ಗಂಗಾವತಿಯಲ್ಲಿ ರಾಜ್ಯ ಮಟ್ಟದ ಟೆನ್ನಿಸ್ ವಾಲಿಬಾಲ್ ಕ್ರೀಡಾಕೂಟ । ಪ್ರಶಸ್ತಿ ವಿತರಿಸಿದ ಡಿಡಿಪಿಯು
ಪದವಿ ಪೂರ್ವ ಶಿಕ್ಷಣ ಇಲಾಖೆ ಕೊಪ್ಪಳ ಹಾಗೂ ಬೇತಲ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಗಂಗಾವತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ರಾಜ್ಯ ಮಟ್ಟದ ಟೆನ್ನಿಸ್ ವಾಲಿಬಾಲ್ ಕ್ರೀಡಾಕೂಟ ಬೇತಲ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬೇತಲ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ ರಾಜು, ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಆಡಳಿತಾಧಿಕಾರಿ ಹೇಮಾ , ಜಿಲ್ಲಾ ಕ್ರೀಡಾ ಸಂಯೋಜಕ ತಿರುಪತಿ ನಾಯಕ ಉಪಸ್ಥಿತರಿದ್ದರು.
ಬಾಲಕರ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆ ಪ್ರಥಮ, ರಾಮನಗರ ಜಿಲ್ಲೆ ದ್ವಿತೀಯ ಸ್ಥಾನ ಪಡೆಯಿತು.
ಬಾಲಕಿಯರ ವಿಭಾಗದಲ್ಲಿ ಉಡುಪಿ ಪ್ರಥಮ, ಮಂಗಳೂರು (ದಕ್ಷಿಣ ಕನ್ನಡ ಜಿಲ್ಲೆ) ದ್ವಿತೀಯ ಸ್ಥಾನ ಪಡೆದುಕೊಂಡಿತು.
ತಂಡದ ವ್ಯವಸ್ಥಾಪಕರಾಗಿ 48 ಜನ ಭಾಗವಹಿಸಿದ್ದು, ಕ್ರೀಡಾ ನಿರ್ಣಾಯಕರಾಗಿ 12 ಜನ, ದೈಹಿಕ ಶಿಕ್ಷಣ ಉಪನ್ಯಾಸಕರು 13 ಜನ ಒಟ್ಟು 361 ಕ್ರೀಡಾಪಟುಗಳು ಸೇರಿದಂತೆ ತಂಡದ ವ್ಯವಸ್ಥಾಪಕರು, ಕ್ರೀಡಾಧಿಕಾರಿಗಳು ಭಾಗವಹಿಸಿದ್ದರು.