ಕುರುಗೋಡು: ತಾಲೂಕು ಸಮೀಪದ ಬಾದನಹಟ್ಟಿ ಗ್ರಾಮದ ಸದ್ಗುರು ಕರಿಬಸವ ಶರಣ ನೇತೃತ್ವದಲ್ಲಿ ೩೧ನೇ ವರ್ಷದ ಶ್ರೀಶೈಲ ಪಾದಯಾತ್ರೆ ಬುಧವಾರ ಪ್ರಾರಂಭಗೊಂಡಿತು.
ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸದ್ಗುರು ಕರಿಬಸವ ಶರಣರು, ನಾಡಿಕೆ ಉತ್ತಮ ಮಳೆಬೆಳೆ ಬರಲಿ, ರೈತಾಪಿ ವರ್ಗ ಹರ್ಷಚಿತ್ತರಾಗಲು ಎಂಬ ಲೋಕ ಕಲ್ಯಾಣಾರ್ಥವಾಗಿ ಕಳೆದ ೩೨ ವರ್ಷಗಿಳಿಂದ ಶ್ರೀಶೈಲಕ್ಕೆ ಪಾದಯಾತ್ರೆ ತೆರಳುತ್ತಿದ್ದೇನೆ. ಈ ಯಾತ್ರೆಯಲ್ಲಿ ವೃದ್ಧರು ಮತ್ತು ಮಹಿಳೆಯರು ಭಾಗವಹಿಸುವುದು ವಿಶೇಷ ಎಂದರು.
ಕುರುಗೋಡು ಯಲ್ಲಮ್ಮತಾಯಿ ಮಾತನಾಡಿ, ಶಿವಯೋಗಿ ಬಸಯ್ಯತಾತನವರ ಮಠದಿಂದ ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದರ್ಶನಕ್ಕೆ ೩೨ನೇ ವರ್ಷದ ಶ್ರೀಶೈಲ ಪಾದಯಾತ್ರೆ ಹಮ್ಮಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.ನಂತರ ಸಾಲು ಸಾಲಾಗಿ ಬಂದ ಪಾದಯಾತ್ರಿಗಳಿಗೆ ಶ್ರೀಗಾದಿಲಿಂಗಪ್ಪತಾತನವರ ಸಂಘದ ಸದಸ್ಯರು ಅನ್ನಸಂತರ್ಪಣೆ ಮಾಡಿ ಸಿಂದಿಗೇರಿ ಮಾರ್ಗದ ಮೂಲಕ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಕುರುಗೋಡು ಶ್ರೀಗಾದಿಲಿಂಗಪ್ಪತಾತನವರ ಸಂಘದ ಸದಸ್ಯರು, ಬಾದನಹಟ್ಟಿ ಗ್ರಾಮದ ಭಕ್ತರು ಇದ್ದರು.
ಫೋಟೋ; ಕುರುಗೋಡು೧ಕುರುಗೋಡು ತಾಲೂಕು ಸಮೀಪದ ಬಾದನಹಟ್ಟಿ ಗ್ರಾಮದ ಭಕ್ತರು ಸದ್ಗುರು ಕರಿಬಸವ ಶರಣ ನೇತೃತ್ವದಲ್ಲಿ ೩೨ನೇ ವರ್ಷದ ಪಾದಯಾತ್ರೆ ಪ್ರಾರಂಭಿಸಿದರು.