ಕನ್ನಡಪ್ರಭ ವಾರ್ತೆ ಮೈಸೂರು
ಈ ವೇಳೆ ಮಾತನಾಡಿದ ಅವರು, ಮೈಸೂರಿನಲ್ಲಿ ಎಲ್ಲಾ ಬೂತ್ ಗಳಲ್ಲಿ ಮಹಾ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಬೆಳಗಿನಿಂದಲೂ ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿ ಬೂತ್ ವ್ಯಾಪ್ತಿಯಲ್ಲಿ ಮನೆಗಳಿಗೆ ತೆರಳಿ ಬಿಜೆಪಿಗೆ ಏಕೆ ಮತ ಹಾಕಬೇಕು ಈ ಬಾರಿಯೂ ಮೋದಿಯವರನ್ನು ಮತ್ತೆ ಏಕೆ ಪ್ರಧಾನಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿ ನಮ್ಮ ಅಭ್ಯರ್ಥಿಗಳನ್ಯ ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ, ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್, ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ಮುಖಂಡರಾದ ಸಚಿನ್, ಆರ್. ಪರಮೇಶ್, ಮೈ.ಕಾ. ಪ್ರೇಮ್ ಕುಮಾರ್, ರಾಜೇಂದ್ರ, ವಿಜ್ಞೇಶ್ವರ ಭಟ್, ಶ್ರೀನಿವಾಸ್, ಸುದರ್ಶನ್, ಸುರೇಂದ್ರ, ಚರಣ್, ಕಿರಣ್, ಬದ್ರಿ, ಲಕ್ಷ್ಮಿ, ಶ್ರೀಲಕ್ಷ್ಮಿ, ಗೀತಾ, ಪದ್ಮಾ, ಸುಲೋಚನಾ ಮೊದಲಾದವರು ಇದ್ದರು.