ವಿಜಯಾದ್ರಿ ಪರ್ವತದಲ್ಲಿ ಬಜರಂಗಬಲಿ ಭಜನೆ

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ರಾತ್ರಿ ಇಡೀ ಭಜನಾ ಗಾಯನ ಕಾರ್ಯಕ್ರಮ ಜರುಗಿದವು. ಸ್ವರಸಾಮ್ರಾಟ ಕುಲದೀಪ್ ಓಜಾ, ಸೋನುಕನ್ವರ್ ಅವರ ಭಜನಾ ಗಾಯನಕ್ಕೆ ನೆರೆದಿದ್ದ ಭಕ್ತರು ಮೈ ಮರೆತು ಚಪ್ಪಾಳೆ ತಟ್ಟುವ ಮೂಲಕ ಕುಣಿದು ಕುಪ್ಪಳಿಸಿದರು. ಭಜನೆಯಲ್ಲಿ ಗಾಯನದಲ್ಲಿ ತಲ್ಲೀನರಾಗಿ ತಾವು ಸಹ ಹೆಜ್ಜೆ ಹಾಕುತ್ತಾ ಭಜನಾ ಪದ ಹಾಡುತ್ತಾ ಹುಚ್ಚೆದ್ದು ಕುಣಿದರು.

ಕೊಪ್ಪಳ: ತಾಲೂಕಿನ ಕಾಸನಕಂಡಿಯ ವಿಜಯಾದ್ರಿ ಪರ್ವತ ತಿಮ್ಮಪ್ಪನ ಮಟ್ಟಿಯಲ್ಲಿ ರಾಮಾಯಣ ಪಠಣ ವಾರ್ಷಿಕೋತ್ಸವ ಬಜರಂಗಬಲಿ ನಾಮಾರ್ಥದಲ್ಲಿ ಬೃಹತ್ ಭಜನಾ ಕಾರ್ಯಕ್ರಮ ಶನಿವಾರ ಜರುಗಿತು. ಭಜನಾ ಪದಗಳಿಗೆ ನೆರೆದಿದ್ದ ಭಕ್ತರು ಕುಣಿದು ಕುಪ್ಪಳಿಸಿದರು.ವಿಜಯಾದ್ರಿ ಪರ್ವತದಲ್ಲಿ ರಾಮಾಯಣ ಪಠಣ ವಾರ್ಷಿಕೋತ್ಸವ ಪ್ರಯುಕ್ತ ಜರುಗಿದ ಬೃಹತ್ ಭಜನಾ ಸಂಜೆ ಕಾರ್ಯ್ರಮದಲ್ಲಿ ರಾಜಸ್ಥಾನ, ಜೈಪೂರ್ ಸೇರಿದಂತೆ ಅನ್ಯ ರಾಜ್ಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.ಸಂಜೆ 7ರಿಂದ 9ರವರೆಗೆ ಸುಂದರಾಖಂಡ ಪಾರಾಯಣ ಜರುಗಿತು. ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿದವು. ನಂತರ ಅನ್ನಸಂತರ್ಪಣೆ ಜರುಗಿತು. ಬೆಳಗ್ಗೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.ಬಜರಂಗಬಲಿ ನಾಮಾರ್ಥದಲ್ಲಿ ವೀರಾಜಂಜನೇಯ ಸೇವಾ ಸಮಿತಿ ಟ್ರಸ್ಟ್, ಹನುಮಾನ್ ಮಿತ್ರ ಮಂಡಳಿ, ಹೊಸಪೇಟೆ ಮತ್ತು ಹಿಟ್ನಾಳ್ ಟ್ರಾನ್ಸ್ ಪೋರ್ಟ್ ಸಮಿತಿಗಳ ಆಯೋಜನೆಯಲ್ಲಿ ರಾಜಾಸ್ಥಾನದ ಜೋದಪುರದ ಸ್ವರಸಾಮ್ರಾಟ ಕುಲದೀಪ್ ಓಜಾ, ಸ್ವರಕೋಗಿಲೆ ಸೋನುಕನ್ವರ್ ಅವರಿಂದ ಭಜನಾ ಗಾಯನ ತಡರಾತ್ರಿ ಆರಂಭವಾದವು.ರಾತ್ರಿ ಇಡೀ ಭಜನಾ ಗಾಯನ ಕಾರ್ಯಕ್ರಮ ಜರುಗಿದವು. ಸ್ವರಸಾಮ್ರಾಟ ಕುಲದೀಪ್ ಓಜಾ, ಸೋನುಕನ್ವರ್ ಅವರ ಭಜನಾ ಗಾಯನಕ್ಕೆ ನೆರೆದಿದ್ದ ಭಕ್ತರು ಮೈ ಮರೆತು ಚಪ್ಪಾಳೆ ತಟ್ಟುವ ಮೂಲಕ ಕುಣಿದು ಕುಪ್ಪಳಿಸಿದರು. ಭಜನೆಯಲ್ಲಿ ಗಾಯನದಲ್ಲಿ ತಲ್ಲೀನರಾಗಿ ತಾವು ಸಹ ಹೆಜ್ಜೆ ಹಾಕುತ್ತಾ ಭಜನಾ ಪದ ಹಾಡುತ್ತಾ ಹುಚ್ಚೆದ್ದು ಕುಣಿದರು.ಶ್ರೀ ವಿದ್ಯಾದಾಸ್ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ವೀರಾಂಜನೇಯ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ವಿ.ಆರ್. ಪಾಟೀಲ, ಹಂಪಿ ಇಂಟರ್‌ನ್ಯಾಷನಲ್ ಹೋಟೆಲ್‌ನ ಶೇರ್ ಸಿಂಹ ಪರ್ಮಾಲ್, ಪುನಾ ಸಾಹಿಬಾಬಾ ಪಾಲ್ಕಿ ಸೋಹಾ ಸಮಿತಿಯವರು, ಪ್ರಮುಖರಾದ ಎಸ್.ಆರ್. ಪಾಟೀಲ್, ವಿಜಯ ಮೇಹತಿ, ಗೋಕುಲ ರಾಹುರಕರ್, ಮಹಾವೀರ, ಕ್ಷೀರಸಾಗರ, ದೇವಿದಾಸ ಪಡ್ತರೆ, ರಮೇಶ ಬೋಸ್ಲೆ, ಸದಾಶಿವ ನಲೋಡೆ, ಪ್ರವೀಣ ನಾಯಕ, ಜಿಪಂ ಮಾಜಿ ಅಧ್ಯಕ್ಷ ಟಿ.ಜನಾರ್ದನ್ ಇದ್ದರು.

Share this article