ಚಿಕ್ಕಬಳ್ಳಾಪುರದಲ್ಲಿ ಬಕ್ರೀದ್ ಆಚರಣೆ

KannadaprabhaNewsNetwork |  
Published : Jun 18, 2024, 12:47 AM IST
ಸಿಕೆಬಿ-1 ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಭಾಂಧವರು.ಸಿಕೆಬಿ-2 ಈದ್ಗಾ ಮೈದಾನದ ಮುಂಭಾಗದ ಸ್ಮಶಾನದಲ್ಲಿ  ತಮ್ಮವರ ಸಮಾಧಿಗಳಿಗೆ ಪುಷ್ಪಗಳನ್ನು  ಮತ್ತು ದೂಪ ಹಾಕಿ ಪ್ರಾರ್ಥನೆ ಮಾಡುತ್ತಿರುವ ಮುಸ್ಲಿಂ ಭಾಂಧವರು. | Kannada Prabha

ಸಾರಾಂಶ

ಮುಸಲ್ಮಾನ ಬಾಂಧವರು ಮೆರವಣಿಗೆಯಲ್ಲಿ ಬಿಬಿ ರಸ್ತೆ, ಸರ್.ಎಂ.ವಿ.ರಸ್ತೆ, ಗಂಗಮ್ಮನ ಗುಡಿ ರಸ್ತೆ ಮೂಲಕ ಎಂ ಜಿ ರಸ್ತೆ ತಲುಪಿ ಅಲ್ಲಿಂದ ಪ್ರಶಾಂತ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಕ್ರೀದ್ ಅಥವಾ ಈದ್ ಉಲ್ ಅಧಾ ’ತ್ಯಾಗದ ಹಬ್ಬ’ವಾಗಿದ್ದು ಇದು ಇಸ್ಲಾಮಿಕ್ ಸಮುದಾಯವು ಆಚರಿಸುವ ಎರಡನೇ ಪ್ರಮುಖ ಹಬ್ಬವಾಗಿದೆ. ಸೋಮವಾರ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿ ಮತ್ತು ಸಡಗರದಿಂದ ಚಿಕ್ಕಬಳ್ಳಾಪುರ ನಗರದಲ್ಲಿ ಆಚರಿಸಿದರು.

ಮುಸ್ಲಿಂ ಬಾಂಧವರು ನಗರದ ಬಿಬಿ ರಸ್ತೆ ಯಲ್ಲಿರುವ ಮಜೀದೆ ಕುರ್ದ್ ಮಸೀದಿ ಬಳಿ ಸಮಾವೇಶಗೊಂಡು ಅಲ್ಲಿಂದ ಸಾಮೂಹಿಕವಾಗಿ ಮೆರವಣಿಗೆಯಲ್ಲಿ ಬಿಬಿ ರಸ್ತೆ, ಸರ್.ಎಂ.ವಿ.ರಸ್ತೆ, ಗಂಗಮ್ಮನ ಗುಡಿ ರಸ್ತೆ ಮೂಲಕ ಎಂ ಜಿ ರಸ್ತೆ ತಲುಪಿ ಅಲ್ಲಿಂದ ಪ್ರಶಾಂತ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮುಸ್ಲಿಂ ಬಾಂಧವರು ಪರಸ್ಪರ ಅಪ್ಪಿಕೊಂಡು ಶುಭಾಶಯ ಕೋರಿದರು.

ನಂತರ ಅಲ್ಲಿಯೆ ಈದ್ಗಾ ಮೈದಾನದ ಎದುರಲ್ಲಿನ ಸಮಾಧಿ ಸ್ಥಳಗಳಿಗೆ ತೆರಳಿ ತಮ್ಮ ಹಿರಿಯರ ಸಮಾಧಿಗಳಿಗೆ ಪುಷ್ಪಗಳನ್ನು ಮತ್ತು ದೂಪ ಹಾಕಿ ಪ್ರಾರ್ಥನೆ ಮಾಡಿದರು.

ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಜಮಾತೆ ಐಲೇ ಇಸ್ಲಾಂನ ಆಡಳಿತಾಧಿಕಾರಿ ಹೈದರ್‌ಆಲಿ, ಮಹಮದ್ ದಾವೂದ್,ಸೈಯದ್ ಅಜರ್, ಎಸ್.ಎಂ.ರಫೀಕ್.ಜಿಲಾನಿ ಸೇರಿದಂತೆ ಸಹಸ್ರಾರು ಮುಸ್ಲಿಮರು ಬಾಗವಹಿಸಿದ್ದರು.

ಶಿಡ್ಲಘಟ್ಟದಲ್ಲಿ ಬಕ್ರೀದ್‌ ಆಚರಣೆ

ನಗರದಲ್ಲಿ ಸೋಮವಾರ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಕಾರಣರಾದ ಆರಕ್ಷಕ ಅಧಿಕಾರಿಗಳನ್ನು ನಗರದ ಅಮೀರ್ಯ ಮಸೀದಿ ಸಮಿತಿ ಪದಾಧಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು. ನಗರದ ಅಜಾದ್ ನಗರದಲ್ಲಿರುವ ಅಮೀರ್ಯ ಮಸೀದಿ ಅಧ್ಯಕ್ಷರಾದ ಬಾಬಾ ಜಾನ್ ಅಧ್ಯಕ್ಷತೆಯಲ್ಲಿ ಶಿಡ್ಲಘಟ್ಟ ಪೊಲೀಸ್ ಠಾಣೆ ಆರಕ್ಷಕ ವೃತ್ತ ನಿರೀಕ್ಷಕರಾದ ಎಂ.ಶ್ರೀನಿವಾಸ್ ಹಾಗೂ ನಗರ ಠಾಣೆ ಆರಕ್ಷಕ ಉಪ ನಿರೀಕ್ಷಕ ವೇಣುಗೋಪಾಲ್ ಅವರನ್ನು ಶಾಲು ಹೊದಿಸಿ ಹಣ್ಣು ಹಂಪಲು ಕೊಟ್ಟು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಸೀದಿ ಕಾರ್ಯದರ್ಶಿ ಅಲ್ತಾಪ್ ಹುಸೇನ್, ಉಪಾಧ್ಯಕ್ಷರಾದ ಸಾಧಿಕ್ ಅಹಮ್ಮದ್, ಪದಾದಿಕಾರಿಗಳಾದ ಫಯಾಜ್ ಮೌಲ, ಬಶೀರ್ ಸಾಬ್ , ಜಹೂರ್ ಸಾಬ್, ಮತ್ತು ಕಲೀಲ್ ಸಾಬ್ ಸೇರಿದಂತೆ ಮತ್ತಿತರರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ