ಅರಸು ಮಾದರಿಯಲ್ಲಿ ಬಿ.ರಾಚಯ್ಯ ರೈತರಿಗೆ ಭೂಮಿ ನೀಡಿದ್ದು: ಎಆರ್‌ಕೆ

KannadaprabhaNewsNetwork | Published : Aug 21, 2024 12:33 AM

ಸಾರಾಂಶ

ಕನ್ನಡಪ್ರಭ ವಾರ್ತೆ ಯಳಂದೂರುದೇವರಾಜು ಅರಸು ಅವರ ರಾಜ್ಯದಲ್ಲಿ ಉಳುವ ರೈತರಿಗೆ ಭೂಮಿ ನೀಡಿದ ಮಾದರಿಯಲ್ಲಿ ನಮ್ಮ ತಂದೆ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರು 15 ಸಾವಿರಕ್ಕೂ ಹೆಚ್ಚು ಭೂಮಿಯನ್ನು ದಲಿತರು, ಹಿಂದುಳಿದ ವರ್ಗ, ಗಿರಿಜನರು ಸೇರಿದ ರೈತರಿಗೆ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಲು ಅನುಕೂಲ ಮಾಡಿದರು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ದೇವರಾಜು ಅರಸು ಅವರ ರಾಜ್ಯದಲ್ಲಿ ಉಳುವ ರೈತರಿಗೆ ಭೂಮಿ ನೀಡಿದ ಮಾದರಿಯಲ್ಲಿ ನಮ್ಮ ತಂದೆ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರು 15 ಸಾವಿರಕ್ಕೂ ಹೆಚ್ಚು ಭೂಮಿಯನ್ನು ದಲಿತರು, ಹಿಂದುಳಿದ ವರ್ಗ, ಗಿರಿಜನರು ಸೇರಿದ ರೈತರಿಗೆ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಲು ಅನುಕೂಲ ಮಾಡಿದರು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಹಮ್ಮಿಕೊಂಡಿದ ಡಿ.ದೇವರಾಜು ಅರಸು ಅವರ 109 ನೇ ಜನ್ಮ ದಿನಾಚರಣೆ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಿಆರ್‌ಟಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕೆ.ದೇವರಹಳ್ಳಿ, ದಾಸನಹುಂಡಿ, ಮುಟ್ಟಿಪಾಲ್ಯ ಹಾಗೂ ಬಿಳಿಗಿರಿರಂಗನಬೆಟ್ಟ ಸೇರಿದ ಜಿಲ್ಲೆಯ ವ್ಯಾಪ್ತಿಯಲ್ಲ್ಲಿ ರೈತರಿಗೆ ನೀಡಿರುವ ಭೂಮಿಯನ್ನು ಖಾತೆ ಮಾಡಲು ಕಾನೂನು ನಿಯಮಗಳನ್ನು ಕೇಳುತ್ತಾರೆ, ಆದರೆ ಹೊರ ರಾಜ್ಯದ ಮಾಲೀಕರಿಗೆ ಯಾವುದೇ ನಿಬಂಧನೆಗಳನ್ನು ಇಲ್ಲದೇ ಖಾತೆ ಮಾಡಿಕೊಡುತ್ತಾರೆ, ಅರ್ಹ ಫಲಾನುಭವಿಗಳಿಗೆ ಮಾತ್ರ ಇನ್ನು ಖಾತೆಯನ್ನು ಮಾಡಿಕೊಡದೇ ವಿಳಂಬ ಮಾಡುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಅರ್ಹ ರೈತರಿಗೆ ಭೂಮಿಯ ಖಾತೆಯನ್ನು ಮಾಡಿಕೊಂಡುವ ಕೆಲಸವನ್ನು ಮಾಡಬೇಕೆಂದು ಸೂಚಿಸಿದರು.ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು ಮಾತನಾಡಿ, ಡಿ.ದೇವರಾಜು ಅರಸು ಅವರು ಬಡವರ್ಗದ ಧ್ವನಿಯಾಗಿ ಕೆಲಸವನ್ನು ಮಾಡುವ ಮೂಲಕ ನಿರ್ಗತಿಕರಿಗೆ ಶಿಕ್ಷಣ, ವಸತಿ, ವಿದ್ಯುತ್, ನೀಡುವ ಜತೆಗೆ ಎಲ್ಲ ಸಮುದಾಯದವರಿಗೂ ಉಳುವವನೆ ಭೂಮಿ ಒಡೆಯ ನಿಯಮವನ್ನು ಜಾರಿಗೊಳಿಸಿ ಎಲ್ಲರಿಗೂ ಭೂಮಿ ಹಂಚಿಕೆ ಮಾಡಿ ಬದುಕನ್ನು ರೂಪಿಸಿದ್ದರು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿ.ವಿ.ಗೌಡ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಾಂತರಾಜು ಮಾತನಾಡಿದರು, ತಹಸೀಲ್ದಾರ್ ಜಯಪ್ರಕಾಶ್, ಪಪಂ ಮುಖ್ಯಾಧಿಕಾರಿ ಮಹೇಶ್ ಕುಮಾರ್, ಬಿಇಒ ಕೆ.ಕಾಂತರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಎಂ.ಮಂಜುನಾಥ್, ತಾಲೂಕು ಕಲ್ಯಾಣಾಧಿಕಾರಿ ಸುಮಲತಾ, ಬಿಸಿಎಂ ಇಲಾಖೆ ಪ್ರಥಮ ದರ್ಜೆ ಸಹಾಯಕ ಕುಮಾರ್ ಇತರರು ಹಾಜರಿದ್ದರು.

Share this article