ಕನ್ನಡಪ್ರಭ ವಾರ್ತೆ ಕಲಾದಗಿ
ಗ್ರಾಮದ ರಂಗಮಂದಿರಿಂದ ಪ್ರಾರಂಭವಾದ ಬಾಗಿನ ಮೆರವಣಿಗೆ ಬಸ್ ನಿಲ್ದಾಣ. ಪೊಲೀಸ್ ಠಾಣೆ. ಅಂಕಲಗಿ ರಸ್ತೆ ಮುಖಾಂತರ ಸಾಗಿ ಕಾತರಕಿ ಕಲಾದಗಿ ಬ್ಯಾರೇಜಿನಲ್ಲಿ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ ಎಂ ಸಾಹುಕಾರ ತಾಲೂಕು ಅಧ್ಯಕ್ಷ ಎಸ್ ಬಿ ಕಟಗಿ ನೇತೃತ್ವದಲ್ಲಿ ಬಾಗಿನ ಅರ್ಪಣೆ ಮಾಡಲಾಯಿತು.
ಈ ವೇಳೆ ಜಿ.ಕೆ.ತಳವಾರ, ಜಿಲ್ಲಾ ಕಾರ್ಯದರ್ಶಿ ನಬಿ ವಾಲೆ, ವಲಯ ಘಟಕದ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಕಾರ್ಯದರ್ಶಿ ಮಲೀಕ ಮಕಾನದಾರ, ಗ್ರಾಮ ಘಟಕದ ಅಧ್ಯಕ್ಷ ರಜಾಕ ಗೌಂಡಿ, ಕಾರ್ಯದರ್ಶಿ ಶ್ರೀಧರ ಮಾದರ, ಕಲೆ ಮತ್ತು ಸಾಂಸ್ಕೃತಿಕ ರಕ್ಷಣಾ ವೇದಿಕೆ ಅಧ್ಯಕ್ಷ ಮಲ್ಲಪ್ಪ ಜಮಖಂಡಿ, ವಲಯ ಘಟಕದ ಸಂಚಾಲಕ ಹನುಮಂತ ಹೊಸಕೋಟಿ, ಗಂಗಪ್ಪ ಮಾದರ, ಗ್ರಾಮ ಘಟಕದ ಸಂಚಾಲಕ ಭೀಮಶಿ ಕರಡಿಗುಡ್ಡ, ಬಸವರಾಜ ಬಿಲಕೇರಿ, ನಾಗಪ್ಪ ಗಾಣಿಗೇರ, ರಿಯಾಜ ಪೀರ್ ಜಾದೆ, ರಜಾಕ ನದಾಫ್, ಮಂಜುನಾಥ್ ಕಾಳೆ, ಭೀಮಶಿ ಭಜಂತ್ರಿ, ಗೋಪಾಲ ಭಜಂತ್ರಿ, ಮಲ್ಲು ಜಾಡರ, ಸಿಕಂದರ್ ಭಾವಖಾನ, ರಾಮಣ್ಣ ಕ್ವಾಟಿ, ನಿಂಗಪ್ಪ ಬೂದಿಹಾಳ, ಯಮನಪ್ಪ ಮಾದರ, ನಬಿ ನದಾಫ್, ಎಂ.ಎಚ್ ನದಾಫ್ ಸೇರಿದಂತೆ ಇತರರು ಇದ್ದರು.