ಶಿವಪುರ-ಬೊಮ್ಮಲಾಪುರ ನಡುವೆ ಹದಗೆಟ್ಟ ರಸ್ತೆ!

KannadaprabhaNewsNetwork |  
Published : May 27, 2024, 01:07 AM IST
ಶಿವಪುರ,ಬೊಮ್ಮಲಾಪುರ ನಡುವಿನ ಹದಗೆಟ್ಟ ರಸ್ತೆ! | Kannada Prabha

ಸಾರಾಂಶ

ತಾಲೂಕಿನ ಶಿವಪುರ-ಬೊಮ್ಮಲಾಪುರ ನಡುವಿನ ಸಂಪರ್ಕ ರಸ್ತೆಯ ಸಮಸ್ಯೆಯನ್ನು ತಾಲೂಕು ಆಡಳಿತ ಕೂಡಲೇ ಸಮಸ್ಯೆ ಬಗೆಹರಿಸಿ. ಇಲ್ಲವೇ ಚಳುವಳಿ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ರೈತಸಂಘದ ನೂತನ ಅಧ್ಯಕ್ಷ ಶಿವಪುರ ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಶಿವಪುರ-ಬೊಮ್ಮಲಾಪುರ ನಡುವಿನ ಸಂಪರ್ಕ ರಸ್ತೆಯ ಸಮಸ್ಯೆಯನ್ನು ತಾಲೂಕು ಆಡಳಿತ ಕೂಡಲೇ ಸಮಸ್ಯೆ ಬಗೆಹರಿಸಿ. ಇಲ್ಲವೇ ಚಳುವಳಿ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ರೈತಸಂಘದ ನೂತನ ಅಧ್ಯಕ್ಷ ಶಿವಪುರ ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ಶಿವಪುರ-ಬೊಮ್ಮಲಾಪುರ ರಸ್ತೆಯಲ್ಲಿ ರೈತರೊಬ್ಬರಿಗೆ ಜಮೀನಿನಲ್ಲಿ ರಸ್ತೆ ಮಾಡಿದ್ದಾರೆಂದು ರೈತರು ಹದಗೆಟ್ಟ ರಸ್ತೆ ದುರಸ್ಥಿ ಬಿಟ್ಟಿಲ್ಲ ಎಂಬ ದೂರಿದೆ. ಈ ದೂರನ್ನು ಬಗೆಹರಿಸಲು ತಾಲೂಕು ಆಡಳಿತಕ್ಕೆ ಎಷ್ಟು ವರ್ಷಗಳು ಬೇಕು ಎಂದು ಪ್ರಶ್ನಿಸಿದ್ದಾರೆ?. ತಾಲೂಕು ಆಡಳಿತ ರಸ್ತೆ ದುರಸ್ಥಿಗೆ ತಡೆ ಹಿಡಿದಿರುವ ರೈತರ ಮನವೊಲಿಸಿ ಸಾರ್ವಜನಿಕರು ತಿರುಗಾಡುವ ರಸ್ತೆ ದುರಸ್ಥಿ ಪಡಿಸಲು ಜನರು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಮಳೆಗಾಲದಲ್ಲಿ ಹದಗೆಟ್ಟ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಆಗುತ್ತಿಲ್ಲ. ಬೈಕ್‌, ಸೈಕಲ್‌ ಸವಾರರ ಪಾಡು ಹೇಳ ತೀರದಾಗಿದೆ. ಇಷ್ಟೆಲ್ಲ ಸಮಸ್ಯೆಗಳನ್ನು ಜನರು ಅನುಭವಿಸುತ್ತಿದ್ದರೂ ತಾಲೂಕು ಆಡಳಿತ ಗಮನ ಹರಿಸಿ ರಸ್ತೆ ದುರಸ್ಥಿ ಮಾಡಿಸಲು ಮುಂದಾಗದಿರುವುದು ದುರಂತವೇ ಸರಿ ಎಂದಿದ್ದಾರೆ.

ಕ್ಷೇತ್ರದ ಶಾಸಕರು ಹಾಗೂ ತಾಲೂಕು ಆಡಳಿತ ಕೂಡ ಈ ವಿಚಾರದಲ್ಲಿ ವಿಶೇಷ ಆಸಕ್ತಿ ವಹಿಸಿ ಸಂಚಾರಕ್ಕೆ ತೊಂದರೆಯಾಗಿರುವ ಹತ್ತಾರು ಗ್ರಾಮಗಳ ಜನರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಹದಗೆಟ್ಟ ರಸ್ತೆಯಲ್ಲಿಯೇ ಈ ಭಾಗದ ಜನರೊಂದಿಗೆ ಸೇರಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ