ಬಿ.ವೈ.ವಿಜಯೇಂದ್ರ ಹುಟ್ಟುಹಬ್ಬ: ಪೌಷ್ಟಿಕ ಆಹಾರ, ಸಿಹಿ ವಿತರಣೆ

KannadaprabhaNewsNetwork |  
Published : Nov 11, 2025, 01:45 AM IST
10ಕೆಎಂಎನ್ ಡಿ19 | Kannada Prabha

ಸಾರಾಂಶ

ಪ್ರಪಥಮ ರೈತರ ಬಜೆಟ್ ಮಂಡಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರೈತಪರ ಹೋರಾಟ, ಕಾಳಜಿ ಮೈಗೂಡಿಸಿಕೊಂಡಿರುವ ಬಿ.ವೈ.ವಿಜಯೇಂದ್ರ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ತಮ್ಮದೇ ಆದ ಕೊಡಗೆ ನೀಡಲಿ. ರಾಜ್ಯದಲ್ಲಿ ಉತ್ತಮ ನಾಯಕರಾಗಿ ಜನ ಸೇವೆ ಮಾಡುತ್ತಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹುಟ್ಟುಹಬ್ಬ ಪ್ರಯುಕ್ತ ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಪೌಷ್ಟಿಕ ಆಹಾರ ಮತ್ತು ಸಿಹಿ ವಿತರಣೆ ನಡೆಯಿತು.

ಬಳಿಕ ಮಾತನಾಡಿದ ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್, ಉತ್ತರ ಕರ್ನಾಟಕ ಭಾಗದ ರೈತರ ಹೋರಾಟಕ್ಕೆ ಬೆಂಬಲ ನೀಡಿ ಆಹೋರಾತ್ರಿ ಹೋರಾಟ ಮಾಡಿ ರೈತರ ಜೊತೆ ಇದ್ದು ಕಬ್ಬಿಗೆ ಬೆಲೆ ಕೊಡಿಸಿರುವುದು ಶ್ಲಾಘನೀಯ ಎಂದರು.

ಪ್ರಪಥಮ ರೈತರ ಬಜೆಟ್ ಮಂಡಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರೈತಪರ ಹೋರಾಟ, ಕಾಳಜಿ ಮೈಗೂಡಿಸಿಕೊಂಡಿರುವ ಬಿ.ವೈ.ವಿಜಯೇಂದ್ರ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ತಮ್ಮದೇ ಆದ ಕೊಡಗೆ ನೀಡಲಿ. ರಾಜ್ಯದಲ್ಲಿ ಉತ್ತಮ ನಾಯಕರಾಗಿ ಜನ ಸೇವೆ ಮಾಡುತ್ತಾರೆ. ರಾಜ್ಯ ಸರ್ಕಾರಕ್ಕೆ ಹೋರಾಟದ ಮೂಲಕ ಕಿವಿಹಿಂಡುವ ಕಾರ್ಯ ಮತ್ತಷ್ಟು ಸಾಗಲಿ ಎಂದರು.

ಬಿ.ವೈ.ವಿಜಯೇಂದ್ರ ಅವರಿಗೆ ದೇವರು ಆಯಸ್ಸು, ಆರೋಗ್ಯ ರಾಜಕೀಯ ಭವಿಷ್ಯ, ಉನ್ನತಸ್ಥಾನ ಮಾನಗಳನ್ನು ಕೊಟ್ಟು ಕಾಪಾಡಲಿ, ರೈತ ಪರ, ದೀನ-ದುರ್ಬಲ ವರ್ಗಗಳ ಪರ ನಿಂತು ಹೋರಾಟ ಮಾಡುವ ಚೈತನ್ಯ ಹೆಚ್ಚಾಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಆಶ್ರಮದ ವಾಸಿಗಳಿಗೆ ಪೌಷ್ಟಿಕಾಹಾರ ಮತ್ತು ಸಿಹಿ ವಿತರಣೆ ನಡೆಯಿತು. ಬಿ.ವೈ.ವಿಜಯೇಂದ್ರ ಅವರಿಗೆ ಹಿರಿಯರಿಂದ ಆಶೀರ್ವಾದ ಪಠಣ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿವೇಕ್, ನಗರ ಘಟಕದ ಉಪಾಧ್ಯಕ್ಷ ಕೇಶವ, ಕಾರ್ಯದರ್ಶಿ ಪ್ರಶನ್ನ, ನಂದೀಶ್ ಮತ್ತಿತರರಿದ್ದರು.

ಪುತ್ರನ ಹುಟ್ಟುಹಬ್ಬದಂದು ಮಳವಳ್ಳಿ ಶಿವಣ್ಣರಿಂದ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ

ಕನ್ನಡಪ್ರಭ ವಾರ್ತೆ ಮದ್ದೂರುಉಳ್ಳವರು ತಮ್ಮ ಮತ್ತು ಕುಟುಂಬದವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ರಾಮ್ ಮನೋಹರ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ ತಮ್ಮ ಪುತ್ರನ ಹುಟ್ಟುಹಬ್ಬದಂದು ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ಬೆಂಗಳೂರಿನ ತಮ್ಮ ನಿವಾಸದಲ್ಲಿ ತಮ್ಮ ಪುತ್ರ ಹೈಕೋರ್ಟ್ ವಕೀಲ, ಕೆಪಿಸಿಸಿ ವಕ್ತಾರ ಶತ ಬೀಷ್ ಶಿವಣ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ಮದ್ದೂರಿನ ಐದು ವಿದ್ಯಾರ್ಥಿಗಳು ಒಳಗೊಂಡಂತೆ ರಾಜ್ಯದ ವಿವಿಧ ಜಿಲ್ಲೆಗಳ 50 ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ನೀಡಿ ಶೈಕ್ಷಣಿಕ ಚಟುವಟಿಕೆಗೆ ನೆರವಾಗಿದ್ದಾರೆ.ನಂತರ ಮಾತನಾಡಿದ ಶಿವಣ್ಣ, ಉಳ್ಳವರು ತಮ್ಮ ಕುಟುಂಬದ ಹುಟ್ಟುಹಬ್ಬಗಳನ್ನು ಅದ್ಧೂರಿಯಾಗಿ ಆಚರಣೆ ಮಾಡಿ ಹಣ ದುಂದು ವೆಚ್ಚ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅದರ ಬದಲು ಬಡ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಸಹಾಯ ಹಸ್ತ ಚಾಚುವುದರಿಂದ ಅರ್ಥಪೂರ್ಣ ಕಾರ್ಯಕ್ರಮ ಮಾಡಿದ ತೃಪ್ತಿ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಅಶ್ವಿನ್ ರಾಮಕೃಷ್ಣೇಗೌಡ, ಖಜಾಂಚಿ ಜವರಾಯಿಗೌಡ, ಕನಕ ಸಹಕಾರ ಸಂಘದ ನಿರ್ದೇಶಕ ಅರುವ, ಮುಖಂಡ ಚಂದ್ರಕಾಂತ್, ರಮೇಶ್ ಭಾಗವಹಿಸಿದ್ದರು.

PREV

Recommended Stories

ನಿರಂತರ ಸಾಧನೆಯಿಂದ ಯಶಸ್ಸುಸಾಧ್ಯ
15ರಂದು ಬೆಂಗಳೂರಿಗೆ ಎಸ್‌ಪಿ ವರಿಷ್ಠ ಅಖಿಲೇಶ ಯಾದವ್