ಲಕ್ಷ್ಮೇಶ್ವರ: ರಾಷ್ಟ್ರದ ಸೇವೆಗಾಗಿ ಬದುಕನ್ನೇ ಮೀಸಲಿಟ್ಟ ಹಸಿರು ಕ್ರಾಂತಿ ಮತ್ತು ಸಮಾನತೆಯ ಹರಿಕಾರ, ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ ಆದರ್ಶ, ಚಿಂತನೆಗಳು ಮತ್ತು ದೇಶ ಸೇವೆಗಾಗಿ ಸಲ್ಲಿಸಿದ ಕ್ಷಣಗಳು ಸದಾ ಸ್ಮರಣೀಯ. ಅವರ ಶ್ರೇಷ್ಠ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆ ತಿಳಿದು ಗೌರವದಿಂದ ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ಶನಿವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಡಾ. ಬಾಬು ಜಗಜೀವನ ರಾಮ್ ಅವರ ೧೧೮ನೇ ಜನ್ಮದಿನಾಚರಣೆ ಹಾಗೂ ಸಮತಾ ದಿನ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ವೇಳೆ ತಹಸೀಲ್ದಾರ ವಾಸುದೇವ ಸ್ವಾಮಿ ಮಾತನಾಡಿ ಬಾಬು ಜಗಜೀವನ್ ರಾಮ್ ಅವರು ತಮ್ಮ ಆಡಳಿತ ಅವಧಿಯಲ್ಲಿ ಮಾಡಿದ ದೇಶ ಸೇವೆ ಅವರನ್ನು ಸದಾ ಸ್ಮರಿಸುವಂತೆ ಮಾಡಿದೆ. ಇಂತಹ ಮಹಾನ ನಾಯಕರ ಜೀವನ ಸಾಧನೆ ಮತ್ತು ಆಡಳಿತ ವೈಖರಿ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದರು.
ಈ ವೇಳೆ ತಾಪಂ ಇಓ ಕೃಷ್ಣಪ್ಪ ಧರ್ಮರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲ ಲಮಾಣಿ, ಮುಖ್ಯಾಧಿಕಾರಿ ಮಹೇಶ ಹಡಪದ, ಜಿಪಂ ಮಾಜಿ ಅಧ್ಯಕ್ಷ ಎಸ್ ಪಿ ಬಳಿಗಾರ, ಹೆಸ್ಕಾಂ ಅಧಿಕಾರಿ ಆಂಜನಪ್ಪ, ಫಕ್ಕಿರೇಶ ಮ್ಯಾಟಣ್ಣವರ, ಅಮರೇಶ ತೆಂಬದಮನಿ, ರಾಜು ಓಲೇಕಾರ, ಅನಿಲ ಮುಳಗುಂದ, ನಾಗರಾಜ ದೊಡ್ಡಮನಿ, ಕೆ.ಓ. ಹುಲಿಕಟ್ಟಿ, ರಂಗಣ್ಣ ಬದಿ, ಸುರೇಶ ಬೀರಣ್ಣವರ, ಫಕ್ಕಿರೇಶ ಭಜಕ್ಕನವರ, ಜಗದೀಶ ಹುಲಿಗೆಮ್ಮನವರ, ಮಂಜುನಾಥ ರಾಮಗೇರಿ, ಟಾಕಪ್ಪ ಪೂಜಾರ, ಹಜರೇಸಾಬ ಅರ್ಕಸಾಲಿ ಸೇರಿದಂತೆ ಕಂದಾಯ, ಸಮಾಜ ಕಲ್ಯಾಣ ಮತ್ತು ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಇದ್ದರು.