₹59 ಲಕ್ಷ ಉಳಿತಾಯದೊಂದಿಗೆ ₹ 23.55 ಕೋಟಿ ಆಯವ್ಯಯ

KannadaprabhaNewsNetwork |  
Published : Feb 16, 2024, 01:52 AM IST
ಮಮ | Kannada Prabha

ಸಾರಾಂಶ

ಜಗತ್ತಿನ ವೇಗಕ್ಕೆ ಭಾರತ ಕೊಂಡೊಯ್ಯುತ್ತಿರುವ ಸಂದರ್ಭದಲ್ಲಿ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಆದ್ಯತೆ, ಜಲವೇ ಜೀವ, ಬೆಳಕೆ ಭದ್ರತೆ ಕಾರ್ಯಕ್ರಮಗಳನ್ನು ಪ್ರಸಕ್ತ ಬಜೆಟ್‌ನಲ್ಲಿ ಕಟ್ಟುನಿಟ್ಟಾಗಿ ಅಳವಡಿಸಲಾಗಿದೆ

ಬಜೆಟ್‌ ಮಂಡಿಸಿದ ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ । ಕಳೆದ ಸಾಲಿಗಿಂತ ಶೇ.20ರಷ್ಟು ಹೆಚ್ಚಿದ ಯೋಜನಾಗಾತ್ರ

ಕನ್ನಡಪ್ರಭ ವಾರ್ತೆ ಬ್ಯಾಡಗಿ

‘ಜನಸೇವೆಯೇ ಜನಾರ್ಧನ ಸೇವೆ’, ‘ಆರೋಗ್ಯವೇ ಭಾಗ್ಯ ಸ್ವಚ್ಚತೆಯೇ ಸೌಭಾಗ್ಯ’ ಧ್ಯೇಯವಾಕ್ಯಗಳನ್ನು ಘೋಷಿಸುವ ಮೂಲಕ ₹59.47 ಲಕ್ಷ ಉಳಿತಾಯದೊಂದಿಗೆ ₹23.55 ಕೋಟಿ ಯೋಜನಾ ಗಾತ್ರದ 2024-25 ಸಾಲಿನ ಪುರಸಭೆ ಬಜೆಟ್‌ನ್ನು ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೊಳ್ಳ ಮಂಡಿಸಿದರು.

ಬಳಿಕ ಮಾತನಾಡಿದ ಮುಖ್ಯಾಧಿಕಾರಿ, ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ ಒತ್ತು ನೀಡಿ, ಮೂಲ ಸೌಕರ್ಯ ಕಲ್ಪಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸುಂದರ ಪಟ್ಟಣ ಮಾಡುವ ದೂರದೃಷ್ಟಿಯನ್ನು ಸದರಿ ಬಜೆಟ್‌ನಲ್ಲಿ ಆಶಿಸಲಾಗಿದೆ. ಜಗತ್ತಿನ ವೇಗಕ್ಕೆ ಭಾರತ ಕೊಂಡೊಯ್ಯುತ್ತಿರುವ ಸಂದರ್ಭದಲ್ಲಿ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಆದ್ಯತೆ, ಜಲವೇ ಜೀವ, ಬೆಳಕೆ ಭದ್ರತೆ ಕಾರ್ಯಕ್ರಮಗಳನ್ನು ಪ್ರಸಕ್ತ ಬಜೆಟ್‌ನಲ್ಲಿ ಕಟ್ಟುನಿಟ್ಟಾಗಿ ಅಳವಡಿಸಲಾಗಿದೆ ಎಂದರು.

ಆದಾಯ ನಿರೀಕ್ಷೆ:

ಎಸ್‌ಎಫ್‌ಸಿ ಮುಕ್ತನಿಧಿಯಿಂದ ₹40 ಲಕ್ಷ, ವಿಶೇಷ ಅನುದಾನದಿಂದ ₹47.39 ಲಕ್ಷ ನಿರೀಕ್ಷೆಯಿದ್ದು, ಸಾಮಾನ್ಯ ಮೂಲ ಅನುದಾನ (15ನೇ ಹಣಕಾಸು) ₹1.25 ಕೋಟಿ, ಎಸ್‌ಎಫ್‌ಸಿ ಕುಡಿಯುವ ನೀರು ಸುಧಾರಣಾ ಅನುದಾನ ₹4.5 ಲಕ್ಷ, ಗೃಹಭಾಗ್ಯ ಯೋಜನೆಯಡಿ ₹6 ಲಕ್ಷ, ಎಸ್‌ಎಫ್‌ಸಿ ಹಾಗೂ ಪುರಸಭೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲು ಅನುದಾನ (ಶೇ.29) ₹28.84 ಲಕ್ಷ, ಸಾಮಾನ್ಯ ವರ್ಗಕ್ಕ ಮೀಸಲು (7.25) ₹6.61 ಲಕ್ಷ, ಅಂಗವಿಕಲರ ಮೀಸಲು ನಿಧಿ ₹4.54 ಲಕ್ಷ, ಎಸ್‌ಬಿಎಂ ಹಾಗೂ ಎಸ್‌ಎಫ್‌ಎಂ ₹25 ಲಕ್ಷ, ಪಾರಂಪರಿಕ ತ್ಯಾಜ್ಯ ಸಂಗ್ರಹಣಾ ಅನುದಾನ ₹50 ಲಕ್ಷ, ಮಳಿಗೆ ಬಾಡಿಗೆ ₹65 ಲಕ್ಷ, ಆಸ್ತಿತೆರಿಗೆ (ಎಸ್‌ಎಎಸ್) ₹1.90 ಕೋಟಿ, ನೀರಿನಕರ ₹ 1.20 ಕೋಟಿ, ಖಾತೆ ಬದಲಾವಣೆ ₹2.50 ಲಕ್ಷ, ಬ್ಯಾಂಕ್ ಬಡ್ಡಿ ₹25 ಲಕ್ಷ, ಸಂತೆ ಹರಾಜು ₹23 ಲಕ್ಷ, ಮೇಲ್ವಿಚಾರಣೆ ಫೀ ₹ 55 ಲಕ್ಷ, ಕಟ್ಟಡ ಪರವಾನಗಿ ₹6 ಲಕ್ಷ, ವಿದ್ಯುತ್ ಅನುದಾನ ₹5.39 ಕೋಟಿ, ಘನತ್ಯಾಜ್ಯ ವಸ್ತು ನಿರ್ವಹಣೆ ₹16 ಲಕ್ಷ, ಸಕ್ಕಿಂಗ್ ಮಿಶಿನ್ ಬಾಡಿಗೆ ₹ 1.50 ಲಕ್ಷ, ಸ್ಟಾಂಪ್ ಡ್ಯೂಟಿ ₹3 ಲಕ್ಷ, ಉಪಕರ ಸಂಗ್ರಹಣಾ ಶುಲ್ಕ ₹5.54 ಲಕ್ಷ, ಟ್ರೇಡ್ ಲೈಸನ್ಸ್ ₹6.45 ಲಕ್ಷ, ಅಭಿವೃದ್ಧಿ ಕರ ₹ 2.50 ಲಕ್ಷ ಸೇರಿದಂತೆ ಒಟ್ಟು ₹23.55 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.

ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ₹40 ಲಕ್ಷ, 15ನೇ ಹಣಕಾಸು ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ₹1.60 ಲಕ್ಷ, ಉದ್ಯಾನವನ ಅಭಿವೃದ್ಧಿಗೆ ₹20 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ₹1.22 ಕೋಟಿ, ಶೇ.24.10 ಅನುದಾನ ಬಳಕೆಗೆ ₹28.84 ಲಕ್ಷ, ಅಂಗವಿಕಲರ ಕ್ಷೇಮಾಭಿವೃದ್ಧಿ (ಶೇ.5) ₹4.54 ಲಕ್ಷ ಮೀಸಲು ಬಳಕೆಗೆ ನಿಗದಿಪಡಿಸಲಾಗಿದೆ. ನೀರು ನಿರ್ವಹಣೆ ₹72.50 ಲಕ್ಷ, ವಿದ್ಯುತ್ ದೀಪ ಅಳವಡಿಕೆ ಹಾಗೂ ನಿರ್ವಹಣೆ ₹ 26 ಲಕ್ಷ, ಕ್ರೀಡಾ ಚಟುವಟಿಕೆ ₹ 4 ಲಕ್ಷ, ವಾಹನ ವಿಮೆ ₹3 ಲಕ್ಷ, ಇಂಧನ ವೆಚ್ಚ ₹40 ಲಕ್ಷ, ಮನೆಮನೆ ಕಸ ಸಂಗ್ರಹಣೆ ₹ 13 ಲಕ್ಷ, ಗುತ್ತಿಗೆ ಪೌರ ಕಾರ್ಮಿಕರ ವೇತನ ₹ 55 ಲಕ್ಷ, ನೀರು ಸರಬರಾಜು ಗುತ್ತಿಗೆ ಸಿಬ್ಬಂದಿ ವೇತನ ₹ 60 ಲಕ್ಷ, ನಲ್ಮ ಯೋಜನೆ ಅನುಷ್ಠಾನಕ್ಕೆ ₹ 5 ಲಕ್ಷ, ಮುದ್ರಣ ವೆಚ್ಚ ₹10 ಲಕ್ಷ, ಜಾಹೀರಾತು ಮತ್ತು ಪ್ರಚಾರ ₹10 ಲಕ್ಷ, ಕಚೇರಿ ಉಪಕರಣ ಖರೀದಿ ₹15 ಲಕ್ಷ, ವಾಹನ ಖರೀದಿ ₹23.50 ಲಕ್ಷ, ಸ್ಮಶಾನ ಅಭಿವೃದ್ಧಿಗೆ ₹10 ಲಕ್ಷ ಸೇರಿದಂತೆ ಒಟ್ಟು ₹22.96 ಕೋಟಿ ವ್ಯಯಿಸಲು ಪ್ರಸಕ್ತ ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ ಎಂದರು.

ಸೌಭಾಗ್ಯ ಬಳಿಗಾರ ಸ್ವಾಗತಿಸಿ, ಎಂ.ಪಿ. ಯಲ್ಲಣ್ಣನವರ ವಂದಿಸಿದರು. ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ