ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಬಗ್ಗೆ ಅವಹೇಳನಕಾರಿ ಮಾತನಾಡಿದ್ದ ಮೈಸೂರಿನ ವಕೀಲ ನಾಗರಾಜ ಕುಡುಪಲಿ ಅವರಿಗೆ ಬುಧವಾರ ಸಾಗರದ ನ್ಯಾಯಾಲಯ ಜಾಮೀನು ನೀಡಿದ್ದಲ್ಲದೇ, ಮುಂದಿನ ವಿಚಾರಣೆಯನ್ನು ಮಾ.1ಕ್ಕೆ ಮುಂದೂಡಿದೆ.
ಸಾಗರ: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಮಾತನಾಡಿದ್ದ ಮೈಸೂರಿನ ವಕೀಲ ನಾಗರಾಜ ಕುಡುಪಲಿ ವಿರುದ್ಧ ಸಾಗರ ವಕೀಲ ಪ್ರವೀಣ್‌ಕುಮಾರ್ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ್ ಅವರು ಬುಧವಾರ ಸಾಗರದ ಪ್ರಧಾನ ವ್ಯವಹಾರಗಳ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದರು. ಬಳಿಕ ನ್ಯಾಯಾಲಯವು ಜಾಮೀನು ನೀಡಿದ್ದಲ್ಲದೇ, ಮುಂದಿನ ವಿಚಾರಣೆಯನ್ನು ಮಾ.1ಕ್ಕೆ ಮುಂದೂಡಿದೆ.
ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪದಬಳಕೆ ಹಿನ್ನೆಲೆ ಮೈಸೂರಿನ ವಕೀಲ ನಾಗರಾಜ್ ಕುಡುಪಲಿ ವಿರುದ್ಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳದ ಹಿನ್ನೆಲೆ ವಕೀಲ ಪ್ರವೀಣಕುಮಾರ ಅವರು ನ್ಯಾಯಾಲಯ ಮೂಲಕ ದೂರು ದಾಖಲಿಸಿದ್ದರು. ಸೆಕ್ಷನ್ 500, 504, 506ರ ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯವು ಸಮನ್ಸ್ ನೀಡಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.