ಅಂಬೇಡ್ಕರ್, ಬಾಬೂಜಿ ಭಾರತ ನಿರ್ಮಾಣಕ್ಕೆ ಪ್ರಭಾವ ಬೀರಿದವರು

KannadaprabhaNewsNetwork |  
Published : Jun 19, 2026, 01:15 AM IST
5 | Kannada Prabha

ಸಾರಾಂಶ

ಡಾ. ಬಾಬು ಜಗಜೀವನ್‌ ರಾಮ್‌ ಅವರು ಭವ್ಯ ಭಾರತ ನಿರ್ಮಾಣಕ್ಕೆ ಹಾಗೂ ಶೋಷಿತ ವರ್ಗಕ್ಕೆ ಜೀವನ ಮುಡಿಪಾಗಿಟ್ಟವರು.

ಕನ್ನಡಪ್ರಭ ವಾರ್ತೆ ಮೈಸೂರು

ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಮ್ ಅವರನ್ನು ಶೋಷಿತರ ಕಲ್ಯಾಣಕ್ಕಷ್ಟೇ ದುಡಿದರು ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಅದರೊಂದಿಗೆ ಅವರು ಭಾರತ ನಿರ್ಮಾಣಕ್ಕಾಗಿ ಪ್ರಭಾವ ಬೀರಿದವರು ಎಂಬುದನ್ನು ಮರೆಯಬಾರದು ಎಂದು ಮಾಜಿ ಚುನಾವಣಾ ಆಯುಕ್ತ ಎನ್‌.ಸಿ. ಮುನಿಯಪ್ಪ ತಿಳಿಸಿದರು.ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿ ಕಾವೇರಿ ಸಭಾಂಗಣದಲ್ಲಿ ಡಾ. ಬಾಬು ಜಗಜೀವನರಾಮ್‌ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವು ಆಯೋಜಿಸಿರುವ ಡಾ. ಬಾಬು ಜಗಜೀವನರಾಮ್ ಅವರ ದೂರದೃಷ್ಟಿ ಮತ್ತು ಆಧುನಿಕ ಸಮಾಜಕ್ಕೆ ಅವರ ಕೊಡುಗೆಗಳು ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಗುರುವಾರ ಪ್ರಧಾನ ಭಾಷಣ ಮಾಡಿದರು.ಡಾ. ಬಾಬು ಜಗಜೀವನ್‌ ರಾಮ್‌ ಅವರು ಭವ್ಯ ಭಾರತ ನಿರ್ಮಾಣಕ್ಕೆ ಹಾಗೂ ಶೋಷಿತ ವರ್ಗಕ್ಕೆ ಜೀವನ ಮುಡಿಪಾಗಿಟ್ಟವರು. ಬಾಬೂಜಿ ದೂರದೃಷ್ಟಿ ಯೋಜನೆ ಹಾಗೂ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ನಾಗರಿಕ ಸಮಾಜ ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ ಎಂದರು.ಬಾಬೂಜಿ ಅವರು ಪದವಿ‌ ಪಡೆಯುವ ಮೊದಲೇ 1928ರಲ್ಲಿ ಕಲ್ಕತಾ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು. ಬಾಬು ರಾಜೇಂದ್ರ ಪ್ರಸಾದ್ ಒಡನಾಟದಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ನೆಹರು, ಗಾಂಧಿ ಸಂಪರ್ಕಕ್ಕೆ ಬರುತ್ತಾರೆ. ಹೀಗೆ ಯುವಕರಾಗಿದ್ದಲೇ ಸಮಾಜಮುಖಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಅನುಭವವೇ ಆಧುನಿಕ ಭಾರತಕ್ಕೆ ಅವರು ಕೊಡುಗೆ ನೀಡುವಂತೆ ಮಾಡಿತು ಎಂದು ಅವರು ಹೇಳಿದರು.ಸಮ್ಮೇಳನ ಉದ್ಘಾಟಿಸಿದ ಬೆಂಗಳೂರಿನ ಡಾ. ಬಾಬು ಜಗಜೀವನರಾಮ್‌ ಸಂಶೋಧನಾ ಸಂಸ್ಥೆಯ ನಿರ್ದೇಶಕ ರಾಜೇಶ್‌ ಜಿ. ಗೌಡ ಮಾತನಾಡಿ, ಬಾಬೂಜಿ ರಾಷ್ಟ್ರದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ದೇಶದಲ್ಲಿ ಸಮಾನತೆ, ಸಮಾನ ಅವಕಾಶದ ವಿಚಾರಧಾರೆಗೆ ಅನುಗುಣವಾಗಿ ಕೆಲಸ ಮಾಡಿದ್ದು, ಇದನ್ನು ಯುವಜನರಿಗೆ ತಿಳಿಸುವ ಅಗತ್ಯವಿದೆ ಎಂದರು.ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಎಸ್‌.ಕೆ. ನವೀನ್‌ ಕುಮಾರ್‌, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್‌. ಆನಂದ್ ಕುಮಾರ್, ಹಣಕಾಸು ಅಧಿಕಾರಿ ಪ್ರೊ.ಎಸ್‌. ನಿರಂಜನ್‌ ರಾಜ್‌, ಡೀನ್‌ ಗಳಾದ ಪ್ರೊ.ಎಂ. ರಾಮನಾಥಂ ನಾಯ್ಡು, ಡಾ.ಎನ್‌. ಆನಂದ್‌ ಗೌಡ ಇದ್ದರು. ಡಾ. ಬಾಬು ಜಗಜೀವನರಾಮ್‌ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕಿ ಡಾ.ಆರ್. ಶರಣಮ್ಮ ಸ್ವಾಗತಿಸಿದರು. ಗ್ರಂಥಪಾಲಕಿ ಡಾ. ಶೀಲಾ ವಂದಿಸಿದರು. ಸಂಶೋಧನಾ ವಿದ್ಯಾರ್ಥಿ ಬಿ. ವಿಜಯ್ ರಾಜೇಂದ್ರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ.ವೀರೇಂದ್ರ ಹೆಗ್ಗಡೆಗೆ ಸಿದ್ಧಶ್ರೀ ಪ್ರಶಸ್ತಿ
ಮೊರಾರ್ಜಿ ವಸತಿ ಶಾಲೆಯ ಬಾಲಕಿ ಮೇಲೆ ನಿರಂತರ ಅತ್ಯಾಚಾರ: ದೂರು