ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಕರವೇ ಕಾರ್ಯಾಲಯದಲ್ಲಿ ಹಸಿರು ಕ್ರಾಂತಿಯ ಹರಿಕಾರ, ದೇಶದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜಯಂತಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ಬಾಬು ಜಗಜೀವನ್ ರಾಮ್ ಅಧ್ಯಯನದ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರವು ಒಂದು ಪ್ರಮುಖವಾದದ್ದು, ಮೈಸೂರು ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಗಳು ಮತ್ತು ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಿದರು.ತಾಲೂಕಾಧ್ಯಕ್ಷ ಮಲ್ಲು ಮಾಳಿಕೇರಿ ಮಾತನಾಡಿ, ಡಾ. ಬಾಬೂಜಿ ಅವರು ದಲಿತ ಸಮಾಜದಲ್ಲಿ ಜನಿಸಿ ಇಡೀ ದೇಶಕ್ಕೆ ಸ್ಫೂರ್ತಿಯಾಗಿ ಬೆಳೆದ ವ್ಯಕ್ತಿಯಲ್ಲೊಬ್ಬರು ವಿಭಿನ್ನ ಸಮಸ್ಯೆಗಳು ಮತ್ತು ಪ್ರದೇಶಗಳ ಕುರಿತು ಬಾಬೂಜಿ ಆಲೋಚನೆಗಳನ್ನು ಪ್ರತಿಬಿಂಬಿಸುತ್ತದೆ. ಅಂತಹ ಚಟುವಟಿಕೆಗಳು ಮತ್ತು ವಿಸ್ತರಣೆ ಕಾರ್ಯಕ್ರಮಗಳು ಕೃಷಿ ಆಹಾರಕ್ಕೆ ಸಂಬಂಧಿಸಿದ ಕಾರ್ಮಿಕ ಕಲ್ಯಾಣ ಜಾಗೃತಿ, ಸಾಮಾಜಿಕ ಮಹಿಳಾ ಅಧ್ಯಯನ ಮತ್ತು ಬಾಬು ಜಗಜೀವನ್ ರಾಮ್ ಅವರ ಕಾರ್ಯಗಳು ಪಾಲಿಸಬೇಕೆಂದರು.
ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ವಿಶ್ವರಾಧ್ಯ ದಿಮ್ಮೆ, ಸಿದ್ದುನಾಯಕ ಹತ್ತಿಕುಣಿ, ಅಂಬ್ರೇಶ ಹತ್ತಿಮನಿ, ಸಂತೋಷಕುಮಾರ ನಿರ್ಮಲ್ಕರ್, ಅರ್ಜುನ್ ಪವಾರ್, ಸಾಹೇಬಗೌಡನಾಯಕ, ಸಂತೋಷ ಚಾಮನಾಳ್, ರೆಡ್ಡಿ ರಾಠೋಡ್, ರಮೇಶ ಡಿ. ನಾಯಕ ಇತರರಿದ್ದರು.