ಇಂದಿನಿಂದ ಸೂಟರ್‌ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನ ನೇಮೋತ್ಸವ

KannadaprabhaNewsNetwork |  
Published : Mar 02, 2024, 01:50 AM ISTUpdated : Mar 02, 2024, 03:13 PM IST
ಕೋರ್ದಬ್ಬು ದೈವಸ್ಥಾನ | Kannada Prabha

ಸಾರಾಂಶ

ಮಾರ್ಚ್ 3ರಂದು ಸಂಜೆ ರಾಹುಗುಳಿಗ ನೇಮ, ರಾತ್ರಿ ಶ್ರೀ ಪಂಜುರ್ಲಿ, ಗುಳಿಗ ನೇಮೋತ್ಸವ, ಮಾರ್ಚ್ 4ರಂದು ಮಧ್ಯಾಹ್ನ ಧರ್ಮದೈವದ ನೇಮ, ರಾತ್ರಿ ಸುಬ್ಬಿಗುಳಿಗ ಹಾಗೂ ಸುಬ್ಯಮ್ಮ ನೇಮೋತ್ಸವ ನಡೆಯಲಿದೆ. ಮಾರ್ಚ್ 5ರಂದು ಮಧ್ಯಾಹ್ನ ಸಂಕಳೆ ಗುಳಿಗ ನೇಮ, ರಾತ್ರಿ ಶ್ರೀ ಕೊರಗಜ್ಜ ನೇಮ ಹಾಗೂ ಭಂಡಾರ ಇಳಿಯುವುದು.

ಕನ್ನಡಪ್ರಭ ವಾರ್ತೆ ಮಂಗಳೂರು

ಅತಿ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್‌ಪೇಟೆ ಶ್ರೀ ಕೋರ‍್ದಬ್ಬು ದೈವಸ್ಥಾನದ ವರ್ಷಾವಧಿ ನೇಮೋತ್ಸವ ಮಾ.2ರಿಂದ 5ರವರೆಗೆ ನಡೆಯಲಿದೆ.

ಮಾರ್ಚ್ 2ರಂದು ಬೆಳಗ್ಗೆ ಹೋಮ ನಂತರ ಶ್ರೀ ಬಬ್ಬುಸ್ವಾಮಿ, ಪಂಜುರ್ಲಿ, ಗುಳಿಗ ದೈವಗಳ ದರ್ಶನ ಸೇವೆಯೊಂದಿಗೆ ಭಂಡಾರ ಏರುವುದು, ಮಧ್ಯಾಹ್ನ ಸ್ಥಳದ ಗುಳಿಗ ದೈವದ ನೇಮ, ರಾತ್ರಿ ಭಗವಾನ್ ಶ್ರೀ ಬಬ್ಬುಸ್ವಾಮಿ ಹಾಗೂ ತನ್ನಿಮಾನಿಗ ನೇಮೋತ್ಸವ ನಡೆಯಲಿದೆ.

ಮಾರ್ಚ್ 3ರಂದು ಸಂಜೆ ರಾಹುಗುಳಿಗ ನೇಮ, ರಾತ್ರಿ ಶ್ರೀ ಪಂಜುರ್ಲಿ, ಗುಳಿಗ ನೇಮೋತ್ಸವ, ಮಾರ್ಚ್ 4ರಂದು ಮಧ್ಯಾಹ್ನ ಧರ್ಮದೈವದ ನೇಮ, ರಾತ್ರಿ ಸುಬ್ಬಿಗುಳಿಗ ಹಾಗೂ ಸುಬ್ಯಮ್ಮ ನೇಮೋತ್ಸವ ನಡೆಯಲಿದೆ. ಮಾರ್ಚ್ 5ರಂದು ಮಧ್ಯಾಹ್ನ ಸಂಕಳೆ ಗುಳಿಗ ನೇಮ, ರಾತ್ರಿ ಶ್ರೀ ಕೊರಗಜ್ಜ ನೇಮ ಹಾಗೂ ಭಂಡಾರ ಇಳಿಯುವುದು.ಮಾ.1ರಂದು ಆಶ್ಲೇಷಾ ಪೂಜೆ:

ದೈವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ನಾಗದೇವರಿಗೆ ಮಾ.1ರಂದು ಬೆಳಗ್ಗೆ 10 ಗಂಟೆಗೆ ಆಶ್ಲೇಷಾ ಪೂಜೆ, ತಂಬಿಲ ಸೇವೆ ಹಾಗೂ ಪಂಚಾಮೃತ ಅಭಿಷೇಕ ನಡೆದು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. 

ಸಂಜೆ 7 ಗಂಟೆಗೆ ವರ್ಷಂಪ್ರತಿ ನಡೆಯುವಂತೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಧರ್ಮದರ್ಶಿ ಶ್ರೀ ಭಾಸ್ಕರ ಐತಾಳ್‌ ಅವರ ಪೌರೋಹಿತ್ಯದಲ್ಲಿ ನಡೆದು, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ನಂತರ ವಿಜಯ ಫ್ರೆಂಡ್ಸ್ ಸರ್ಕಲ್ ಸೂಟರ್‌ಪೇಟೆ ಪ್ರಾಯೋಜಕತ್ವದಲ್ಲಿ ‘ನೃತ್ಯ ಗಾನ ಸಿಂಚನ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

 ನಾಲ್ಕು ದಿನಗಳ ನೇಮೋತ್ಸವದಂದು ಪ್ರತಿದಿನ ಶ್ರೀ ಕ್ಷೇತ್ರದಲ್ಲಿ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ದೈವಸ್ಥಾನದ ಗುರಿಕಾರ ಎಸ್. ರಾಘವೇಂದ್ರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮಲಾಕರ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್‌! - ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌
ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ