- ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ, ಅಸಹಾಯಕರಿಗೆ ನೆರವು ।
- - - ಕನ್ನಡಪ್ರಭ ವಾರ್ತೆ, ದಾವಣಗೆರೆ, ಜೂ.17 ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಸೋಮವಾರ ಮುಸ್ಲಿಂ ಧರ್ಮೀಯರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ನಗರದ ವಿವಿಧ ಈದ್ಗಾ ಮೈದಾನಗಳಲ್ಲಿ ಪುಟ್ಟ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯಗಳ ವಿನಿಮಯ ಮಾಡಿಕೊಂಡರು.ಹಳೇ ಪಿ.ಬಿ. ರಸ್ತೆಯ ಈದ್ಗಾ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಎಎಸ್‌ಪಿ ವಿಜಯಕುಮಾರ ಎಂ.ಸಂತೋಷ ಭೇಟಿ ನೀಡಿ, ಮುಸ್ಲಿಂ ಧರ್ಮೀಯರಿಗೆ ಹಬ್ಬದ ಶುಭ ಕೋರಿ, ಮಾತನಾಡಿದರು.
ಮುಸ್ಲಿಂ ಗುರುಗಳು ಪ್ರವಚನ ನೀಡಿ, ಜೀವನದಲ್ಲಿ ತ್ಯಾಗ, ಬಲಿದಾನ ಮಾಡುವಂತಹ ಸಂದರ್ಭಗಳು ಎದುರುತ್ತವೆ. ಎಲ್ಲರ ಬದುಕು ಹಸನಾಗಲು ತ್ಯಾಗವೂ ಅತಿ ಮುಖ್ಯ. ಪ್ರತಿಯೊಬ್ಬರೂ ಸಾಮರಸ್ಯದಿಂದ ಬಾಳಬೇಕು. ಅಸಹಾಯಕರು, ಬಡವರಿಗೆ ಕೈಲಾದ ನೆರವಿನಹಸ್ತ ಚಾಚಬೇಕು ಎಂದು ಹೇಳಿದರು.
ಮೌಲಾನಾ ನಸೀರ್ ಅಹಮ್ಮದ್ ಮಿಸ್ಬಾಯಿ ಪ್ರವಚನ ನೀಡಿದರು. ತಂಜಿಮ್ ಅಧ್ಯಕ್ಷ ದಾದಾಪೀರ್ ಸೇಟ್, ಉಪಾಧ್ಯಕ್ಷ ಎಸ್.ಕೆ.ಅಮ್ಜದ್‌ವುಲ್ಲಾ, ಖಜಾಂಚಿ ದಾದಾಪೀರ್, ಶಂಶುದ್ದೀನ್ ರಜ್ವಿ, ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಅಬ್ದುಲ್ ಲತೀಫ್ ವಾಲೀಕಾರ್, ಎ.ಬಿ.ರಹೀಂ, ಕಬೀರ್ ಖಾನ್, ಅಯೂಬ್ ಪೈಲ್ವಾನ್, ಜೆ.ಅಮಾನುಲ್ಲಾ ಖಾನ್, ಮಹಮ್ಮದ್ ಜಬೀ ಟೈಲ್ಸ್, ಇಮ್ತಿಯಾಜ್ ಬೇಗ್, ನೂರ್ ಅಹಮ್ಮದ್, ವಕೀಲರಾದ ರಿಜ್ವಿ ಖಾನ್, ಅನೀಸ್ ಪಾಷಾ, ಅಲ್ಲಾವಲಿ ಮುಜಾಹಿದ್, ಮಹಮ್ಮದ್ ಅಲಿ ನೂರ್ ಹಿಂದ್ ಲ್ಯಾಬ್, ಪತ್ರಕರ್ತ ಸಿಕಂದರ್, ಮೆಹಬೂಬ್ ಬಾಷಾ, ಅಮ್ಜದ್ ಅಲಿ ಸೇರಿದಂತೆ ಅನೇಕರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.
ದಾವಣಗೆರೆಯಲ್ಲಿ ಬಕ್ರೀದ್ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಮಾತನಾಡಿದರು. -17ಕೆಡಿವಿಜಿ14:
-17ಕೆಡಿವಿಜಿ15, 16, 17:
ದಾವಣಗೆರೆಯಲ್ಲಿ ಮುಸ್ಲಿಮರ ಪವಿತ್ರ ಬಕ್ರೀದ್ ಹಬ್ಬ ಸಂಭ್ರಮದಲ್ಲಿರುವ ಮಕ್ಕಳು.