ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಪೋಕ್ಲು, ಎಮ್ಮೆಮಾಡು, ಕೊಳಕೇರಿ , ಕುಂಜಿಲ, ಹಳೆತಾಲೂಕು, ಕೊಟ್ಟಮುಡಿ, ಪಡಿಯಾಣಿ, ಚೇರಿಯಪರಂಬು ಸೇರಿದಂತೆ ವಿವಿಧ ಜುಮಾ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಆಚರಿಸಿದರು.
ಸಮೀಪದ ಕೊಳಕೇರಿ ಸುನ್ನಿ ಮುಸ್ಲಿಂ ಜಮಾಯತ್ ವತಿಯಿಂದ ಬಕ್ರೀದ್ ಹಬ್ಬದ ಆಚರಣೆ ಮಸೀದಿಯ ಕತೀಬರಾದ ಅಶ್ರಫ್ ಅಹ್ಸನಿ ಉಸ್ತಾದ್ ರಬಕ್ರೀದ್ ನಮಾಜ್ ನ ನೇತ್ರತ್ವ ವಹಿಸಿ ಪ್ರಾರ್ಥನೆ ಮಾಡಿ ಬಕ್ರೀದ್ ಹಬ್ಬದ ಮಹತ್ವವನ್ನು ಅರಿವು ಮೂಡಿಸಿದರು.ಈ ಸಂದರ್ಭ ಜಮಾಯತ್ ಅಧ್ಯಕ್ಷ ಅಶ್ರಫ್ ಎ.ಎ, ಕಾರ್ಯದರ್ಶಿ ರಫೀಕ್.ಎಂ.ಹೆಚ್., ಜಮಾಯತ್ ಆಡಳಿತ ಮಂಡಳಿಯವರು ಮತ್ತು ಮತ ಬಾಂಧವರು ಅಧಿಕ ಸಂಖ್ಯೆ ಯಲ್ಲಿ ಸೇರಿದ್ದರು. ನಮಾಜ್ ಮುಗಿದ ನಂತರ ಸಿಹಿ ತಿಂಡಿ ಪಾನೀಯಗಳನ್ನು ಹಂಚಿ ತಮ್ಮ ತಮ್ಮ ಕುಟುಂಬದವರೊಂದಿಗೆ ಹಬ್ಬ ಆಚರಿಸಿದರು.