15, 16ರಂದು ಬ್ಯಾಡ್ಮಿಂಟನ್, ಸ್ನೂಕರ್ ಟೂರ್ನಮೆಂಟ್

KannadaprabhaNewsNetwork |  
Published : Mar 07, 2025, 11:46 PM IST
ನಾಪೋಕ್ಲು ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ ಮನರಂಜನಾ ಕೂಟದ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.  | Kannada Prabha

ಸಾರಾಂಶ

ಮೂರನೇ ವರ್ಷದ ಕೊಡವ ಬ್ಯಾಡ್ಮಿಂಟನ್‌ ಮತ್ತು ಸ್ನೂಕರ್‌ ಟೂರ್ನಮೆಂಟ್‌ ಅನ್ನು ಮಾ. 15ರಂದು 16ರಂದು ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಕೊಡವ ಸಮಾಜದ ಕ್ರೀಡೆ, ಸಾಂಸ್ಕೃತಿಕ ಮತ್ತು ಮನರಂಜನಾ (ಕ್ಲಬ್) ಕೂಟದ ವತಿಯಿಂದ ಮೂರನೇ ವರ್ಷದ ಕೊಡವ ಬ್ಯಾಡ್ಮಿಂಟನ್ ಮತ್ತು ಸ್ನೂಕರ್ ಟೂರ್ನಮೆಂಟ್ ಅನ್ನು ಮಾರ್ಚ್ 15 ಮತ್ತು 16ರಂದು ಸಮಾಜದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು (ಕ್ಲಬ್) ಕೂಟದ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ತಿಳಿಸಿದರು.

ಸ್ಥಳೀಯ ಕೊಡವ ಸಮಾಜದ (ಕ್ಲಬ್) ಕೂಟದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಕೊಡವ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ನೂರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ಕ್ಲಬ್ ವತಿಯಿಂದ ನಡೆಯುವ ಮೂರನೇ ವರ್ಷದ ಟೂರ್ನಮೆಂಟ್ ಇದಾಗಿದ್ದು ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪುರುಷರ ಡಬಲ್ಸ್ 20 ವರ್ಷ ಒಳಗಿನವರಿಗೆ, 20 –35 ವಯೋಮಿತಿ, 35 -50 ವರ್ಷ ವಯೋಮಿತಿ ಹಾಗೂ 50 ವರ್ಷ ಮೇಲ್ಪಟ್ಟು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಮುಕ್ತ ಮಿಕ್ಸ್ ಡ್ ಡಬಲ್ಸ್

ಬ್ಯಾಡ್ಮಿಂಟನ್ ಸ್ಪರ್ಧೆಯು ನಡೆಯಲಿದೆ. ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಗುವುದು ಎಂದ ಅವರು ಈ ಸಂದರ್ಭ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.

ಈ ವರ್ಷ ವಿಶೇಷವಾಗಿ ಕೊಡವ ಪುರುಷರ ಡಬಲ್ಸ್ ಸ್ನೂಕರ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಗೆ ಆದ್ಯತೆ ಮೇರೆಗೆ 30 ಮಂದಿಗೆ ಅವಕಾಶ ಕಲ್ಪಿಸಲಾಗುವುದು. ಪ್ರಥಮ ಮತ್ತು ದ್ವಿತೀಯ ನಗದು ಬಹುಮಾನಗಳನ್ನು ವಿತರಿಸಲಾಗುವುದು ಎಂದರು.

ಪ್ರವೇಶ ಶುಲ್ಕದೊಂದಿಗೆ ಪ್ರವೇಶವನ್ನು ಸ್ವೀಕರಿಸಲು ಮಾರ್ಚ್ 12 .ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಮೊ.9448647357 ಸಂಪರ್ಕಿಸಲು ಕೋರಲಾಗಿದೆ.

ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಉಪಾಧ್ಯಕ್ಷ ಕೊಂಡಿರ ನಂದ ಕುಮಾರ್, ಕಾರ್ಯದರ್ಶಿ ನಾಯಕಂಡ ದೀಪು ಚಂಗಪ್ಪ, ಖಜಾಂಚಿ ಕಲಿಯಂಡ ಕೌಶಿ ಕುಶಾಲಪ್ಪ, ಸಮಿತಿ ಸದಸ್ಯರಾದ ಬೊಪ್ಪೆರ ಜಯ ಉತ್ತಪ್ಪ, ಅರೆಯಡ ಗಣೇಶ್ ಬೆಳ್ಳಿಪ್ಪ, ಕುಡ್ಯೋಳಂಡ ಶಬನ್ ಪಳಂಗಪ್ಪ ಉಪಸ್ಥಿತರಿದ್ದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ