ಬಗರ್ ಹುಕುಂ ಸಾಗುವಳಿ ಬಾಕಿ ಅರ್ಜಿ ಇತ್ಯರ್ಥ ಶೀಘ್ರ: ಶಾಸಕ ರಾಘವೇಂದ್ರ ಹಿಟ್ನಾಳ

KannadaprabhaNewsNetwork |  
Published : Mar 02, 2024, 01:50 AM IST
1ಕೆಪಿಎಲ್25 ಕೊಪ್ಪಳ ನಗರದ ತಹಸೀಲ್ದಾರ ಕಾರ್ಯಾಲಯದಲ್ಲಿ ಬಗರ್ ಹುಕುಂ ಸಮಿತಿಯ ಸಭೆ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. | Kannada Prabha

ಸಾರಾಂಶ

ಬಗರ್ ಹುಕುಂ ಸಾಗುವಳಿ ಸಮಿತಿ ರಚನೆ ಮಾಡಿ ಆದೇಶಿಸಲ್ಪಟ್ಟ ಕಳೆದ ಒಂಬತ್ತು ತಿಂಗಳಿನಿಂದ ಈವರೆಗೆ 709 ಅರ್ಜಿಗಳು ಈ ವರೆಗೆ ಸಲ್ಲಿಕೆಯಾಗಿದ್ದು, 365 ಅರ್ಜಿಗಳು ಅನುಮೋದನೆಗಾಗಿ ಈಗ ಸಮಿತಿಯ ಮುಂದಿದೆ.

ಕೊಪ್ಪಳ: ಬಗರ್ ಹುಕುಂ ಸಾಗುವಳಿಯಲ್ಲಿ ಸಕ್ರಮವಾಗಿರುವ ಅರ್ಜಿಗಳನ್ನು ಶೀಘ್ರದಲ್ಲಿಯೇ ವಿಲೇವಾರಿ ಮಾಡಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.ನಗರದ ತಹಸೀಲ್ದಾರ್ ಕಚೇರಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಮೊದಲನೇ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೊಪ್ಪಳ ತಾಲೂಕಿನಲ್ಲಿ ಸ್ವೀಕೃತವಾದ ನಮೂನೆ 57ರ ಅರ್ಜಿಗಳನ್ನು ಪರಿಶೀಲಿಸಿ ಮಂಜೂರಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಭೂ ಕಂದಾಯ 108 ಸಿಪಿಸಿ ಅಡಿಯಲ್ಲಿ ಅನಧಿಕೃತ ಸಾಗುವಳಿ ಸಕ್ರಮಗೊಳಿಸಲು ಕೋರಿ ಬಂದ ನಮೂನೆ-57ರಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಕೊಪ್ಪಳ ಹೋಬಳಿಯ ಲಾಚನಕೇರಿಯ 1 ಅರ್ಜಿ ಹಾಗೂ ಹಿಟ್ನಾಳ ಹೋಬಳಿಯ ಮಹ್ಮದ್ ನಗರದ 12 ಅರ್ಜಿಗಳನ್ನು ಮಂಜೂರಾತಿ ಮಾಡಲಾಗಿದೆ ಎಂದರು.ಬಗರ್ ಹುಕುಂ ಸಾಗುವಳಿ ಸಮಿತಿ ರಚನೆ ಮಾಡಿ ಆದೇಶಿಸಲ್ಪಟ್ಟ ಕಳೆದ ಒಂಬತ್ತು ತಿಂಗಳಿನಿಂದ ಈವರೆಗೆ 709 ಅರ್ಜಿಗಳು ಈ ವರೆಗೆ ಸಲ್ಲಿಕೆಯಾಗಿದ್ದು, 365 ಅರ್ಜಿಗಳು ಅನುಮೋದನೆಗಾಗಿ ಈಗ ಸಮಿತಿಯ ಮುಂದಿದೆ. ಆ ಪೈಕಿ ಈಗ 13 ಅರ್ಜಿಗಳನ್ನು ಮಂಜೂರಾತಿ ಮಾಡಲಾಗಿದೆ. ಇನ್ನುಳಿದ ಅರ್ಜಿಗಳ ತ್ವರಿತ ವಿಲೇವಾರಿಗಾಗಿ ಭೂಮಾಪನ ಇಲಾಖೆಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಪರಿಶೀಲಿಸಿ ವರದಿ ಸಲ್ಲಿಸುವಂತೆ ಶಾಸಕರು ಸೂಚಿಸಿದರು.ಬಾಕಿ ಉಳಿದಿರುವ ಅರ್ಜಿಗಳ ಮಂಜೂರಾತಿಗಾಗಿ ಮುಂದಿನ ಸಭೆಗಳಲ್ಲಿ ತಹಶೀಲ್ದಾರರು ಹಾಗೂ ಸಮಿತಿಯ ಸಹಸದಸ್ಯರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಇತ್ಯರ್ಥಗೊಳಿಸಲಾಗುವುದು ಎಂದು ಶಾಸಕರು ತಿಳಿಸಿದರು.ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ತೀವ್ರ ಅಭಾವಕ್ಕೊಳಗಾಗಿರುವ ಟಣಕನಕಲ್, ಹೊಸಹಳ್ಳಿ, ಕವಲೂರು, ಗುಡಿಗೇರಿ ಗ್ರಾಮಗಳಲ್ಲಿ 4 ಲಕ್ಷಕ್ಕೂ ಅಧಿಕ ಮೊತ್ತದ ವೆಚ್ಚದಲ್ಲಿ 5000 ಲೀ. ಸಾಮರ್ಥ್ಯದ ಟ್ಯಾಂಕರ್ ಮೂಲಕ ಪ್ರತಿದಿನ 34 ಟ್ರಿಪ್ ನಂತೆ ನೀರು ಸರಬರಾಜು ಮಾಡಲಾಗಿದ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಸಮಿತಿಯ ಸದಸ್ಯ ಯಂಕಪ್ಪ ಹೊಸಳ್ಳಿ, ವಿಶಾಲಾಕ್ಷಿ ವಿಜಯಕುಮಾರ್ ಮಾಲಿಪಾಟೀಲ್, ಸಿದ್ರಾಮಪ್ಪ ಭಟ್, ತಹಶೀಲ್ದಾರ ವಿಠ್ಠಲ ಚೌಗಲೆ, ತಾಪಂ ಇಒ ದುಂಡಪ್ಪ ತುರಾದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮಲಾಕರ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್‌! - ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌
ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ