ಕುಣಿತ ಭಜನೆಯಲ್ಲಿ ಭಕ್ತಿಯ ಶಕ್ತಿ: ಡಾ. ಡಿ. ವೀರೇಂದ್ರ ಹೆಗ್ಗಡೆ

KannadaprabhaNewsNetwork |  
Published : Feb 13, 2026, 03:00 AM IST
ಭಜೆ | Kannada Prabha

ಸಾರಾಂಶ

ಕುಣಿತ ಭಜನೆಯಲ್ಲಿ ಎಷ್ಟು ಹೊತ್ತು ಕುಣಿದರೂ ಆಯಾಸವಾಗುವುದಿಲ್ಲ. ಏಕೆಂದರೆ ಆ ಭಕ್ತಿಯಲ್ಲಿ ಶಕ್ತಿ ಇದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: ಕುಣಿತ ಭಜನೆಯಲ್ಲಿ ಎಷ್ಟು ಹೊತ್ತು ಕುಣಿದರೂ ಆಯಾಸವಾಗುವುದಿಲ್ಲ. ಏಕೆಂದರೆ ಆ ಭಕ್ತಿಯಲ್ಲಿ ಶಕ್ತಿ ಇದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳ ಗ್ರಾಮದ ನಾರ್ಯ ಸುಜ್ಞಾನ ಭವನ ವಠಾರದಲ್ಲಿ ಫೆ.೭ರಂದು ನೃತ್ಯ ಭಜನಾ ಕಮ್ಮಟೋತ್ಸವ, ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಜನೆಯಲ್ಲಿ ಹೊಸ ಹೊಸ ಹಾಡುಗಳಿದ್ದರೆ ನೃತ್ಯ ಮಾಡಲು ಮತ್ತಷ್ಟು ಖುಷಿಯಾಗುತ್ತದೆ. ಕುಣಿತ ಭಜನೆಯಲ್ಲಿ ಎಷ್ಟು ಹೊತ್ತು ಕುಣಿದರೂ ಆಯಾಸವಾಗುವುದಿಲ್ಲ. ಏಕೆಂದರೆ ಆ ಭಕ್ತಿಯಲ್ಲಿ ಶಕ್ತಿ ಇದೆ. ಈ ಕಮ್ಮಟದಲ್ಲಿ ಸಣ್ಣ ಮಕ್ಕಳು ಭಾಗವಹಿಸಿರುವುದನ್ನು ನೋಡಿ ತುಂಬಾ ಸಂತೋಷವಾಯಿತು. ಇಂತಹ ಕಾರ್ಯಕ್ರಮವನ್ನು ಊರಿನವರು ಒಟ್ಟು ಸೇರಿ ಮಾಡಿದಾಗ ಇಡೀ ಊರಿಗೆ ಒಳ್ಳೆದಾಗುತ್ತದೆ ಎಂದರು.

ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ, ನಾನು ನಾನು ಎಂಬ ಮನಸ್ಥಿತಿಯನ್ನು ಬಿಟ್ಟು ನಾವು ನಾವು ಎಂಬ ಭಾವನೆಯಲ್ಲಿ ಬದುಕೋಣ. ಅಣ್ಣ ತಮ್ಮ ಎಂಬ ಭಾವನೆ ಇರಬೇಕು. ಸರಳತೆ ಹಾಗೂ ಸಜ್ಜನಿಕೆ ಸುಂದರ ಬದುಕಿನ ಆಧಾರ ಸ್ತಂಭ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕಾರ ಸಂಸ್ಕೃತಿ ಉಳಿಯುವಂತಹ ದೊಡ್ಡ ಕೆಲಸಕ್ಕೆ ಕೈ ಹಾಕಿದ್ದೀರಿ. ನಾವೆಲ್ಲ ಒಂದು ಒಳ್ಳೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಸಂತಸ ವ್ಯಕ್ತಪಪಡಿಸಿದರು.

ಶಾಸಕ ಹರೀಶ್ ಪೂಂಜ, ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್., ಧರ್ಮಸ್ಥಳ ಅನ್ನಪೂರ್ಣ ಛತ್ರದ ಸುಬ್ರಮಣ್ಯ ಪ್ರಸಾದ್, ಪಿಲಿಗೂಡು ಪದ್ಮನಾಭ ಶಿಲ್ಪಿ, ಅವಿನಾಶ್ ಶೆಟ್ಟಿ ಧರ್ಮಸ್ಥಳ, ಹರ್ಷ ಹೆಗ್ಡೆ ವೇಣೂರು, ಪುರಂದರ ರಾವ್ ಸೃಷ್ಟಿ ನಾರ್ಯ, ಸೌಮ್ಯ ಬೇಕಲ್ ಧರ್ಮಸ್ಥಳ, ಉಷಾ ಹೆಬ್ಬಾರ್ ಉಡುಪಿ, ಪ್ರಶಾಂತ್ ಜೈನ್ ಅಮೃತ್ ಸಿಲ್ಕ್ ಉಜಿರೆ, ಶೌರ್ಯ ವಿಪತ್ತು ತಂಡದ ಸದಸ್ಯರು, ಯೋಜನಾಧಿಕಾರಿಗಳು ಹಾಗೂ ಮತ್ತಿತರರು ಭಾಗವಹಿಸಿದ್ದರು.

“ಮನೆಯಲ್ಲಿಯೂ ಇಂತಹ ಭಜನೆ ಕಾರ್ಯಕ್ರಮವನ್ನು ಪ್ರತಿನಿತ್ಯ ಮಾಡಬೇಕು. ಕಮ್ಮಟ ಕುಣಿತ ಭಜನೆಯಲ್ಲಿ ಶಿಸ್ತು, ಉಲ್ಲಾಸ ಮತ್ತು ಆವೇಶ ಇದೆ. ಮಕ್ಕಳಿಗೆ ಇಂದ್ರಿಯದ ಮೇಲೆ ನಿಯಂತ್ರಣ ಬರುತ್ತದೆ. ಭಕ್ತಿ ಹೆಚ್ಚಾದಂತೆ ಆಯಾಸ ಕಮ್ಮಿಯಾಗುತ್ತದೆ. ಇಂತಹ ಕಾರ್ಯಕ್ರಮ ಯಾವಾಗಲೂ ನಡೆಯುತ್ತಿರಲಿ. ಬೇರೆ ಬೇರೆ ಊರಿನಿಂದ ಸಮವಸ್ತ್ರದಲ್ಲಿ ಆಗಮಿಸಿದ್ದೀರಿ. ಭಜನೆ ಮಾಡುವಾಗ ನಿಯಮದಿಂದ ಮಾಡಿದರೆ ಸಂತೋಷ.

ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಪಾಲಿಗೆ ವೈದ್ಯರು ದೇವರಾಗಿ, ರಾಕ್ಷಸರಾಗಬೇಡಿ: ಡಿಸಿ ಸಂಗಪ್ಪ
ನಾಡಿದ್ದು ಸಂತ ಸೇವಾಲಾಲರ 287ನೇ ಜಯಂತ್ಯುತ್ಸವ