ಭಾಗಮಂಡಲ ಮತ್ತು ತಲಕಾವೇರಿ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಲವು ವರ್ಷಗಳ ಬಸ್ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಸೋಮವಾರ ಮುಂಜಾನೆಯಿಂದ ಅಧಿಕೃತವಾಗಿ ಆರಂಭಗೊಂಡಿದೆ.
ನಾಪೋಕ್ಲು: ಭಾಗಮಂಡಲ ಮತ್ತು ತಲಕಾವೇರಿ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಲವು ವರ್ಷಗಳ ಬಸ್ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಸೋಮವಾರ ಮುಂಜಾನೆಯಿಂದ ಅಧಿಕೃತವಾಗಿ ಆರಂಭಗೊಂಡಿದೆ.ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಭಾಗಮಂಡಲಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಸ್ಥಳೀಯರು ಮನವಿ ಸಲ್ಲಿಸಿದ್ದರು. ಮುಂಜಾನೆ ಮತ್ತು ಸಂಜೆ ನಿಗದಿತ ಸಮಯಕ್ಕೆ ಸೂಕ್ತ ಬಸ್ ಸೇವೆ ಇಲ್ಲದೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಶಾಸಕರ ಗಮನಕ್ಕೆ ತಂದಿದ್ದರು.
ಮನವಿಗೆ ಸ್ಪಂದಿಸಿದ ಶಾಸಕರು ಸಾರಿಗೆ ಅಧಿಕಾರಿಗಳಿಗೆ ತಕ್ಷಣ ಬಸ್ ಸೇವೆ ಆರಂಭಿಸುವಂತೆ ಸೂಚನೆ ನೀಡಿದ್ದರು.
ನೂತನ ಬಸ್ ಸೇವೆ ಆರಂಭಗೊಂಡ ಹಿನ್ನೆಲೆಯಲ್ಲಿ ತಲಕಾವೇರಿ ಕ್ಷೇತ್ರದಲ್ಲಿ ಸಾರ್ವಜನಿಕರು ಹಾಗೂ ಸಾರಿಗೆ ಸಿಬ್ಬಂದಿಯಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ವಿದ್ಯಾರ್ಥಿಗಳ, ಸಾರ್ವಜನಿಕರ ಅನುಕೂಲಕ್ಕಾಗಿ ತಕ್ಷಣ ಸ್ಪಂದಿಸಿ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟ ಶಾಸಕ ಎ.ಎಸ್. ಪೊನ್ನಣ್ಣನವರಿಗೆ ಗ್ರಾಮಸ್ಥರು ಹಾಗೂ ಮುಖಂಡರು ಕೃತಜ್ಞತೆ ಸಲ್ಲಿಸಿದ್ದಾರೆ.
ಕೆ.ಎಸ್.ಆರ್.ಟಿ.ಸಿ. ಸಂಚಾರ ಅಧಿಕಾರಿ ಇರಸಪ್ಪ, ಬಸ್ ಚಾಲಕ ಮನುಕುಮಾರ್, ನಿರ್ವಾಹಕ ರಾಮಚಂದ್ರ, ವಕೀಲರು ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಸುನಿಲ್ ಪತ್ರಾವೋ, ಪ್ರಚಾರ ಸಮಿತಿ ಅಧ್ಯಕ್ಷ ಗೌರೀಶ್ ರೈ ಮತ್ತಿತರರು ಹಾಜರಿದ್ದರು.
ಬಸ್ ಸಂಚಾರದ ಸಮಯದ ವಿವರ:
ಮಡಿಕೇರಿಯಿಂದ ನಿರ್ಗಮನ: ಬೆಳಿಗ್ಗೆ 6:30 ಭಾಗಮಂಡಲ ಆಗಮನ: 7:45 ಭಾಗಮಂಡಲದಿಂದ ನಿರ್ಗಮನ: ಬೆಳಿಗ್ಗೆ 8:00 ತಲಕಾವೇರಿ ಆಗಮನ: 8:20 ತಲಕಾವೇರಿಯಿಂದ ನಿರ್ಗಮನ: ಬೆಳಿಗ್ಗೆ 8:30 ಭಾಗಮಂಡಲ ಆಗಮನ: 8:50 ಭಾಗಮಂಡಲದಿಂದ ನಿರ್ಗಮನ: ಬೆಳಿಗ್ಗೆ 9:00 (ನಾಪೋಕ್ಲು, ಮೂರ್ನಾಡು ಮಾರ್ಗವಾಗಿ) ಮಡಿಕೇರಿ ಆಗಮನ: ಬೆಳಿಗ್ಗೆ 11:00ಮಧ್ಯಾಹ್ನದ ಹಂತ: ಮಡಿಕೇರಿಯಿಂದ ನಿರ್ಗಮನ: ಬೆಳಿಗ್ಗೆ 11:30 ಭಾಗಮಂಡಲ ಆಗಮನ: ಮಧ್ಯಾಹ್ನ 12:45 ಭಾಗಮಂಡಲದಿಂದ ನಿರ್ಗಮನ: ಮಧ್ಯಾಹ್ನ 1:30 ಮಡಿಕೇರಿ ಆಗಮನ: ಮಧ್ಯಾಹ್ನ 2:45 ಸಂಜೆಯ ಹಂತ: ಮಡಿಕೇರಿಯಿಂದ ನಿರ್ಗಮನ: ಮಧ್ಯಾಹ್ನ 3:30 ಭಾಗಮಂಡಲ ಆಗಮನ: ಸಂಜೆ 4:45 ಭಾಗಮಂಡಲದಿಂದ ನಿರ್ಗಮನ: ಸಂಜೆ 0:00. ತಲಕಾವೇರಿ ಆಗಮನ: ಸಂಜೆ 5:20 ತಲಕಾವೇರಿಯಿಂದ ನಿರ್ಗಮನ: ಸಂಜೆ 5:30 ಭಾಗಮಂಡಲ ಆಗಮನ: ಸಂಜೆ 5:50 ಭಾಗಮಂಡಲದಿಂದ ನಿರ್ಗಮನ: ಸಂಜೆ 6:00 ಮಡಿಕೇರಿ ಆಗಮನ: ರಾತ್ರಿ 7:15
ಫೊಟೋ ಬಸ್ ಸೇವೆ ಆರಂಭಗೊಂಡ ಹಿನ್ನೆಲೆಯಲ್ಲಿ ತಲಕಾವೇರಿ
ಕ್ಷೇತ್ರದಲ್ಲಿ ಸಾರ್ವಜನಿಕರಿಂದ ಹಾಗೂ ಸಾರಿಗೆ ಸಿಬ್ಬಂದಿಯಿಂದ ವಿಶೇಷ ಪೂಜೆ ನೆರವೇರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.