- ಹರಿಹರ ನಗರಸಭೆಯಲ್ಲಿ ಮಂಗಳವಾರ ಇಡೀ ದಿನ ದಾಖಲೆಗಳ ತಪಾಸಣೆ
- - - ಕನ್ನಡಪ್ರಭ ವಾರ್ತೆ ಹರಿಹರ ಖಾತಾ ಆಂದೋಲನದ ಕೆಲಸಗಳನ್ನು ಹೊರಗಿನ ವ್ಯಕ್ತಿಗಳಿಂದ ಮಾಡಿಸುತ್ತಿರುವುದರಿಂದ ಅನುಮಾನಗೊಂಡ ಲೋಕಾಯುಕ್ತ ಪೊಲೀಸರು ನಗರಸಭೆಯಲ್ಲಿ ಮಂಗಳವಾರ ಇಡೀ ದಿನ ದಾಖಲೆಗಳ ತಪಾಸಣೆ ನಡೆಸಿದರು.ಲೋಕಾಯುಕ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಾಪೊರೆ ನೇತೃತ್ವದಲ್ಲಿ ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಯ ಲೋಕಾಯುಕ್ತ ಸಿಬ್ಬಂದಿ ತಂಡ ಬೆಳಗ್ಗೆ ದಿಢೀರ್ ದಾಳಿ ಮಾಡಿ ನಗರಸಭೆಯ ವಿವಿಧ ಶಾಖೆಗಳ ಅಧಿಕಾರಿ, ಸಿಬ್ಬಂದಿಯಿಂದ ಮಾಹಿತಿ ಪಡೆದು ದಾಖಲೆಗಳನ್ನು ಪರಿಶೀಲಿಸಿದರು.
ತಪಾಸಣೆ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಲು ಲೋಕಾಯುಕ್ತ ಪೊಲೀಸರು ನಿರಾಕರಿಸಿದರು. ಸೋಮವಾರ ನಗರಸಭೆ ಮುಂದೆ ಪೆಂಡಾಲ್ ಹಾಕಿ ಬಿ ಖಾತಾ ಅರ್ಜಿ ಸ್ವೀಕಾರ ಹಾಗೂ ಇತರೆ ಪ್ರಕ್ರಿಯೆಗಳನ್ನು ನಡೆಸುವಾಗ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೆ ದಾಖಲೆಗಳ ಪರಿಶೀಲಿಸಿದರು.ಮನೆಗಳಲ್ಲೂ ಪರಿಶೀಲನೆ:
ನಗರಸಭೆ ಆವರಣದಲ್ಲಿದ್ದು, ಆಸ್ತಿಗಳ ಖಾತೆದಾರರಿಗೆ ಕಂದಾಯ ರಸೀದಿ ಪ್ರಿಂಟ್ ಔಟ್ ಕೊಡುವ ಹೊರಗಿನ ಮೂವರು ವ್ಯಕ್ತಿಗಳ ಮನೆಗಳಲ್ಲೂ ಸಂಜೆ ಲೋಕಾಯುಕ್ತ ಸಿಬ್ಬಂದಿ ತಪಾಸಣೆ ನಡೆಸಿದರು.ಈ ಹಿಂದೆ ನಗರಸಭೆಯಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಅನೇಕ ಬಾರಿ ದಾಳಿ ನಡೆಸಿದ್ದ ಲೋಕಾಯುಕ್ತರು ನಗರಸಭೆ ಹಿಂದಿನ ಪೌರಾಯುಕ್ತರು, ಎಂಜಿನಿಯರ್, ಕಂದಾಯ ನಿರೀಕ್ಷಕ, ನಗರಸಭೆ ಮಹಿಳಾ ಸದಸ್ಯೆ, ಸದಸ್ಯೆಯ ಪತಿ, ಪುತ್ರ ಹೀಗೆ ಸಾಲು, ಸಾಲು ಜನರು ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಈಗ ಮತ್ತೆ ಲೋಕಾಯುಕ್ತರು ಪರಿಶೀಲನೆ ನಡೆಸುತ್ತಿರುವುದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ನಡುಕ ಉಂಟಾಗಿದೆ.
- - --08ಎಚ್‍ಆರ್‍ಆರ್01:
ಹರಿಹರದ ನಗರಸಭೆಗೆ ಮಂಗಳವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಾಪೊರೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. -08ಎಚ್‍ಆರ್‍ಆರ್01ಎ:ಹರಿಹರದ ನಗರಸಭೆಗೆ ಮಂಗಳವಾರ ಭೇಟಿ ನೀಡಿದ ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.