆಲುಬಾಗಿ ನಿಂತಿದ್ದಾರೆ. ಈಗ ಶಾಸಕ ಶರತ್ ಬಚ್ಚೆಗೌಡರ ನಿರ್ದೇಶನದ ಮೇರೆಗೆ ಬಿ.ಡಿ. ನಾಗಪ್ಪ ಅವರು ನಾಮ ನಿರ್ದೇಶಿತ ನಿರ್ದೇಶಕರಾಗಿ ನಮ್ಮೊಂದಿಗೆ ಸೇರಿದ್ದಾರೆ. ಅವರು ಕೂಡ ಬಮೂಲ್ ಅಭಿವೃದ್ಧಿಗೆ ನಮ್ಮೊಂದಿಗೆ ಸದಾಕಾಲ ಬೆನ್ನೆಲುಬಾಗಿ ನಿಲ್ಲಲಿದ್ದಾರೆ .

ಕನ್ನಡಪ್ರಭ ವಾರ್ತೆ ಹೊಸಕೋಟೆ

ಬೆಂಗಳೂರು ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ನಾಮ ನಿರ್ದೇಶಿತ ನಿರ್ದೇಶಕರಾಗಿ ಬಿದರಹಳ್ಳಿ ಹೋಬಳಿ ಬೈಯಪ್ಪನಹಳ್ಳಿಯ ಬಿ.ಡಿ ನಾಗಪ್ಪ ಆಯ್ಕೆಯಾಗಿದ್ದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹಾಗೂ ನಿರ್ದೇಶಕ ಬಿ.ವಿ ಸತೀಶ್‌ಗೌಡ ಸೇರಿ ಎಲ್ಲಾ ನಿರ್ದೇಶಕರು ಅಭಿನಂದಿಸಿದರು.

ನಗರದ ಕಚೇರಿಯಲ್ಲಿ ಅಭಿನಂದಿಸಿ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಮಾತನಾಡಿ, ಬಮೂಲ್ ಕಾರ್ಯವ್ಯಾಪ್ತಿಯನ್ನು ವಿಸ್ತಾರಗೊಳಿಸಿ ಹೈನೋದ್ಯಮದ ಪ್ರೋತ್ಸಾಹದ ಜೊತೆಗೆ ಹಾಲು ಉತ್ಪಾದಕರನ್ನು ಆರ್ಥಿಕವಾಗಿ ಮತ್ತಷ್ಟು ಮೇಲೆತ್ತುವ ದೃಷ್ಟಿಯಿಂದ ನಾನು ರೂಪಿಸುವ ಕಾರ್ಯಕ್ರಮಗಳಿಗೆ ನನ್ನ ಎಲ್ಲ ನಿರ್ದೇಶಕರು ಬೆನ್ನೆಲುಬಾಗಿ ನಿಂತಿದ್ದಾರೆ. ಈಗ ಶಾಸಕ ಶರತ್ ಬಚ್ಚೆಗೌಡರ ನಿರ್ದೇಶನದ ಮೇರೆಗೆ ಬಿ.ಡಿ. ನಾಗಪ್ಪ ಅವರು ನಾಮ ನಿರ್ದೇಶಿತ ನಿರ್ದೇಶಕರಾಗಿ ನಮ್ಮೊಂದಿಗೆ ಸೇರಿದ್ದಾರೆ. ಅವರು ಕೂಡ ಬಮೂಲ್ ಅಭಿವೃದ್ಧಿಗೆ ನಮ್ಮೊಂದಿಗೆ ಸದಾಕಾಲ ಬೆನ್ನೆಲುಬಾಗಿ ನಿಲ್ಲಲಿದ್ದಾರೆ ಎಂದರು.

ಬಮೂಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ ಮಾತನಾಡಿ, ಹಾಲು ಉತ್ಪಾದಕರ ಹಿತ ಹಾಗೂ ರಕ್ಷಣೆ ದೃಷ್ಟಿಯಿಂದ ಡಿ.ಕೆ. ಸುರೇಶ್ ಅವರ ನೇತೃತ್ವದಲ್ಲಿ ಎಲ್ಲಾ ನಿರ್ದೇಶಕರು ಅವಿರತ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳ ಮೂಲಕ ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡಲಿದ್ದೇವೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಗಳಾಗಿದ್ದು ಕೆಎಂಎಫ್ ಸೇರಿದಂತೆ ಬಮೂಲ್ ಅಭಿವೃದ್ಧಿಗೂ ವರದಾನವಾಗುವ ಕಾರ್ಯಕ್ರಮ ರೂಪಿಸಲು ಮತ್ತಷ್ಟು ಬೆನ್ನೆಲುಬಾಗಿ ನಿಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಮೂಲ್ ಉಪಾಧ್ಯಕ್ಷ ರಾಜಣ್ಣ, ಚೆಲುವಯ್ಯ ನಾಗರಾಜು, ಆರ್.ಕೆ. ರಮೇಶ್, ಮಂಜುನಾಥ, ಲಿಂಗೇಶ್ ಕುಮಾರ್, ಆನಂದ್ ಕುಮಾರ್, ಹರೀಶ್ ಕುಮಾರ್, ಅಶೋಕ್, ಕೃಷ್ಣಯ್ಯ, ಬೈರೇಗೌಡ, ಮುನಿರಾಜು, ಸತೀಶ್ ಕಡತಮಲೆ ಸೇರಿ ಬಮುಲ್ ಸಿಬ್ಬಂದಿ ವರ್ಗ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತ್ಯಾಧುನಿಕ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಸೇವೆಗೆ ಲಭ್ಯ
2028ಕ್ಕೆ ಶಿಡ್ಲಘಟ್ಟದಲ್ಲಿ ಬಿಜೆಪಿ ಅಭ್ಯರ್ಥಿಯೇ ಎಂಎಲ್‌ಎ: ಸೀಕಲ್