ಬೆಳ್ತಂಗಡಿ: ಬ್ರಾಹ್ಮಣ ಮಹಾಸಭಾ ವಿಪ್ರ ಭಜನೆ ಮುಕ್ತಾಯ

KannadaprabhaNewsNetwork |  
Published : Oct 09, 2026, 03:00 AM IST
ವಿಪ್ರ | Kannada Prabha

ಸಾರಾಂಶ

ಬ್ರಾಹ್ಮಣ ಮಹಾಸಭಾ ಬೆಳ್ತಂಗಡಿ ತಾಲೂಕು ವತಿಯಿಂದ ಮೊದಲ ಬಾರಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯ ವಿಜಯಗೋಪುರದಲ್ಲಿ ಸೆ. 27 ರಿಂದ ಪ್ರಾರಂಭಗೊಂಡ "ವಿಪ್ರ ಭಜನಾ ಸಪ್ತಾಹ "ವು ಅ. 3 ರಂದು ರಾತ್ರಿ ಸಂಪನ್ನಗೊಂಡಿತು.

ಬೆಳ್ತಂಗಡಿ: ಬ್ರಾಹ್ಮಣ ಮಹಾಸಭಾ ಬೆಳ್ತಂಗಡಿ ತಾಲೂಕು ವತಿಯಿಂದ ಮೊದಲ ಬಾರಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯ ವಿಜಯಗೋಪುರದಲ್ಲಿ ಸೆ. 27 ರಿಂದ ಪ್ರಾರಂಭಗೊಂಡ "ವಿಪ್ರ ಭಜನಾ ಸಪ್ತಾಹ "ವು ಅ. 3 ರಂದು ರಾತ್ರಿ ಸಂಪನ್ನಗೊಂಡಿತು.

ತಾಲೂಕಿನ ಸುಮಾರು 22 ಭಜನಾ ತಂಡಗಳು ಪ್ರತಿದಿನ ತಲಾ 3 ರಂತೆ ಸಂಜೆ 5 ರಿಂದ ರಾತ್ರಿ 8 ರವರೆಗೆ ಭಜನಾ ಸೇವೆಯೆಯನ್ನು ಶ್ರೀ ದೇವರ ಸನ್ನಿಧಿಯಲ್ಲಿ ಸಮರ್ಪಿಸಿದರು.

ಬ್ರಾಹ್ಮಣ ಮಹಾ ಸಭಾ ಬೆಳ್ತಂಗಡಿ ತಾಲೂಕು ಅಧ್ಯಕ್ಷ, ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ವಿಪ್ರ ಭಜನಾ ಸಪ್ತಾಹಕ್ಕೆ ಪ್ರಾಯೋಜಕರಾಗಿ ಸಹಕರಿಸಿದ ಸಮಾಜ ಬಾಂಧವರನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡು ಮುಂದೆಯೂ ಇಂತಹ ಕಾರ್ಯಕ್ರಮ ಗಳಿಗೆ ಎಲ್ಲರ ಸಹಕಾರ ಹಾಗೂ ಪಾಲ್ಗೊಳ್ಳುವಿಕೆ ಯೊಂದಿಗೆ ಸಮಾಜದ ಒಗ್ಗಟ್ಟಿಗೆ ಕಾರ ಣರಾಗಬೇಕೆಂದು ನುಡಿದು ಕೃತಜ್ಞತೆ ಸಲ್ಲಿಸಿದರು.

.

ವಿಪ್ರ ಭಜನಾ ಸಪ್ತಾಹದ ತಂಡಗಳ ಜೋಡಣೆಯಲ್ಲಿ ಸಹಕರಿಸಿದ ಸಂಚಾಲಕಿ ಸೌಮ್ಯ ರಾವ್ ಅವರನ್ನು ಶಾಲು ಗೌರವ ನೀಡಿ ಪುರಸ್ಕರಿಸಲಾಯಿತು. ಜತೆ ಕಾರ್ಯದರ್ಶಿ ಮುರಳಿಕೃಷ್ಣ ಆಚಾರ್, ಕೋಶಾಧಿಕಾರಿ ವಿದ್ಯಾಕುಮಾರ್ ಕಾಂಚೋಡು, ಉಪಾಧ್ಯಕ್ಷ ಶರತ್ ಕುಮಾರ್, ಹರೀಶ್ ರಾವ್ ಮುಂಡ್ರುಪ್ಪಾಡಿ , ಮೇಧಾ ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವನ್ಯಜೀವಿ ಸಪ್ತಾಹ: ಪ್ರಬಂಧ, ಚಿತ್ರಕಲೆ ಸ್ಪರ್ಧೆ
ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಕಿದೆ ಚಿಕಿತ್ಸೆ