ಚಿಂತಾಮಣಿ: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡರ ನಿಂದಿಸಿ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ೨ ದಿನಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದು, ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದು, ಅಂತಿಮವಾಗಿ ಶಿಡ್ಲಘಟ್ಟದ ಜೆಎಂಎಫ್‌ಸಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ನನ್ನ ಸಂಕಷ್ಟದಲ್ಲೂ ಶಿಡ್ಲಘಟ್ಟ ಜನತೆಗೆ ನನ್ನೊಂದಿಗಿದ್ದು, ನನಗೆ ಆತ್ಮಸ್ಥೈರ್ಯ ತುಂಬಿದ್ದ ಕಾರ್ಯಕರ್ತರು, ಅಣ್ಣತಮ್ಮಂದಿರು, ಮುಖಂಡರು ಹಾಗೂ ತಂದೆತಾಯಂದಿರಿಗೆ ಶಿರಭಾಗಿ ನಮಿಸುತೇನೆಂದು ತಿಳಿಸಿ, ಈ ಘಟನೆ ದೇಶದಾದ್ಯಂತ ಸುದ್ದಿಯಾಗಿದ್ದು ನನಗೆ ನೋವಾಗಿದೆ. ನಾನು ಕ್ಷೇತ್ರಕ್ಕೆ ಮಾಡಿಕೊಂಡು ಬಂದಿರುವ ಆ್ಯಂಬುಲೆನ್ಸ್ ಸೇವೆ ಇವತ್ತಿಗೂ ೨೪ ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ, ಕೋರೋನಾ ಸಂದರ್ಭದಲ್ಲಿ ಸಂತ್ರಸ್ಥರಿಗೆ ಕಿಟ್‌ಗಳನ್ನು ನೀಡಿದ್ದೆ, ಮುಂದಿನ ದಿನಗಳಲ್ಲೂ ಕೂಡ ನನ್ನ ಕರ್ಮಭೂಮಿ ಶಿಡ್ಲಘಟ್ಟದ ಜನತೆಯ ಸೇವೆಗೆ ಬದ್ಧನಾಗಿರುತ್ತೇನೆ ಎಂದು ನುಡಿದರು.