ಕಡೂರಿನ ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರದಿಂದ ನಡೆದ 5 ನೇ ರಾಜ್ಯಮಟ್ಟದ ಯೋಗ ಚಾಂಪಿಯನ್ ಶಿಪ್
ಕಲಿತ ಪಾಠ ನೆನಪಿನಲ್ಲಿ ಉಳಿಯಲು, ಶರೀರ ಮತ್ತು ಮನಸ್ಸಿನ ನಡುವೆ ಆರೋಗ್ಯದ ಸಮನ್ವಯತೆ ಸಾಧಿಸಲು ಯೋಗ ಶಿಕ್ಷಣ ಸಹಕಾರಿ ಎಂದು ಮನೋವೈದ್ಯ ಡಾ.ಎಂ.ಟಿ.ಸತ್ಯನಾರಾಯಣ ಹೇಳಿದರು.
ತಾಲೂಕಿನ ಮಲ್ಲೇಶ್ವರದ ಶ್ರೀಮತಿ ಪುಟ್ಟಮ್ಮ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ಯೋಗಾಸನ ಸ್ಪೋರ್ಟ್ಸ್, ಬೆಂಗಳೂರು ಕೃಷಿ ಯೋಗ ಮಂದಿರ ಹಾಗು ಕಡೂರಿನ ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರದಿಂದ ನಡೆದ 5 ನೇ ರಾಜ್ಯಮಟ್ಟದ ಯೋಗ ಚಾಂಪಿಯನ್ ಶಿಪ್ ಉದ್ಘಾಟಿಸಿ ಮಾತನಾಡಿದರು. ಆರೋಗ್ಯದ ರಾಮಬಾಣವಾದ ಯೋಗಾಸನವನ್ನು 2019ರಲ್ಲಿ ವಿಶ್ವಮಾನ್ಯತೆ ನೀಡುವ ಮೂಲಕ ಯೋಗ ವಿದ್ಯೆ ವಿಶ್ವಕ್ಕೆ ಭಾರತ ನೀಡಿದ ಕೊಡುಗೆಯಾಗಿದ್ದು. ಯೋಗಕ್ಕೆ ಕ್ರೀಡಾ ಸ್ಥಾನಮಾನ ದೊರಕಿದೆ. ರಾಷ್ಟ್ರಮಟ್ಟದ ಯೋಗ ಪಟು ಗಳನ್ನು ತಯಾರು ಮಾಡುತ್ತಿರುವ ಸ್ನೇಹ ಮಯಿ ವಿವೇಕಾನಂದ ಯೋಗ ಕೇಂದ್ರದ ಶ್ರಮ ಶ್ಲಾಘನೀಯ ಎಂದರು.ಜಿಲ್ಲಾ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬೆಂಕಿ ಶೇಖರಪ್ಪ ಮಾತನಾಡಿ, ಕಡೂರಿನಲ್ಲಿ ಯೋಗಾಸಕ್ತರಿಗೆ ಒಂದು ಯೋಗ ಕಾಲೇಜು ಅಗತ್ಯವಿದೆ. ಪುರಸಭೆಯಿಂದ ಪಟ್ಟಣದಲ್ಲಿ ನಿವೇಶನ ನೀಡಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಮುಂದಿನ ಪೀಳಿಗೆಗೆ ಈ ವಿದ್ಯೆ ಉಳಿಸಬೇಕು. ಸ್ಥಳೀಯವಾಗಿಯೂ ಯೋಗ ಶಿಕ್ಷಣ ನೀಡುವ ಸಂಸ್ಥೆ ಆರಂಭಿಸಲು ಚಿಂತನೆ ನಡೆಸಿದ್ದೇವೆ ಎಂದರು.
ನಂದಿ ಮಠದ ಶ್ರೀ ವೃಷಭೇಂದ್ರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಯೋಗದಲ್ಲಿ ಆಧ್ಯಾತ್ಮವೂ ಇದೆ. ಮಠ ಮಾನ್ಯಗಳು ಸಹ ಯೋಗದಲ್ಲಿ ಆಸಕ್ತಿ ತಾಳಿವೆ. ನಮ್ಮ ಮಠದಿಂದ ಯೋಗ ಕೇಂದ್ರ ಸ್ಥಾಪಿಸುವ ಚಿಂತನೆ ನಡೆಸಿದ್ದು ಶೀಘ್ರದಲ್ಲಿ ಅದು ಸಕಾರಗೊಳ್ಳಲಿದೆ ಎಂದರು.
ಜೇಸೀ ಬ್ಯುಸಿನಸ್ ವರ್ಲ್‌ಡ್ ನ ಅಧ್ಯಕ್ಷ ಸಿ.ಆರ್.ಪ್ರೇಮ್ ಕುಮಾರ್, ಸಿ.ಆರ್. ಪ್ರೇಮಕುಮಾರ್, ಬ್ಲೂ ಆರ್ಮಿ ಸಂಘಟನೆ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್, ಡಾ.ಸಮೀನಾ ಚೇತನ್, ಯಶಸ್ವಿನಿ ಯೋಗ ಸಂಸ್ಥೆಯ ದೇವೇಂದ್ರಪ್ಪ, ಎಸ್.ಎಸ್.ಗಿರೀಶ್, ಎ.ಎನ್.ಚಂದ್ರು, ಎ.ಜಿ.ಗಿರೀಶ್ ,ಸಾಗರ್. ಭರತ್ ಇದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯದಿಂದ ಬಂದು ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 600 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು 2 ದಿನಗಳ ಕಾಲ ವಿವಿಧ ವಯೋಮಾನದ ಸ್ಪರ್ಧೆಗಳು ಆರಂಭಗೊಂಡವು.
ಡಾ. ನಿರಂಜನಮೂರ್ತಿ ಉಪಾಧ್ಯಕ್ಷ , ಕರ್ನಾಟಕ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್