ಕನ್ನಡಪ್ರಭ ವಾರ್ತೆ ಗೋಕಾಕ
ಇಲ್ಲಿಯ ಎನ್‌ಎಸ್‌ಎಫ್ ಕಾರ್ಯಾಲಯದಲ್ಲಿ ಅರಭಾವಿ, ಗೋಕಾಕ ಮಂಡಲದವರು ಜಂಟಿಯಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಫಲಾನುಭವಿಗಳ ಸಂಪರ್ಕ ಅಭಿಯಾನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ದುಡಿಯಲು ತಿಳಿಸಿದರು.
ದೇಶದ ಜನಮೆಚ್ಚಿದ ಹೆಮ್ಮೆಯ ಪ್ರಧಾನಿ ನಮ್ಮ ನರೇಂದ್ರ ಮೋದಿ ಅವರು, ಕಳೆದ ಎರಡು ಅವಧಿಯಿಂದ ಈ ದೇಶದ ಚುಕ್ಕಾಣಿ ಹಿಡಿದು ಶಕ್ತಿ ಶಾಲಿ ಭಾರತ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ದೇಶದ ಎಲ್ಲ ಜನಾಂಗದವರ ಅಭ್ಯುದಯಕ್ಕೆ ನೂರಾರು ಜನಪರ- ರೈತಪರ-ಮಹಿಳಾಪರ ಯೋಜನೆಗಳನ್ನು ಸಾಕಾರಗೊಳಿಸಿದ್ದಾರೆ. ಅಂತಹ ಯೋಜನೆಗಳ ಫಲಾನುಭವಿಗಳ ಸಂಪರ್ಕ ಸಾಧಿಸುವ ಕೆಲಸ ನಡೆಯುತ್ತಿದೆ. ಫಲಾನುಭವಿಗಳ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ನಮ್ಮ ಕೇಂದ್ರ ಸರ್ಕಾರದ ಯೋಜನೆಗಳನ್ನು ವಿವರಿಸಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿಸುವ ಜವಾಬ್ದಾರಿಯನ್ನು ಕಾರ್ಯಕರ್ತರು ಹೊತ್ತುಕೊಳ್ಳುವಂತೆ ಪಾಟೀಲ ಹೇಳಿದರು.ಅರಭಾವಿ ಮಂಡಲದ ಸಂಚಾಲಕ ಗೋವಿಂದ ಕೊಪ್ಪದ ಮಾತನಾಡಿ, ಇದೇ ಏಪ್ರಿಲ್ ತಿಂಗಳಲ್ಲಿ ಜರುಗುವ ಸಂಸತ್ ಚುನಾವಣೆಯಲ್ಲಿ ಮೋದಿ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಈಗಾಗಲೇ ಖಾತ್ರಿಯಾಗಿದೆ. ಇಡೀ ವಿಶ್ವದಲ್ಲೇ ನರೇಂದ್ರ ಮೋದಿಯವರು ಜನಪ್ರಿಯ ನಾಯಕರಾಗಿದ್ದಾರೆ. ನೂರಾರು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರವು ರೂಪಿಸಿದೆ ಎಂದು ವಿವರಿಸಿದರು.
ಅಧ್ಯಕ್ಷತೆಯನ್ನು ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಸಹ ಸಂಚಾಲಕಿ ಸುವರ್ಣ ಪಾಟೀಲ, ಗೋಕಾಕ ಗ್ರಾಮೀಣ ಸಂಚಾಲಕ ಪುಂಡಲೀಕ ವಣ್ಣೂರ, ರಾಜು ಮುಂಡಾನೆ, ಅಶೋಕ ಪಾತ್ರೋಟ, ಉಭಯ ಕ್ಷೇತ್ರಗಳ ಬಿಜೆಪಿ ಪದಾಧಿಕಾರಿಗಳು, ಮಹಾ ಶಕ್ತಿ, ಶಕ್ತಿ ಕೇಂದ್ರಗಳ ಪ್ರಮುಖರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪರಸಪ್ಪ ಬಬಲಿ ನಿರೂಪಿಸಿದರು.