ಕನ್ನಡಪ್ರಭ ವಾರ್ತೆ ನಾಪೋಕ್ಲು
ಜಮಾಹತ್ ಕತೀಬರಾದ ಜುರೈಜ್ ಸಹದಿ ಕಾಸರಗೋಡು ವಿಶೇಷ ಪ್ರಾರ್ಥನೆ ನೆರವೇರಿಸಿ ದಿನದ ಮಹತ್ವ ಹಾಗೂ ಧರ್ಮ ಸಂದೇಶ ನೀಡಿ ಶುಭ ಹಾರೈಸಿದರು.
ಈ ಸಂದರ್ಭ ಜಮಾಹತ್ ಅಧ್ಯಕ್ಷರಾದ ಬಿ.ಎ. ನಾಸಿರ್ ಮತ್ತು ಕಾರ್ಯದರ್ಶಿ ರಫೀಕ್ ಎಂ. ಎಚ್. ಹಫೀಲ್ ಸಹದಿ ಎಮ್.ಎಮ್. ಇಸ್ಮಾಯಿಲ್ ಜಮಾಹತ್ ಪದಾಧಿಕಾರಿಗಳು, ಸದಸ್ಯರು ಹಾಗೂ ಜನಾಂಗ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ನಮಾಜ್ ನಂತರ ಸಿಹಿ ತಿಂಡಿ ಮತ್ತು ಪಾನೀಯ ವಿತರಿಸಲಾಯಿತು. ಬಳಿಕ ತಮ್ಮ ತಮ್ಮ ಕುಟುಂಬದಿಂದ ನಿಧನ ಹೊಂದಿದವರ ಸಮಾಧಿಗೆ (ಖಬರ್ ಸ್ಥಾನ) ಹೋಗಿ ಪ್ರಾರ್ಥನೆ ನೆರವೇರಿಸಿದ ಬಳಿಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.