ಸಮಾನತೆಗಾಗಿ ಹೋರಾಡಿದ ಬಾಬೂಜಿ

KannadaprabhaNewsNetwork | Published : Apr 6, 2025 1:50 AM

ಸಾರಾಂಶ

ಬಾಬು ಜಗಜೀವನರಾಮ್ ಸೃಷ್ಟಿಸಿದ ಹರಿಸು ಕ್ರಾಂತಿಯಿಂದ ದೇಶದಲ್ಲಿ ಬಡವರಿಗೆ ಆಹಾರದ ಕೊರತೆ ದೂರವಾಯಿತು. ಹಸಿರು ಕ್ರಾಂತಿಯು ಹರಿಕಾರ ಬಾಬೂಜಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಕ್ಕೂ ಆದ್ಯತೆ ಕೊಟ್ಟಿದ್ದರಿಂದ ಇಂದು ದೇಶದಲ್ಲಿ, ಸಮಾಜದಲ್ಲಿ ಆಹಾರ ಪದಾರ್ಥಗಳ ಕೊರತೆಯಿಲ್ಲದಂತಹ ಸುಭಿಕ್ಷ ಸ್ಥಿತಿ ಇದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ದಲಿತರಿಗೆ ಸಮಾನತೆ ಕಲ್ಪಿಸಲು ಅಖಿಲ ಭಾರತ ಶೋಷಿತ ವರ್ಗಗಳ ಲೀಗ್ ಅನ್ನು ಸ್ಥಾಪಿಸುವಲ್ಲಿ ಬಾಬೂ ಜಗಜೀವನ್ ರಾಮ್ ಪ್ರಮುಖ ಪಾತ್ರವಹಿಸಿದ್ದರು ಎಂದು ತಹಸೀಲ್ದಾರ್ ಎನ್.ವೆಂಕಟೇಶ್ ಹೇಳಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ಮಾಜಿ ಉಪ ಪ್ರಧಾನ ಮಂತ್ರಿಗಳಾದ ಹಸಿರು ಕ್ರಾಂತಿ ಹರಿಕಾರ ಎಂದು ಹೆಸರುಪಡೆದಿರುವ ಜನಗಜೀವನ್ ರಾಮ್ ರವರ ೧೧೮ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಬಿಹಾರದಿಂದ ರಾಜಕಾರಣಕ್ಕೆ ಪ್ರವೇಶ ಮಾಡಿದ ಅವರು ಕೇಂದ್ರದಲ್ಲಿ ಎಲ್ಲಾ ಖಾತೆಗಳನ್ನು ನಿಭಾಹಿಸಿದರು ಎಂದರು.

ಹಸಿರು ಕ್ರಾಂತಿಯ ಹರಿಕಾರ

ದೇಶದಲ್ಲಿ ಆಹಾರಕ್ಕಾಗಿ ಹಾಹಾಕಾರ ಉಂಟಾದಾಗ ಹಸಿರು ಕ್ರಾಂತಿಯನ್ನು ಹುಟ್ಟು ಹಾಕಿದರು.ಸಂವಿಧಾನ ರಚನಾ ಸಭೆಯಲ್ಲಿ ಅವರು ದಲಿತರ ಹಕ್ಕುಗಳಿಗಾಗಿ ಪ್ರತಿಪಾದಿಸಿದರು ಮತ್ತು ಚುನಾಯಿತ ಸಂಸ್ಥೆಗಳು ಹಾಗೂ ಸರ್ಕಾರಿ ಸೇವೆಗಳಲ್ಲಿ ಜಾತಿಯ ಆಧಾರದ ಮೇಲೆ ಸಕಾರಾತ್ಮಕ ಕ್ರಮಕ್ಕಾಗಿ ವಾದಿಸಿದ್ದರು. ಬಾಬು ಜಗಜೀವನರಾಮ್ ಸೃಷ್ಟಿಸಿದ ಹರಿಸು ಕ್ರಾಂತಿಯಿಂದ ದೇಶದಲ್ಲಿ ಬಡವರಿಗೆ ಆಹಾರದ ಕೊರತೆ ದೂರವಾಯಿತು. ಹಸಿರು ಕ್ರಾಂತಿಯು ಹರಿಕಾರ ಬಾಬೂಜಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಕ್ಕೂ ಆದ್ಯತೆ ಕೊಟ್ಟಿದ್ದರಿಂದ ಇಂದು ಸಮಾಜದಲ್ಲಿ ಆಹಾರ ಪದಾರ್ಥಗಳ ಕೊರತೆಯಿಲ್ಲ ಎಂದರು.

ಸಮಾಜ ಕಲ್ಯಾಣಾಧಿಕಾರಿ ಅಂಜಲಿ ಮಾತನಾಡಿ ಜಗಜೀವನರಾಮ್ ಅಧಿಕಾರ ಮತ್ತು ಆಸ್ತಿಯಿಂದಗಳಿಸಲಾಗದ ಕೀರ್ತಿಯನ್ನು ಸೇವೆ ಹಾಗೂ ತ್ಯಾಗದಿಂದಗಳಿಸಬಹುದೆಂದು ಜಗಜೀವನರಾಮ್ ಬದುಕು ತಿಳಿಸುತ್ತದೆ, ನಿಸ್ವಾರ್ಥ ಸೇವೆ ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದ ಸಮಾಜಕ್ಕೆ ಆದರ್ಶಪ್ರಾಯವ್ಯಕ್ತಿಯಾಗಿದ್ದಾರೆ. ಅವರ ೩ದಶಕಗಳ ಕಾಲ ಕೇಂದ್ರ ಮಂತ್ರಿ ಮಂಡಲದ ಸದಸ್ಯರಾಗಿ ಅಪಾರ ಆಡಳಿತ ಅನುಭವಗಳಿಸಿದರು. ಸಾರಿಗೆ, ಆಹಾರ, ರೈಲ್ವೆ, ಕೃಷಿ ಮತ್ತು ಸಮುದಾಯ ಅಭಿವೃದ್ದಿಗೆ ಶ್ರಮಿಸಿದ ಧೀಮಂತ ವ್ಯಕ್ತಿ ಎಂದರು.ಈ ವೇಳೆ ತೋಟಗಾರಿಗೆ ಅಧಿಕಾರಿ ಶಿವಾರೆಡ್ಡಿ,ಲೋಕೋಪಯೋಗಿ ಎಇಇ ರವಿ, ಬಿಸಿಎಂ ಅಧಿಕಾರಿ ಶ್ರೀನಿವಾಸ್,ಬಿಸಿಯೂಟ ಅಧಿಕಾರಿ ಯುವರಾಜು,ದಲಿತ ಮುಖಂಡರಾದ ಸೂಲಿಕುಂಟೆ ಆನಂದ್,ಹುಣಸನಹಳ್ಳಿ ವೆಂಕಟೇಶ್,ವಿಎಸ್‌ಎಸ್‌ಎನ್ ಅಧ್ಯಕ್ಷ ಅ.ನಾ.ಹರೀಶ್ ಇತರರು ಇದ್ದರು.

Share this article