ಔರಾದ್: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ತಾಯಿಯಿಂದ ಮಗುವಿಗೆ ಎಚ್ಐವಿ, ಶಿಫಿಲಿಸ್ ಮತ್ತು ಹೆಪ್ಟೈಟಿಸ್ ಹರಡುವಿಕೆ ನಿರ್ಮೂಲನೆಗಾಗಿ ಆಂದೋಲನ ಕಾರ್ಯಕ್ರಮ ನಡೆಯಿತು.
ಐಸಿಟಿಸಿಯ ಆಪ್ತ ಸಮಾಲೋಚಕಿ ಪುಷ್ಪಾಜಂಲಿ ಎಮ್ ಪಾಟೀಲ ಮಾತನಾಡಿ, ಎಚ್ಐವಿ ಸ್ಥಿತಿಗತಿ ಮೂದಲ ಮೂರು ತಿಂಗಳ ಅವಧಿಯಲ್ಲಿ ಒಳಗಡೆ ಎಚ್ಐವಿ, ಶಿಫಿಲಿಸ್ ಮತ್ತು ಹೆಪ್ಟೈಟಿಸ್ ಬಿ ಪರಿಕ್ಷೆಯನ್ನು ಮಾಡಿಕೊಳ್ಳಬೇಕು ಏಕೆಂದರೆ ನಿಮ್ಮಿಂದ ಹುಟ್ಟುವ ಮಗುವಿಗೆ ಈ ರೋಗಗಳು ತಡೆಯಲು ಸಹಕಾರಿಯಾಗುತ್ತದೆ ಇದಕ್ಕಾಗಿ ಪ್ರತಿ ಗರ್ಭಿಣಿ ಮಹಿಳೆಯರು ತಪಾಸಣೆಗೆ ಒಳಪಡಿಸುವ ಮೂಲಕ ಜಾಗೃತಿ ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 40 ಗರ್ಭಿಣಿ ಮಹಿಳೆಯರಿಗೆ ಬ್ಲೌಸ್ ಫಿಸ್, ಬಳೆ, ಬಾಳೆಹಣ್ಣು, ಅರಿಶಿಣ, ಅಕ್ಕಿ, ಕುಂಕುಮ, ಅಡಿಕೆ, ವಿಳ್ಯದೆಲೇ ನಿಡುವ ಮೊಲಕ ಉಡಿ ತುಂಬಿ ಸಿಮಂತ ಕಾರ್ಯಕ್ರಮ ಮಾಡಿದರು.ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ ಆಪ್ತ ಅಂಬಿಕಾ ದುನಗೆ, ಎಎನ್ಎಮ್ ಶೋಭಾ, ರಾಧಾ, ಹಿರಿಯ ಪ್ರಯೋಗಾಲ ತಂತ್ರಜ್ಞೆ ಆಶಾಲತಾ, ಶುಶುಶ್ರಕಿ ಕಾಂತಮ್ಮ, ಶಾಂತ, ಸಂಗೀತ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಇದ್ದರು.