- ವಾಲ್ಮಿಕಿ ಅಭಿವೃದ್ದಿ ನಿಗಮದ ಹಣ ದುರ್ಬಳಕೆ ಆರೋಪ
- ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭಾಗಿಕನ್ನಡಪ್ರಭ ಹೊಳಲ್ಕೆರೆ ವಾಲ್ಮಿಕಿ ಅಭಿವೃದ್ದಿ ನಿಗಮದ 182 ಕೋಟಿ ಹಣ ದುರ್ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ ಜೂನ್ 28 ರಂದು ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಹೃತ್ ಪ್ರತಿಭಟನೆ ನಡೆಸಲಾಗುವುದು ಎಂದು ಮೊಳಕಾಲ್ಮುರು ಮಾಜಿ ಶಾಸಕ ತಿಪ್ಪೇಸ್ವಾಮಿ ಹೇಳಿದರು.ಪಟ್ಟಣದ ಬಿಜೆಪಿ ಕಚೇರಿಯ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಮುಂದೆ ನಾಯಕ ಸಮುದಾಯದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯಲ್ಲಿ ಅತಿಹೆಚ್ಚು ನಾಯಕ ಸಮುದಾಯದ ಜನರಿದ್ದೇವೆ. ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಮ್ಮ ಹಕ್ಕನ್ನು ಧೈರ್ಯವಾಗಿ ಕೇಳಿ ಪಡೆಯಬೇಕು ಎಂದು ಕರೆಕೊಟ್ಟರು. ಪರಿಶಿಷ್ಟರ ಹಣವನ್ನು ತೆಲಂಗಾಣದ ಚುನಾವಣಾ ಖರ್ಚಿಗೆ ಬಳಸಿಕೊಂಡಿದ್ದಾರೆ. ಮಾತೆತ್ತಿದರೆ ನಾವು ಪರಿಶಿಷ್ಟರ ಪರ ಎಂದು ಭಾಷಣ ಮಾಡುವ ಸಿದ್ದರಾಮಯ್ಯ ಪರಿಶಿಷ್ಟರ ಹಣವನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಪರಿಶಿಷ್ಟಜಾತಿ 13000 ಕೋಟಿ, ಹಾಗೂ ಪರಿಶಿಷ್ದವರ್ಗದ 11000 ಕೋಟಿ ಅನುದಾನವನ್ನು ಬಿಟ್ಟಿಭಾಗ್ಯ ಯೋಜನೆಗ ಬಳಸಿಕೊಂಡಿದ್ದಾರೆ ಎಂದು ದೂರಿದರು.ಚಳ್ಳಕೆರೆ ಜಿಜೆಪಿ ಮುಖಂಡ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಪರಿಶಿಷ್ಟರಿಗೆ ದ್ರೋಹ ಬಗೆದಿದೆ. ಮುಖ್ಯಮಂತ್ರಿಯೇ ಹಣಕಾಸು ಖಾತೆ ಹೊಂದಿದ್ದು, ಅವರ ಅನುಮತಿ ಇಲ್ಲದೇ ಹಣ ವರ್ಗಾವಣೆ ಆಗಲು ಹೇಗೆ ಸಾಧ್ಯ. ಸಿದ್ದರಾಮಯ್ಯನವರು ಮಾಡಿರುವ ತಪ್ಪಿಗೆ ನಾಗೇಂದ್ರ ರಾಜೀನಾಮೆ ಪಡೆದಿದ್ದಾರೆ. ಈ ಮೂಲಕ ನಾಯಕ ಸಮುದಾಯಕ್ಕೂ ಮೋಸ ಮಾಡಿದ್ದಾರೆ. ಅದ್ದರಿಂದ ಸಿದ್ದರಾಮಯ್ಯ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎ.ಬಿ. ಸಿದ್ದೇಶ್ ಮಾತನಾಡಿ, ಈಗ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೇ ಪೆಟ್ರೋಲ್, ಡೀಸೆಲ್, ಮದ್ಯ, ಪಹಣಿ, ಹಾಗೂ ಛಾಪಾ ಕಾಗದ ನೋಂದಣೆ ಶುಲ್ಕಗಳ ಬೆಲೆ ಹೆಚ್ಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಬಿಜೆಪಿ ಎಸ್ .ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಾಮದಾಸಪ್ಪ, ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಕವನಾ , ತಾಲೂಕು ಎಸ್ .ಟಿ ಮೋರ್ಚಾ ಅಧ್ಯಕ್ಷ ಶಿವಪುರ ಅಜ್ಜಯ್ಯ, ಪುರಸಭೆ ಸದಸ್ಯ ಆರ್.ಎ. ಆಶೋಕ, ಪ್ರಶಾಂತ್, ಗೌರಿ ರಾಜಕುಮಾರ್, ಭದ್ರಣ್ಣ, ಹಾಗೂ ಎಸ್ ಟಿ ಮೋರ್ಚಾ ಪದಾಧಿಕಾರಿಗಳು, ನಾಯಕ ಸಮಾಜದ ಮುಖಂಡರು ಉಪಸ್ಥಿತರಿದ್ದರು. ----
23 ಹೆಚ್ ಎಲ್ ಕೆ 1ಹೊಳಲ್ಕೆರೆ ಬಿಜೆಪಿ ಕಚೇರಿಯ ಎಸ್ .ಟಿ .ಮೋರ್ಚಾ ಸಭೆಯಲ್ಲಿ ಮೊಳಕಾಲ್ಲೂರು ಮಾಜಿ ಶಾಸಕ ತಿಪ್ಪೇಸ್ಮಾಮಿ , ತಾಲೂಕು ಬಿಜೆಪಿ ಅಧ್ಯಕ್ಷ ಸಿದ್ದೇಶ್, ಎ.ಆರ್ ಆಶೋಕ್ ಇತರರು ಇದ್ದರು.-----