ಮಾಜಿ ಶಾಸಕ ದಿವಂಗತ ಎಚ್.ಎಸ್. ಪ್ರಕಾಶ್ ಕುಟುಂಬದ ಸದಸ್ಯರು, ಭಕ್ತರು ಆಯೋಜನೆ । ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನಕನ್ನಡಪ್ರಭ ವಾರ್ತೆ ಹಾಸನ
ಮೊದಲು ಶ್ರೀಗಳ ಭಾವಚಿತ್ರಕ್ಕೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ‘ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ೭೯ನೇ ಜನ್ಮ ದಿನದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಗಳ ಒಂದು ಸಮುದಾಯಕ್ಕೆ ಸೀಮಿತವಾಗದೇ ಇಡೀ ಸಮಾಜದಲ್ಲಿ ನೊಂದ ವರ್ಗದ ಜನತೆಗೆ ದನಿಯಾದರು. ಶ್ರೀ ಮಠದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅವರು ನೀಡಿದ ವಿದ್ಯಾದಾನವು ಸಮಾಜದಲ್ಲಿ ಮರೆಯುವಾಗಿಲ್ಲ. ಅವರು ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಪ್ರತಿವರ್ಷ ನಮ್ಮ ಕುಟುಂಬದಿಂದ ಸ್ವಾಮೀಜಿಯವರ ಜನ್ಮದಿನದಂದು ಅನ್ನದಾನವನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ. ನಮಗೆ ಶಂಭುನಾಥ ಸ್ವಾಮೀಜಿ ಸಿಕ್ಕಿರುವುದು ಬಹಳ ಪುಣ್ಯ. ಬಾಲಗಂಗಾಧರ ಮಹಾಸ್ವಾಮೀಜಿ ಆಶೀರ್ವಾದದಿಂದ ಹೊರ ರಾಜ್ಯ, ಜಿಲ್ಲೆಗಳಲ್ಲಿ ಲಕ್ಷಾಂತರ ಮಕ್ಳಳಿಗೆ ವಿದ್ಯಾದಾನ, ಅನ್ನ ದಾಸೋಹವನ್ನು ನಡೆಸಿಕೊಂಡು ಬರಲಾಗುತ್ತಿದೆ’ ಎಂದು ಹೇಳಿದರು.
ಒಕ್ಕಲಿಗರ ಸಂಘದ ಅಧ್ಯಕ್ಷರಾದ ಜಿ.ಎಲ್. ಮುದ್ದೇಗೌಡ ಮಾತನಾಡಿ, ಜಿಲ್ಲೆಗೆ ಮಹಾ ಸ್ವಾಮೀಜಿಯ ಪಾದ ಸ್ಪರ್ಶದಿಂದ ಅನೇಕ ಸತ್ಕಾರ್ಯಗಳು ಹಾಸನದಲ್ಲಿ ನಡೆದಿದೆ. ಶಾಲಾ, ಕಾಲೇಜುಗಳನ್ನು ತೆರೆಯಲಾಯಿತು. ಹಳ್ಳಿಯ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸಹಾಯ ಮಾಡಿದ್ದಾರೆ. ವಂಚಿತರಾದಂತಹ ಸಮುದಾಯವನ್ನು ಮೇಲಕ್ಕೆ ಎತ್ತಿದ್ದಾರೆ. ಮಹಾಸ್ವಾಮೀಜಿಯವರು ಭೇದ ಮಾಡದೇ ಎಲ್ಲಾ ಸಮುದಾಯವನ್ನು ಒಂದೇ ರೀತಿ ಕಂಡಿದ್ದಾರೆ ಎಂದರು.ದೇಶ ವಿದೇಶಗಳಲ್ಲಿ ಆದಿ ಚುಂಚನಗಿರಿ ಮಠ ತೆರೆದು ಜ್ಞಾನವನ್ನು ಹರಡಿದ್ದಾರೆ. ಒಕ್ಕಲಿಗರ ಸಂಘದಿಂದ ನಾಲ್ಕು ವಿದ್ಯಾರ್ಜನೆ ಹಾಗೂ ೮೦೦ ಜನ ವಿದ್ಯಾರ್ಥಿನಿಯರು ವಸತಿಯಲ್ಲಿರಬೇಕಾದರೆ ಮಹಾಸ್ವಾಮೀಜಿ ಆಶೀರ್ವಾದವೇ ಕಾರಣ. ಮಹಾನುಭಾವರ ಕೃಪೆಯಿಂದ ಒಕ್ಕಲಿಗರ ಸಂಘದ ಮುಂದುವರೆದಿದೆ. ಇನ್ನು ಶ್ರೀ ಶಂಭುನಾಥ ಸ್ವಾಮೀಜಿಯವರು ಪಾದಾರ್ಪಣೆಯಾದಮೇಲೆ ಈ ಮಠ ಅಭಿವೃದ್ಧಿ ಕಂಡಿದೆ ಎಂದು ಶ್ಲಾಘಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ೭೦ ಜನ ಪೀಠಾಧ್ಯಕ್ಷರು ಬಂದರೂ ಕೂಡ ನಾಡಿಗೆ ಅಷ್ಟೊಂದು ಗೋಚರವಾಗಿರಲಿಲ್ಲ. ೭೧ನೇ ಪೀಠಾಧ್ಯಕ್ಷರಾಗಿ ಬಂದಂತಹ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಶ್ರದ್ಧೆಯಿಂದ ಈ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಬಹುವಿಧ ದಾಸೋಹಿಗಳಾಗಿ ನಾಡಿಗೆ ನೀಡಿರುವ ಕೊಡುಗೆ ಮಹತ್ತರವಾದುದು ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್, ನಗರಸಭೆ ಸದಸ್ಯ ಎಂ. ಚಂದ್ರೇಗೌಡ, ಎಚ್.ವಿ. ಚಂದ್ರೇಗೌಡ, ಕುವೆಂಪು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಿ.ಈ. ಶಿವರಾಮೇಗೌಡ, ಜೆಡಿಎಸ್ ಜಿಲ್ಲಾ ವಕ್ತಾರ ಹೊಂಗೆರೆ ರಘು, ನಾಗಮ್ಮ ಹಾಜರಿದ್ದರು.
ಮಾಜಿ ಶಾಸಕ ದಿವಂಗತ ಎಚ್.ಎಸ್. ಪ್ರಕಾಶ್ ಕುಟುಂಬದ ಸದಸ್ಯರು ಹಾಗೂ ಮಠದ ಸದ್ಭಕ್ತರು ಹಾಸನದ ಹೇಮಾವತಿ ಪ್ರತಿಮೆ ಬಳಿ ಬಾಲಗಂಗಾಧರನಾಥ ಸ್ವಾಮೀಜಿ ಭಾವಚಿತ್ರವನ್ನಿಟ್ಟು ನಮನ ಅರ್ಪಿಸಿ ನಂತರ ಸಾವಿರಾರು ಜನರಿಗೆ ಅನ್ನದಾನ ಮಾಡಿದರು.