ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲಿ ಬೇಕಾದರೂ ನಿಲ್ಲಲು ಅವಕಾಶ ಇದೆ. ಸಂಸದ ಜಿಗಜಿಣಗಿ ಅವರಿಗೆ ಪ್ರಜ್ಞೆ ಇಲ್ಲ ಎಂದಿದ್ದಾರೆ. ತಿಳಿವಳಿಕೆಯ ಕೊರತೆ ಇದೆ. ನಿಮಗೆ ತಿಳಿವಳಿಕೆಯೇ ಇಲ್ಲ. ಅವರು ನಿಲ್ಲಬಾರದು ಎಂದು ಎಲ್ಲೂ ಹೇಳಿಲ್ಲ. ಅವರು ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿ ಸ್ಪರ್ಧೆ ಮಾಡಿದರೂ ನಮ್ಮ ನಾಯಕರಾಗಲಿ, ಕಾರ್ಯಕರ್ತರು ಏನೂ ಹೇಳಿಲ್ಲ. ನಮ್ಮ ನಾಯಕರಿಗೆ ಆ ಜ್ಞಾನ ಇದೆ ಎಂದರು.
ಎರಡು ವರ್ಷದಲ್ಲಿ ಬಂದು ನೀವೇನು ದೊಡ್ಡ ಸಾಧನೆ ಮಾಡಿಲ್ಲ. ನಮ್ಮಪಕ್ಷದಲ್ಲಿ ಇದ್ದಿರಿ ಎಂದು ಕೆಲವು ಕಡೆ ಗುರುತಿಸುತ್ತಾರೆ. ಬಂಜಾರ ಸಮಾಜದ ನಾಯಕರು ಕೂಡ ಬಿಜೆಪಿ ಜೊತೆ ಇದ್ದಾರೆ. ಸಣ್ಣತನ ಮಾತನಾಡುವುದು ಸರಿಯಲ್ಲ. ನಡವಳಿಕೆಯನ್ನು ತಿದ್ದಿಕೊಳ್ಳಲಿ ಎಂದು ತಿಳಿ ಹೇಳಿದರು.ಆರ್‌ಎಸ್‌ಎಸ್ ಸ್ವಯಂ ಸೇವಕ ಎಂದು ಹೇಳಿಕೊಳ್ಳುವ ಡಾಕ್ಟರ್ ಬಾಬು ರಾಜೇಂದ್ರ ನಾಯಕ ಅವರು ಯಾವ ಶಾಖೆಗೆ ಎಷ್ಟು ವರ್ಷ ಹೋಗಿದಾರೋ ಅಥವಾ ಎಷ್ಟು ತಿಂಗಳು ಹೋಗಿದಾರೋ ಎಂಬುವುದನ್ನು ತಿಳಿಸಬೇಕು ಎಂದು ಗೋಪಾಲ ಘಟಕಾಂಬಳೆ ಲೇವಡಿ ಮಾಡಿದರು.
ಭೀಮಶಿ ರಾಠೋಡ ಮಾತನಾಡಿದರು. ಈ ವೇಳೆ ಭೀಮಸಿಂಗ ರಾಠೋಡ, ಡಾ. ಅರವಿಂದ ನಾಯಿಕ, ಮಂತ್ರಿ ಚವ್ಹಾಣ, ಪಿಂಟು ರಾಠೋಡ, ತಾರಾಸಿಂಗ ನಾಯಿಕ,ವಿಜಯ ಜೋಶಿ ಸೇರಿದಂತೆ ಹಲವರು ಇದ್ದರು.