ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿತಾಲೂಕಿನಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ತಾಲೂಕಿನಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಾಲೂಕಿನ ಚಿಮ್ಮಡ ಗ್ರಾಮದ ಅಕ್ಷತಾ ಗಂಡ ಮಾನಿಂಗ ಕವಟಿ(26) ಹಾಗೂ ತನ್ನಿಬ್ಬರು ಮಕ್ಕಳಾದ ಸಿದ್ಧಾರ್ಥ(05) ಹಾಗೂ ಅನು(04) ಅವರನ್ನು ಈಚೆಗೆ ಮನೆಯಿಂದ ಕರೆದುಕೊಂಡು ಹೋದವಳು ವಾಪಸ್ ಮನೆಗೆ ಬಾರದೆ ಕಾಣೆ ಆಗಿದ್ದಾಳೆ ಎಂದು ಫಿರ್ಯಾದಿಯಲ್ಲಿ ಆತಳ ಪತಿ ಮಾನಿಂಗ ಕವಟಿ ದೂರು ದಾಖಲಿಸಿದ್ದಾರೆ. ಇವರ ಮಾಹಿತಿ ದೊರೆತಲ್ಲಿ ಬನಹಟ್ಟಿ ಪೊಲೀಸ್ ಠಾಣೆ ಅಥವಾ 08353-230292 ನಂಬರನ್ನು ಸಂಪರ್ಕಿಸಲು ಪೊಲೀಸ್ ಮೂಲಗಳು ತಿಳಿಸಿವೆ.