ಡಿಕೆಸು ಸೋಲಿಸುವವರೆಗೂ ಬಾಲಕೃಷ್ಣ ವಿರಮಿಸಲ್ಲ

KannadaprabhaNewsNetwork |  
Published : Feb 01, 2024, 02:04 AM IST
31ಕೆಆರ್ ಎಂಎನ್ 7.ಜೆಪಿಜಿ ಮಾಜಿ ಶಾಸಕ ಎ.ಮಂಜುನಾಥ್. | Kannada Prabha

ಸಾರಾಂಶ

ಕುದೂರು: ಹಾಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಸೋಲಿಸುವ ತನಕ ಶಾಸಕ ಎಚ್.ಸಿ.ಬಾಲಕೃಷ್ಣರವರು ವಿರಮಿಸದಂತೆ ಕಾಣುತ್ತಿಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು.

ಕುದೂರು: ಹಾಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಸೋಲಿಸುವ ತನಕ ಶಾಸಕ ಎಚ್.ಸಿ.ಬಾಲಕೃಷ್ಣರವರು ವಿರಮಿಸದಂತೆ ಕಾಣುತ್ತಿಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು.

ನಮ್ಮ ಗ್ಯಾರಂಟಿಗಳು ಮುಂದುವರೆಯಬೇಕು ಅಂತಿದ್ರೆ ಎಂಪಿ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತ ನೀಡಿ ಅಕ್ಷತೆ ಬೇಕು ಅಂತಿದ್ರೆ ಬಿಜೆಪಿಗೆ ಮತ ನೀಡಿ ಎಂಬ ಎಚ್.ಸಿ.ಬಾಲಕೃಷ್ಣರವರ ಹೇಳಿಕೆ ಪ್ರತಿಕ್ರಿಯಿಸಿದ ಮಂಜುನಾಥ್, ಬಾಲಕೃಷ್ಣರವರ ಸಂಪೂರ್ಣ ರಾಜಕೀಯ ಬದುಕೇ ಇಂತಹ ಬೆದರಿಕೆ, ಬ್ಲಾಕ್ ಮೇಲ್ ಗಳಲ್ಲಿ ಬಂದಿದೆ ಎಂದು ಟೀಕಿಸಿದರು.

ಜನರನ್ನು ಹೀಗೆ ಹೆದರಿಸಿಕೊಂಡು ಮತ ಕೇಳುವುದು ಬಾಲಕೃಷ್ಣರವರ ನಿಜ ಪ್ರವೃತ್ತಿಯಾಗಿದೆ. ಇವರು ಲೋಕಸಭಾ ಚುನಾವಣೆಗೆ ಇಂತಹ ಒಂದೊಂದು ಭಾಷಣ ಮಾಡುವಾಗಲೂ ಡಿ.ಕೆ.ಸುರೇಶ್ ಅವರಿಗೆ ಹತ್ತತ್ತು ಸಾವಿರ ಮತಗಳು ನಮಗೆ ವರದಾಯಕವಾಗುತ್ತದೆ ಎಂದು ಹೇಳಿದರು.

ಎಚ್.ಸಿ.ಬಾಲಕೃಷ್ಣರವರ ಇಂತಹ ಒಂದು ಹೇಳಿಕೆ ಇಡೀ ರಾಜ್ಯದ ಎಲ್ಲಾ ಶಾಸಕರನ್ನು ಜನರು ಪ್ರಶ್ನಿಸುತ್ತಾರೆ. ಜನತಾ ಜನಾರ್ಧನ ಎಂದು ಬಾಯಲ್ಲಿ ಹೇಳಿದರೆ ಮಾತ್ರ ಸಾಲದು. ಆ ಜನಾರ್ಧನನನ್ನು ಹೀಗೆ ಹೆದುರಿಸುವ ಕೆಲಸ ಮಾಡಬಾರದು. ಹೀಗೆ ಮಾತನಾಡಿದರೆ ನಾವು ಪಡೆಯುತ್ರಿರುವುದು ಸರ್ಕಾರಕ್ಕೋ ಅಥವಾ ಕಾಂಗ್ರೆಸ್ ಪಕ್ಷದ ಹಂಗೋ ಎಂದು ಮತದಾರರು ಕಸಿವಿಸಿಗೆ ಒಳಗಾಗುತ್ತಾರೆ ಎಂದರು.

ಜನರಿಂದಲೂ ಆಕ್ರೋಶ:

ಶ್ರೀಗಿರಿಪುರ ಗ್ರಾಮದಲ್ಲಿ ಸಂಸದ ಶಾಸಕರ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ಯಾರಂಟಿಗಳು ಬೇಕೋ? ಅಕ್ಷತೆ ಬೇಕೋ? ಗ್ಯಾರಂಟಿಗಳು ಮುಂದುವರೆಯಬೇಕಿದ್ದರೆ ಕಾಂಗ್ರೆಸ್ಸಿಗೆ ಮತ ಹಾಕಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ರವರು ಅಷ್ಟಕ್ಕೇ ಸುಮ್ಮನಾಗದೆ ಈ ವಿಷಯದ ಕುರಿತು ಮುಖ್ಯಮಂತ್ರಿಯವರ ಬಳಿ ಮಾತನಾಡಿದ್ದೇವೆ. ಗೆಲ್ಲಿಸದೇ ಹೋದರೆ ಉಚಿತ ಗ್ಯಾರಂಟಿಗಳನ್ನು ನಿಲ್ಲಿಸಬೇಕು ಎಂದು ಹೇಳಿದ್ದೇವೆ ಎಂಬ ಮಾತು ಕೇಳುತ್ತಿದ್ದಂತೆ ಸಭೆಯಲ್ಲಿಯೇ ಜನರು ಬೇಸರ ವ್ಯಕ್ತಪಡಿಸಿದರು.

ಗ್ರಾಮಸ್ಥ ಗಂಗಣ್ಣ ಮಾತನಾಡಿ, ಅಯೋಧ್ಯೆ ರಾಮ ನಮ್ಮ ನಂಬಿಕೆ, ಅಲ್ಲಿಂದ ಬರುವ ಅಕ್ಷತೆ ನಮಗೆ ಪವಿತ್ರವಾದದ್ದು. ನಮ್ಮ ಮತ ಪಡೆದು ಇಂದು ಶಾಸಕರು ಹೀಗೆ ಮಾತನಾಡುತ್ತಿರುವುದು ಸರಿಯಲ್ಲ. ಕರ್ನಾಟಕ ಈ ಹಿಂದಿನಿಂದಲೂ ಒಂದು ಸಂಪ್ರದಾಯ ಪಾಲಸಿಕೊಂಡು ಬಂದಿದೆ ರಾಜ್ಯ ಸರ್ಕಾರಕ್ಕೆ ಮತ ಹಾಕಿದ ಜನರೇ ಕೇಂದ್ರ ಸಕರ್ಾರದ ಆಯ್ಕೆಗೆ ಮನಸ್ಸು ಬದಲಿಸಿ ಹಾಕುತ್ತೇವೆ. ಅಂತಹುದರಲ್ಲಿ ಜನರ ಮೇಲೆ ಹೀಗೆ ಬ್ಲಾಕ್ ಮೇಲ್ ತಂತ್ರ ಬಳಸಬಾರದು. ಇದು ಅವರಿಗೆ ಮುಂದಿನ ಚುನಾವಣೆಯಲ್ಲಿ ಮುಳುಗುನೀರು ತರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.31ಕೆಆರ್ ಎಂಎನ್ 7.ಜೆಪಿಜಿ

ಮಾಜಿ ಶಾಸಕ ಎ.ಮಂಜುನಾಥ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!