ಬಾದಿಮರಳೂರು ಮನೆಗಳ ಗೋಡೆಗೆ ವಿದ್ಯುತ್ ತಂತಿ: ಬೆಸ್ಕಾಂ ಅಧಿಕಾರಿಗಳ ವಿರುದ್ಧ ಶಾಪ

KannadaprabhaNewsNetwork | Published : Nov 21, 2024 1:00 AM

ಸಾರಾಂಶ

ಬಾದಿಮರಳೂರು ಗ್ರಾಮದಲ್ಲಿ ಗಂಗಪ್ಪ ಎಂಬುವವರ ಮನೆಯ ಗೋಡೆಗೆ ಕಬ್ಬಿಣ ಆಂಗಲ್ ಅನ್ನು ಅಳವಡಿಸಿ ಬೆಸ್ಕಾಂನವರು ಸೆಕೆಂಡರಿ ಲೈನ್ (ಪ್ರೈಮರಿ ಲೈನ್) ನಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಅಕಾಲಿಕ ವಿದ್ಯುತ್ ಪ್ರಸಾರದಿಂದಾಗಿ ಅಮಾಯಕ ಜನರು ಜೀವ ಹರಣವಾಗುತ್ತಿದ್ದರೂ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ತಾಲ್ಲೂಕಿನ ಬೈಚಾಪುರ ಪಂಚಾಯಿತಿ ವ್ಯಾಪ್ತಿಯ ಬಾದಿಮರಳೂರು ಗ್ರಾಮದಲ್ಲಿ ಗಂಗಪ್ಪ ಎಂಬುವವರ ಮನೆಯ ಗೋಡೆಗೆ ಕಬ್ಬಿಣ ಆಂಗಲ್ ಅನ್ನು ಅಳವಡಿಸಿ ಬೆಸ್ಕಾಂನವರು ಸೆಕೆಂಡರಿ ಲೈನ್ (ಪ್ರೈಮರಿ ಲೈನ್) ನಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡಿರುತ್ತಾರೆ. ಇದರಿಂದ ನೆಲಕ್ಕೊರಗಿರುವ ವಿದ್ಯುತ್ ತಂತಿಗಳು ಕೈಗಟಕುತ್ತಿವೆ.

ಇತ್ತೀಚೆಗೆ ಸುರಿದ ಭಾರೀ ಮಳೆಗೆ ಗಂಗಪ್ಪನವರ ಮನೆಯಲ್ಲಿ ವಿದ್ಯುತ್ ಅವಘಡ (ಶಾಕ್ ಸರ್ಕ್ಯೂಟ್) ಉಂಟಾಗಿ ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯವಾಗಿರಲಿಲ್ಲ. ಉರುಳಿಬಿದ್ದ ತಂತಿಗಳು ಕಂಬದಲ್ಲಿ ಯಾವ ಕ್ಷಣದಲ್ಲಿ ಯಾರ ಪ್ರಾಣವನ್ನು ಹರಣ ಮಾಡುವುದೋ ಎಂಬ ಆತಂಕ ಮೂಡಿದೆ.

ಯಾವುದಾದರು ಅವಘಡ ಸಂಭವಿಸಿದ ನಂತರ ಸ್ಥಳಕ್ಕೆ ದೌಡಾಯಿಸುವ ಅಧಿಕಾರಿಗಳು ಅವಘಡ ನಡೆಯುವ ಮುನ್ನವೇ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡರೆ ಅವಘಡಗಳನ್ನು ತಡೆಯಬಹುದು. ಆದರೆ ಅಧಿಕಾರಿಗಳಿಗೆ ಆದರೆ ಅಧಿಕಾರಿಗಳಿಗೆ ಮಾತ್ರ ಇದು ಕಣ್ಣಿಗೆ ಕಾಣುತ್ತಿಲ್ಲ. ಇಂತಹ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಾದಿ ಮರಳೂರು ಗ್ರಾಮಸ್ಥರು ತಿಳಿಸಿದ್ದಾರೆ.

ಕೋಟ್‌......

ಕಳೆದ ವಾರದಲ್ಲಿ ವಿದ್ಯುತ್‌ ಕಂಬವೊಂದರ ಕೆಳಗೆ ವಿದ್ಯುತ್ ಅವಘಡದಿಂದ ಶ್ವಾನವೊಂದು ಸಾವನ್ನಪಿತ್ತು. ಗ್ರಾಮದಲ್ಲಿ ಅನೇಕ ವಿದ್ಯುತ್‌ ತಂತಿಗಳು ನೆಲಕ್ಕುರುಳಿ ಅನೇಕ ವರ್ಷ ಕಳೆದಿವೆ. ಈ ಕುರಿಂತಂತೆ ಅಧಿಕಾರಿಗಳಿಗೆ ಅನೇಕ ಸಾರಿ ಗ್ರಾಮಸ್ಥರು ಮನವಿ ಮಾಡಿದ್ದರೂ ಯಾರೊಬ್ಬರು ಕ್ರಮಕೈಗೊಂಡಿಲ್ಲ

-ಗಂಗಪ್ಪ, ಬಾದಿ ಮರಳೂರು ನಿವಾಸಿ

........

ನಾನು ಇಲ್ಲಿಗೆ ಬಂದು ಎರಡು ತಿಂಗಳಾಗಿದೆ. ಇದರ ಬಗ್ಗೆ ನನಗೆ ಮಾಹಿತಿ ಇರಲಿಲ್ಲ, ಇಂದು ನನಗೆ ವಿಷಯ ತಿಳಿದು ಬಂದಿದೆ ತಕ್ಷಣ ಅವ್ಯವಸ್ಥೆಯನ್ನಯ ಸರಿಪಡಿಸಲು ಸಿಬ್ಬಂದಿಗೆ ತಿಳಿಸಿದ್ದೇನೆ.

ಶೇಖರ್ ಸಿಂಗ್. ಬೆಸ್ಕಾಂ ಅಧಿಕಾರಿ

Share this article