ಕುರುಗೋಡು: ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಶುಕ್ರವಾರ ಶ್ರೀರಾಮನವಮಿ ಸಂಜೆ ಬಾವಿ ಆಂಜನೇಯಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶ್ರೀರಾಮನವಮಿ ಬೆಳಿಗ್ಗೆ ಹೋಮ, ಹವನ, ವಿಶೇಷ ಪೂಜೆ ಧಾರ್ಮಿಕ ವಿಧಿಧಿವಿಧಾನಗಳು ಜರುಗಿದವು. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಹೂ, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.
ಇಟಗಿ ಹಿರೇಮಠ ಸಂಸ್ಥಾನದ ಗುರುಶಾಂತವೀರ, ಕಲ್ಲುಕಂಭ ರುದ್ರಮುನಿ ತಾತ ಮತ್ತು ಕರಿಬಸವ ಶರಣರು ಪೂಜೆಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.ಇದ್ದರು.ಸಂಜೆ ಅಂಕೃತ ರಥವನ್ನು ದೇವಸ್ಥಾನದ ಆವರಣದಿಂದ ಪಾದಗಟೆ ವರೆಗೆ ಎಳೆದು ನಂತ ಸ್ವಸ್ಥಳಕ್ಕೆ ಭಕ್ತರು ಎಳೆದುತಂದರು. ರಥ ಎಳೆಯುವ ಸಂದರ್ಭದಲ್ಲಿ ಭಕ್ತರು ಆಂಜನೇಯಸ್ವಾಮಿಗೆ ಜಯಕಾರ ಕೂಗಿದರು.
ರಥೋತ್ವದ ಅಂಗವಾಗಿ ಕಳೆದ ಒಂಭತ್ತು ದಿನಗಳ ಕಾಲ ಜರುಗಿದ ಸಪ್ತಭಜನೆ ಶುಕ್ರವಾರ ಕೊನೆಗೊಂಡಿತು.
ಕುರುಗೋಡು ತಾಲೂಕಿನ ಸಮೀಪದ ಬಾದನಹಟ್ಟಿ ಗ್ರಾಮದಲ್ಲಿ ಶ್ರೀರಾಮನವಮಿ ಶುಕ್ರವಾರ ಆಂಜನೇಯಸ್ವಾಮಿ ಮಹಾರಥೋತ್ಸವ ಜರುಗಿತು.