ಜಿಲ್ಲೆಯಾದ್ಯಂತ ಮುಸ್ಲಿಮರ ಬಕ್ರೀದ್‌ ಸಂಭ್ರಮ

KannadaprabhaNewsNetwork |  
Published : May 29, 2026, 01:15 AM IST
ಸಸಸ | Kannada Prabha

ಸಾರಾಂಶ

ಕಾಫಿನಾಡು ಚಿಕ್ಕಮಗಳೂರು ನಗರ ಸೇರಿದಂತೆ ನಾಡಿನಾದ್ಯಂತ ಗುರುವಾರ ಶ್ರದ್ಧಾ ಭಕ್ತಿಯಿಂದ ಮುಸ್ಲಿಂ ಬಾಂಧವರು ಬಕ್ರೀದ್ ಆಚರಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರು ನಗರ ಸೇರಿದಂತೆ ನಾಡಿನಾದ್ಯಂತ ಗುರುವಾರ ಶ್ರದ್ಧಾ ಭಕ್ತಿಯಿಂದ ಮುಸ್ಲಿಂ ಬಾಂಧವರು ಬಕ್ರೀದ್ ಆಚರಿಸಿದರು.

ನಗರದ ಮುಸ್ಲಿಂ ಸಮುದಾಯದವರು ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯವನ್ನು ವಿನಿಯಮ ಮಾಡಿಕೊಂಡರು.

ನಗರದ ಎಂ.ಜಿ.ರಸ್ತೆಯಲ್ಲಿರುವ ತಾಜಾರಿನ್, ಸಂಗೀನಾ, ನೆಹರು ನಗರದ ಬದ್ರಿಯಾ, ಉಪ್ಪಳ್ಳಿಯ ಶಾದ್ರುಲಿ, ಕಲ್ಲುದೊಡ್ಡಿಯ ಅಮ್ಜದ್ ಖಾರಾರ್ ಹಾಗೂ ಆದಿಶಕ್ತಿ ನಗರದ ಮಸೀದಿಗಳಲ್ಲಿ ಬ್ಯಾರಿ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಂ ಸಮುದಾಯದವರು ನಗರದ ವಿಜಯಪುರ ಹಾಗೂ ಕೆಂಪನಹಳ್ಳಿಯ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕೆಂಪನಹಳ್ಳಿಯ ಈದ್ಗಾ ಮೈದಾನಕ್ಕೆ ಸಾಮೂಹಿಕ ಪ್ರಾರ್ಥನೆ ಬಕ್ರೀದ್ ಹಬ್ಬದ ಶುಭಾಶಯ ಸಲ್ಲಿಸಿದರು.

ಎಲ್ಲರೂ ಕೂಡ ಜಾತಿ, ಧರ್ಮವನ್ನು ಬದಿಗಿಟ್ಟಿ ಸೌಹಾರ್ದತೆಯಿಂದ ಬಾಳಬೇಕು. ಇದು, ಸಂವಿಧಾನದ ಆಶಯವಾಗಿದೆ. ಅದರಂತೆ ಎಲ್ಲರೂ ನಡೆದುಕೊಳ್ಳಬೇಕೆಂದು ಕರೆ ನೀಡಿದರು. ಈ ವೇಳೆ ಧರ್ಮಗುರುಗಳು ಹಾಜರಿದ್ದರು.

ಬಾಳೆಹೊನ್ನೂರು: ಪರಸ್ಪರ ಮುಸ್ಲಿಮರ ಶುಭಾಶಯಬಾಳೆಹೊನ್ನೂರು: ಮುಸಲ್ಮಾನ್ ಬಾಂಧವರ ಪವಿತ್ರ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಬಾಳೆಹೊನ್ನೂರು ಹೋಬಳಿಯ ವಿವಿಧೆಡೆ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ಬಕ್ರೀದ್ ಅಂಗವಾಗಿ ಮುಸಲ್ಮಾನ್ ಬಾಂಧವರು ಸುತ್ತಮುತ್ತಲಿನ ಮಸೀದಿ, ದರ್ಗಾ, ಈದ್ಗಾ ಮೈದಾನಗಳಿಗೆ ತೆರಳಿ ಧರ್ಮಗುರುಗಳ ನೇತೃತ್ವದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಸಾಮೂಹಿಕ ಪ್ರಾರ್ಥನೆ ಬಳಿಕ ಮುಸಲ್ಮಾನ್ ಬಾಂಧವರು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ಕೋರಿಕೊಂಡರು. ಮನೆಗಳಲ್ಲಿ ವಿಶೇಷ ಸಿಹಿಯಡುಗೆ, ಮಾಂಸದೂಟ ತಯಾರಿಸಿ ಮನೆ ಮಂದಿಯೆಲ್ಲಾ ಒಟ್ಟಾಗಿ ಕುಳಿತು ಸೇವಿಸಿದರು. ಬಂಧುಮಿತ್ರರಿಗೆ ಹಬ್ಬದೂಟ ನೀಡಿ ಸಂಭ್ರಮಿಸಿದರು.

ಕೊಪ್ಪ ಸುತ್ತಮುತ್ತ ಬಕ್ರೀದ್ ಸಂಭ್ರಮಕೊಪ್ಪ: ತಾಲೂಕು, ಪಟ್ಟಣ, ಪಟ್ಟಣದ ಹೊರವಲಯಗಳ ಮಸೀದಿಗಳಲ್ಲಿ ಗುರುವಾರ ತ್ಯಾಗ ಮತ್ತು ನಂಬಿಕೆಯ ಪವಿತ್ರವಾದ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತುತಾಲೂಕಿನ ಕುದ್ರೆಗುಂಡಿಯ ಮೊಹಿದ್ದೀನ್ ಜುಮ್ಮಾ ಮಸೀದಿ, ಹರಿಹರಪುರ, ದೇವರಮನೆ, ಮತ್ವನಿಯ ಒಟ್ಟು ನಾಲ್ಕು ಮಸೀದಿಗಳಲ್ಲಿ ಮತ್ತು ನಾರ್ವೆ ಮಸೀದಿ, ಜಯಪುರ, ಶಾಂತಿಪುರ, ಕೊಪ್ಪ ಪಟ್ಟಣದ ಮೊಹಿದ್ದೀನ್ ಜುಮ್ಮಾ ಮಸೀದಿ, ಜಾಮೀಯಾ ಮಸೀದಿ, ಮೇಲಿನಪೇಟೆಯ ಮದೀನಾ ಮಸೀದಿ ಮತ್ತು ನೇತಾಜಿ ನಗರದ ನೂರ್ ಮಸೀದಿ ಸೇರಿದಂತೆ ಮೂರು ಹನಫಿ ಮಸೀದಿಗಳ ಜಮಾತ್ ಬಾಂಧವರು ಗುಣವಂತೆ ರಸ್ತೆಯ ಕುವೆಂಪು ನಗರದ ಈದ್ಗ ಮೈದಾನದಲ್ಲಿ ಬಕ್ರೀದ್ ನಮಾಝ್ ನಿರ್ವಹಿಸಿದರು.ಕೆಸವೆ ರಸ್ತೆಯ, ಮಸೀದಿ, ಪಟ್ಟಣದ ಹೊರವಲಯದ ಸಣ್ಣಕೆರೆ, ಜೋಗಿಸರ ಮತ್ತು ರಾಘವೇಂದ್ರ ನಗರದ ನೂರುಲ್ ಅಲಂ, ನೇತಾಜಿ ನಗರದ ಅಲ್ ಬದ್ರಿಯಾ ಮಸೀದಿಗಳಲ್ಲಿ ಈದ್ ನಮಾಝ್, ನಂತರ ಖುತ್ಬಾ ಪಾರಾಯಣ, ಯಾಸೀನ್ ಸಾಮೂಹಿಕ ಪ್ರಾರ್ಥನೆ, ಧರ್ಮಗುರುಗಳಿಂದ ಬಕ್ರೀದ್ ಸಂದೇಶ ನಡೆಯಿತು, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ನಡೆಯಿತು. ಕೊನೆಯಲ್ಲಿ ತಮ್ಮ, ತಮ್ಮ ಜಮಾತ್ ವ್ಯಾಪ್ತಿಯಲ್ಲಿರುವ ಕಬರ್ ಸ್ಥಾನಗಳಿಗೆ ತೆರಳಿ ಮರಣಹೊಂದಿದ ತಮ್ಮ ಕುಟುಂಬಸ್ಥರ ಪಾರರ್ತಿಕ ಜೀವನವನ್ನು ಸುಗಮವಾಗಿಸುವಂತೆ ಪ್ರಾರ್ಥನೆ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಸಂಖ್ಯೆ ಆಧರಿಸಿ ಮೂಲಸೌಕರ್ಯ ಒದಗಿಸಲು ಆದ್ಯತೆ
ಸಿದ್ದು ನ್ಯಾಮಗೌಡ ಸೌಹಾರ್ದ ಬ್ಯಾಂಕ್‌ಗೆ ₹5 ಕೋಟಿ ಲಾಭ