ಕನ್ನಡಪ್ರಭ ವಾರ್ತೆ ನಾಪೋಕ್ಲು
ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ ಹಬ್ಬವು ಒಂದಾಗಿದೆ. ಬೆಳಗ್ಗೆ ಸ್ಥಳೀಯ ಪಟ್ಟಣದ ಮುಯ್ಯದ್ದಿನ್ ಜುಮ್ಮಾ ಮಸೀದಿಯಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಸಾಮೂಹಿಕ ಪ್ರಾರ್ಥನೆ, ನಮಾಜ್ ನೆರವೇರಿಸಿದರು. ಈ ಸಂದರ್ಭ ಧರ್ಮ ಗುರುಗಳಾದ ಅಶ್ರಫ್ ಅನ್ಸಾರಿ ವಿಶೇಷ ಪ್ರಾರ್ಥನೆ ನೆರವೇರಿಸಿ ಬಳಿಕ ದಿನದ ಮಹತ್ವ ಹಾಗೂ ಧರ್ಮ ಸಂದೇಶ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಮಾತ್ ಆಡಳಿತ ಮಂಡಳಿ ಅಧ್ಯಕ್ಷ ಎಂ ಎಚ್ ಅಬ್ದುಲ್ ರೆಹಮಾನ್, ಉಪ ಅಧ್ಯಕ್ಷ ಬದುರುದ್ದೀನ್, ಕಾರ್ಯದರ್ಶಿ ಯೂನಸ್, ಮಾಜಿ ಅಧ್ಯಕ್ಷ ಸಲೀಂ ಹ್ಯಾರಿಸ್, ಮಾಜಿ ಉಪ ಅಧ್ಯಕ್ಷ ರಶೀದ್, ಮಾಜಿ ಕಾರ್ಯದರ್ಶಿ ಅಹಮದ್ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಜನಾಂಗ ಬಾಂಧವರು ಉಪಸ್ಥಿತರಿದ್ದರು.
ಇದೇ ರೀತಿ ಎಮ್ಮೆಮಾಡು, ಪಡಿಯಾಣಿ, ಕುಂಜಿನ, ಕೊಟ್ಟಮುಡಿ, ಎಡಪಾಲ, ಕಿಕ್ಕೆರೆ, ಹಳೆ ತಾಲೂಕು, ಕೊಟ್ಟಮುಡಿ ಸೇರಿದಂತೆ ವಿವಿಧ ಮಸೀದಿಗಳಲ್ಲಿ ನಮಾಜ್, ಪ್ರಾರ್ಥನೆಯೊಂದಿಗೆ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರದ್ಧಾ ಭಕ್ತಿಯಿಂದ ಬಕ್ರಿದ್ ಹಬ್ಬವನ್ನು ವೈಶಿಷ್ಟ್ಯವಾಗಿ ಆಚರಿಸಿದರು . ಈ ಸಂದರ್ಭ ವಿಶೇಷ ಆಕರ್ಷಕ ದಿರುಸುಗಳನ್ನು ಧರಿಸಿದ ಮುಸ್ಲಿಂ ಸಮುದಾಯ ಬಾಂಧವರು ಪರಸ್ಪರ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿ ಹಬ್ಬವನ್ನು ಆಚರಿಸಿಕೊಂಡರು.